ನಟ ರಜನೀಕಾಂತ್ ಅವರು ಏನಿದ್ದರೂ ಮಾಜಿ ಸೂಪರ್‌ಸ್ಟಾರ್ ಅಷ್ಟೇ, ಹಾಲಿ ಅಲ್ಲ ಎನ್ನುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ ರಾಜಕಾರಣಿ ಸೀಮನ್
ಹಲವು ದಶಕಗಳವರೆಗೆ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿಯೇ 'ಸೂಪರ್‌ಸ್ಟಾರ್' ಎಂದೇ ಖ್ಯಾತಿ ಪಡೆದಿರುವ ನಟನೆಂದರೆ ಅದು ರಜನೀಕಾಂತ್. ಆದರೆ ಅವರ 'ಸೂಪರ್‌ಸ್ಟಾರ್' ಪಟ್ಟವನ್ನು ರಾಜಕಾರಣಿಯೊಬ್ಬರು ಕಿತ್ತುಕೊಂಡಿದ್ದು, ಇದೀಗ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಅಭಿಮಾನಿಗಳಿಗೆ ಇದು ನುಂಗಲಾಗದ ತುತ್ತಾಗಿದೆ.
ನಾಮ್ ತಮಿಳರ್ ಪಕ್ಷದ ಸಂಚಾಲಕ ಸೀಮನ್ ಅವರು, ರಜನೀಕಾಂತ್ ಹಾಲಿ ಸೂಪರ್‌ಸ್ಟಾರ್ (Super Star) ಅಲ್ಲ ಎಂದಿದ್ದಾರೆ. ರಜನಿ ಅವರನ್ನು ಸೂಪರ್‌ಸ್ಟಾರ್ ಎಂದು ಕರೆಯುತ್ತಿರುವವರ ಮೇಲೆ ಕಿಡಿ ಕಾರಿರುವ ಸೀಮನ್, ಯಾವುದೇ ಕಾರಣಕ್ಕೂ ಇವರೇ ಈ ಪಟ್ಟದಲ್ಲಿ ಮುಂದುವರಿಯಬೇಕು ಎನ್ನುವುದು ಸರಿಯಲ್ಲ. ಬದಲಿಗೆ ನಿಜವಾಗಿ ಸೂಪರ್‌ಸ್ಟಾರ್ ಎನ್ನಬೇಕಾದದ್ದು ನಟ ವಿಜಯ್ಗೆ ಎಂದಿದ್ದಾರೆ.
ಚಿರಂಜೀವಿ ಪುತ್ರಿ ಬಾಳಲ್ಲಿ ಮೂರನೆಯವ ಎಂಟ್ರಿ? ಕುತೂಹಲ ಮೂಡಿಸಿದ ಇನ್ಸ್ಟಾ ಪೋಸ್ಟ್
ಅಷ್ಟಕ್ಕೂ ಆಗಿದ್ದೇನೆಂದರೆ, ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನ ಸಿನಿಮಾ ಪತ್ರಕರ್ತ ಬಿಸ್ಮಿ ಎನ್ನುವವರು ರಜನೀಕಾಂತ್ ಅವರ ಬಗ್ಗೆ ಹೇಳುತ್ತಿರುವಾಗ 'ಮಾಜಿ ಸೂಪರ್ ಸ್ಟಾರ್ ರಜನೀಕಾಂತ್' ಎಂದಿದ್ದಾರೆ. ಇದು ಅವರ ಅಭಿಮಾನಿಗಳನ್ನು ಕೆರಳಿಸಿದೆ. ಮಾಜಿ ಎಂಬ ಶಬ್ದ ಕೇಳುತ್ತಲೇ ಅಭಿಮಾನಿಗಳು ಆ ಪತ್ರಕರ್ತನಿಗೆ ಮುತ್ತಿಗೆ ಹಾಕಿ ಅಲ್ಲಿಯೇ ಜಗಳ ಶುರು ಮಾಡಿದ್ದರು. ಇದು ಕೆಲ ಸಮಯ ಜಟಾಪಟಿಗೆ ಕಾರಣವಾಗಿತ್ತು.
ಪತ್ರಕರ್ತ ಬಿಸ್ಮಿ ಅವರನ್ನು ಸುತ್ತುವರಿದು ನಡೆಸಿದ ಗಲಾಟೆ ಭಾರಿ ಸುದ್ದಿಯಾಗುತ್ತಲೇ ಈ ಗಲಾಟೆಯನ್ನು ನಾಮ್ ತಮಿಳರ್ ಪಕ್ಷದ ಸಂಚಾಲಕ ಸೀಮನ್ (Seeman) ಖಂಡಿಸಿದ್ದಾರೆ. ಈ ಕುರಿತು ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅದೀಗ ಮತ್ತಷ್ಟು ಸಂಚಲನ ಸೃಷ್ಟಿಸಿದೆ.
ಸೀಮನ್ ಅವರು ಹೇಳಿದ್ದೇನೆಂದರೆ, 'ರಜನೀಕಾಂತ್ ಅವರು ಹಿಂದೊಮ್ಮೆ ಸೂಪರ್‌ಸ್ಟಾರ್ ಇದ್ದಿರಬಹುದು. ಆದರೆ ಆ ಪಟ್ಟ ಈಗ ಕಳಚಿದೆ. ಈಗ ಏನಿದ್ದರೂ ಸೂಪರ್‌ಸ್ಟಾರ್ ಆಗಿರುವುದು ನಟ ವಿಜಯ್ ಅವರೇ. ಬಿಸ್ಮಿ ಹೇಳಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಜಿ ಆಗಿದ್ದರೆ ಅವರನ್ನು ಮಾಜಿ ಎಂದೇ ಅಭಿಮಾನಿಗಳೂ ಒಪ್ಪಿಕೊಳ್ಳಬೇಕು' ಎಂದಿದ್ದಾರೆ.
ರಾಘವೇಂದ್ರ ಸ್ವಾಮಿ ಶಕ್ತಿಯ ಬಗ್ಗೆ ರಜನಿಕಾಂತ್ ಹೇಳಿದ್ದೇನು?: ರಿಷಬ್'ಗೆ ತಲೈವಾ ಕಿವಿಮಾತು
'ನಟ ವಿಜಯ್ ಅವರನ್ನು ತಮಿಳಿನ ಜನರು ಪ್ರೀತಿಯಿಂದ ಪೂಜಿಸುತ್ತಿದ್ದಾರೆ. ಅವರನ್ನು ತಮ್ಮ ಹೃದಯದಲ್ಲಿ ಇರಿಸಿಕೊಂಡಿದ್ದಾರೆ. ಆದರೆ ಈ ಸತ್ಯವನ್ನು ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿನಾಕಾರಣ ಪತ್ರಕರ್ತನ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ. ಈಗ ರಜನೀಕಾಂತ್ ಏನಿದ್ದರೂ ಮಾಜಿ ಸೂಪರ್‌ಸ್ಟಾರ್ ಅಷ್ಟೇ'' ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಇದು ರಜನೀಕಾಂತ್ (Rajinikanth) ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿದೆ.
ಇದಕ್ಕೆಲ್ಲಾ ಕಾರಣ ಪತ್ರಕರ್ತ (Journalist) ಬಿಸ್ಮಿ ಎಂದು ಅಭಿಮಾನಿಗಳು ಪತ್ರಕರ್ತ ಬಿಸ್ಮಿ ಅವರ ಕಚೇರಿಗೂ ಮುತ್ತಿಗೆ ಹಾಕಿ ವಾಗ್ವಾದ ನಡೆಸಿದ್ದಾರೆ. ಈ ಗಲಾಟೆ ಅಲ್ಲಿಗೇ ತಣ್ಣಗಾದರೂ ತಮ್ಮ ಆರಾಧ್ಯ ದೈವ ರಜನೀ ಅವರನ್ನು ಮಾಜಿ ಸೂಪರ್‌ಸ್ಟಾರ್ ಮಾಡಿರುವುದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ.
ಅಭಿಮಾನಿಗಳು ಈ ಮಾತನ್ನು ಇಲ್ಲಿಗೆ ಬಿಡುತ್ತಿದ್ದರೇನೋ. ಆದರೆ ಇಷ್ಟಕ್ಕೆ ಸುಮ್ಮನಾಗದ ರಾಜಕಾರಣಿ ಸೀಮನ್ ಅವರು, 'ಯಾರಿಗೂ ಉಚ್ಛ ನಚ್ಚರಿತ್ತಮ್ (ಸೂಪರ್ ಸ್ಟಾರ್) ಪಟ್ಟ ಶಾಶ್ವತ ಅಲ್ಲ. ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ತಾವು ಮೆಚ್ಚುವ ನಟ ಶಾಶ್ವತವಾಗಿ ಸೂಪರ್‌ಸ್ಟಾರ್ ಆಗಿರಬೇಕು ಎನ್ನುವುದು ಅರ್ಥಹೀನ. ಕಾಲ ಬದಲಾದಂತೆ ಎಲ್ಲಾ ಪಟ್ಟಗಳೂ ಬದಲಾಗುತ್ತವೆ. ಚಿತ್ರ ತಾರೆಯರ ಮೇಲೆ ಜನರ ದೃಷ್ಟಿಕೋನ ಬದಲಾಗುತ್ತಲೇ ಇರುತ್ತದೆ. ಹೊಸಬರು ಬಂದಾಗ ಅವರಿಗೆ ಪಟ್ಟ ಬಿಟ್ಟುಕೊಡಬೇಕು. ಅದನ್ನು ಬಿಟ್ಟು ಈ ರೀತಿ ಕಿತ್ತಾಟ ಮಾಡುವುದು ಸರಿಯಲ್ಲ. ಹೀಗೆ ಕಿತ್ತಾಡುವುದನ್ನು ಖುದ್ದು ರಜನೀಕಾಂತ್ ಅವರೂ ಒಪ್ಪಿಕೊಳ್ಳುವುದಿಲ್ಲ' ಎನ್ನುವ ಮೂಲಕ ಅಭಿಮಾನಿಗಳ ಆಕ್ರೋಶದ ಕಿಡಿಗೆ ತುಪ್ಪ ಸುರಿದಿದ್ದಾರೆ.
ಅಂದಹಾಗೆ, ಸೂಪರ್‌ಸ್ಟಾರ್ ಪಟ್ಟ ರಜನೀಕಾಂತ್ ಅವರಿಗಿಂತ ಮುಂಚಿತವಾಗಿ ತ್ಯಾಗರಾಜ ಭಾಗವತರಿಗೆ ಇತ್ತು. ನಂತರ ಎಂಜಿಆರ್ಗೆ ಈ ಪಟ್ಟ ಬಂತು. ಅವರು ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸೂಪರ್‌ಸ್ಟಾರ್ ಪಟ್ಟ ರಜನೀಕಾಂತ್ ಅವರ ಹೆಗಲಿಗೇರಿತು. ಈಗ ವಿಜಯ್ ಅಭಿಮಾನಿಗಳು ವಿಜಯ್ (Vijay) ಅವರೇ ಸೂಪರ್‌ಸ್ಟಾರ್ ಎನ್ನುತ್ತಿದ್ದು, ಸೀಮನ್ ಇದಕ್ಕೆ ಪುಷ್ಟಿ ನೀಡುತ್ತಿದ್ದಾರೆ. ರಜನೀಕಾಂತ್ ಅವರ 'ಉಚ್ಛ ನಚ್ಚರಿತ್ತಮ್' ಪಟ್ಟ ಕಿತ್ತುಕೊಂಡಿದ್ದಾರೆ.
திரைத்துறையின் உச்ச நட்சத்திரம் குறித்துக் கருத்துத் தெரிவித்ததற்காக பத்திரிக்கையாளரை மிரட்ட முனைவதா?https://t.co/XiBxTDHIMK pic.twitter.com/UIqpAViRXd
— சீமான் (@SeemanOfficial)