
ಕಾಲಿವುಡ್ ಸ್ಟಾರ್ ಧನುಷ್ ಪತ್ನಿಯಿಂದ ದೂರ ಆಗಿ ವರ್ಷವೇ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಧನುಷ್ ಕಳೆದ ವರ್ಷ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಧನುಷ್ ವಿಚ್ಛೇದನದ ಬಳಿಕ ಸಾಕಷ್ಟು ವದಂತಿಗಳು ವೈರಲ್ ಆಗಿದೆ. ಅನೇಕ ನಟಿ.ರ ಜೊತೆ ಧನುಷ್ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೆಸರು ಕೂಡ ಇದೆ. ಶ್ರುತಿ ಹಾಸನ್ ಜೊತೆ ಅಫೇರ್ ಇರುರುವ ಕಾರಣ ಪತ್ನಿಯಿಂದ ದೂರ ಆಗಿದ್ದಾರೆ ಎನ್ನುವ ಮಾತು ವೈರಲ್ ಆಗಿತ್ತು. ಅಂದಹಾಗೆ ಶ್ರುತಿ ಮತ್ತು ಧನುಷ್ ಇಬ್ಬರೂ 3 ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಧನುಷ್ ಮಾಜಿ ಪತ್ನಿ ಐಶ್ವರ್ಯಾ ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಬಳಿಕ ಇಬ್ಬರು ತುಂಬಾ ಕ್ಲೋಸ್ ಆಗಿದ್ದರು. ಅದೇ ಬಾಂಧವ್ಯವೀಗ ಇಬ್ಬರ ಗಾಸಿಪ್‌ಗೆ ಕಾರಣವಾಗಿದೆ.
ಶ್ರುತಿ ಹಾಸನ್ ಕಾರಣಕ್ಕೆ ಧನುಷ್ ಮತ್ತು ಐಶ್ವರ್ಯಾ ಸಂಬಂಧ ಹಾಳಾಗಿದೆ, ವಿಚ್ಛೇದನಕ್ಕೆ ಕಾರಣನೇ ಶ್ರುತಿ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಟಿ ಶ್ರುತಿ ಹಾಸನ್ ಸದ್ಯ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಮತ್ತು ಧನುಷ್ ಸಂಬಂಧವನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರುತಿ, "ನನ್ನ ಬಗ್ಗೆ 10,000 ವದಂತಿಗಳು ಕೇಳಿ ಬರುತ್ತವೆ ಎಂದು ನನಗೆ ತಿಳಿದಿದೆ. ನನಗೆ ಯಾರೊಂದಿಗಾದರೂ ಅಪರೂಪದ ಸಂಪರ್ಕವಾಗಿದೆ. ಧನುಷ್ ಒಬ್ಬ ಉತ್ತಮ ಸ್ನೇಹಿತ. ಏಕೆಂದರೆ ನಾನು 3 ಸಿನಿಮಾದಲ್ಲಿ ಆ ಪಾತ್ರವನ್ನು ಮಾಡಬಹುದೆಂದು ಯಾರೂ ಭಾವಿಸದಿದ್ದಾಗ, ಅವರು ನನ್ನೊಂದಿಗೆ ನಿಂತರು ಮತ್ತು ನಾನು ಅದನ್ನು ಮಾಡಬಹುದು ಎಂದು ಹೇಳಿದರು' ಎಂದು ಹೇಳಿದ್ದಾರೆ.
RCB vs CSK ಮ್ಯಾಚ್ ನೋಡಿದ ಶಿವಣ್ಣ- ಧನುಷ್; ವೈರಲ್ ಫೋಟೋಗಳು
'ಅವರು ಅತ್ಯುತ್ತಮ ಕಲಾವಿದರೂ ಹೌದು. ನನ್ನ ಮತ್ತು ಧನುಷ್ ಸ್ನೇಹದ ಬಗ್ಗೆ ಸಮರ್ಥನೆ ನೀಡುವ ಆಗತ್ಯವಿಲ್ಲ. ನನ್ನ ಬುಡಕ್ಕೆ ಮೈಕ್ರೋಚಿಪ್ ಹಾಕಿ, ನನ್ನನ್ನು ಅನುಸರಿಸಿ ಎಂದು ನಾನು ಜನರಿಗೆ ಹೇಳಲು ಸಾದ್ಯವಿಲ್ಲ. ಅವರು ನನ್ನ ಉತ್ತಮ ಸ್ನೇಹಿತ. ಅವರು ಯಾವಾಗಲೂ ಕಲಾತ್ಮಕವಾಗಿ ನನಗೆ ಸಹಾಯ ಮಾಡಿದ್ದಾರೆ' ಎಂದು ಶ್ರುತಿ ನಟ ಧನುಷ್ ಸ್ನೇಹವನ್ನು ಕೊಂಡಾಡಿದರು.
Shruti Haasan: ತೆಳ್ಳಗಿನ ಸೀರೆ, ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಶೂಟ್ ಮಾಡಿದ್ರು; ನೋವು ತೋಡಿಕೊಂಡ ನಟಿ
ಧನುಷ್ ಮತ್ತು ಐಶ್ವರ್ಯ 2004 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ದಾಂಪತ್ಯಕ್ಕೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. 18 ವರ್ಷಗಳ ವೈವಾಹಿಕ ಜೀವನ ಆನಂದಿಸಿದ್ದ ಈ ಜೋಡಿ ಕಳೆದ ವರ್ಷ ವಿಚ್ಛೇದನ ನೀಡುವ ಮೂಲಕ ಇಬ್ಬರೂ ದೂರ ದೂರ ಆಗಿ ಅಭಿಮಾನಿಗಳಿಗೆ ಶಾಕ್ ನೀಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.