'ಅರ್ಧಾಂಗಿ'ಯಲ್ಲಿ ಪ್ರಿಯಾಂಕಾ ಉಪೇಂದ್ರ; ಹೊಸ ಧಾರಾವಾಹಿ ಬಗ್ಗೆ ನಟಿ ಹೇಳಿದ್ದೇನು?

Published : May 21, 2022, 05:25 PM IST
'ಅರ್ಧಾಂಗಿ'ಯಲ್ಲಿ ಪ್ರಿಯಾಂಕಾ ಉಪೇಂದ್ರ; ಹೊಸ ಧಾರಾವಾಹಿ ಬಗ್ಗೆ ನಟಿ ಹೇಳಿದ್ದೇನು?

ಸಾರಾಂಶ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅರ್ಧಾಂಗಿ ಎನ್ನುವ ಹೊಸ ಧಾರಾವಾಹಿ ಬರ್ತಿದ್ದು ಇದರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟಿ ಪ್ರಿಯಾಂಕಾ ಉಪೇಂದ್ರ(Priyanka Upendra) ಕಾಣಿಸಿಕೊಂಡಿದ್ದಾರೆ. ಸದ್ಯ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು ಇದರಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಪ್ರಿಯಾಂಕಾ ಉಪೇಂದ್ರ ಧಾರಾವಾಹಿಗೆ ಎಂಟ್ರಿ ಕೊಟ್ರ ಅಂತ ಅಚ್ಚರಿಯಾಗುತ್ತಿದೆಯಾ? ಪ್ರಿಯಾಂಕಾ ಅರ್ಧಾಂಗಿ ಧಾರಾವಾಹಿಯ ರಾಯಭಾರಿಯಾಗಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೊಸ ಧಾರಾವಾಹಿಗಳು(Serial) ಬರುತ್ತವೆ, ಅನೇಕ ಧಾರಾವಾಹಿಗಳು ಪ್ರಸಾರ ನಿಲ್ಲಿಸುತ್ತವೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಬರ್ತಿದೆ. ಇತ್ತೀಚಿಗಷ್ಟೆ ಸ್ಟಾರ್ ಸುವರ್ಣವಾಹಿನಿಯಲ್ಲಿ ಒಂದು ಸೀರಿಯಲ್ ಪ್ರಸಾರ ನಿಲ್ಲಿಸಲಿದೆ ಎನ್ನುವ ಸುದ್ದಿ ಕೇಳಿದ್ರಿ, ಇದೀಗ ಹೊಸ ಧಾರಾವಾಹಿ ಬರ್ತಿದೆ. ಸ್ಟಾರ್ ಪತ್ನಿಯೇ ಗಂಡನನ್ನು ತಾಯಿಯಂತೆ ಕಾಯುವ ಕಥೆಯುಳ್ಳ ಹೊಸ ಧಾರಾವಾಹಿಯ ಹೆಸರು ಅರ್ಧಾಂಗಿ. ಮೇ 23 ರಿಂದ ಸೋಮವಾರದಿಂದ ಶನಿವಾರ ರಾತ್ರಿ 7ಕ್ಕೆ ಪ್ರಸಾರವಾಗಲಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟಿ ಪ್ರಿಯಾಂಕಾ ಉಪೇಂದ್ರ(Priyanka Upendra) ಕಾಣಿಸಿಕೊಂಡಿದ್ದಾರೆ. ಸದ್ಯ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು ಇದರಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ಪ್ರಿಯಾಂಕಾ ಉಪೇಂದ್ರ ಧಾರಾವಾಹಿಗೆ ಎಂಟ್ರಿ ಕೊಟ್ರ ಅಂತ ಅಚ್ಚರಿಯಾಗುತ್ತಿದೆಯಾ? ಪ್ರಿಯಾಂಕಾ ಅರ್ಧಾಂಗಿ ಧಾರಾವಾಹಿಯ ರಾಯಭಾರಿಯಾಗಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕ ದಿಗಂತ್‌ಗೆ ಆಕ್ಸಿಡೆಂಟ್‌ನಲ್ಲಿ ತಲೆಗೆ ಪೆಟ್ಟು ಬಿದ್ದು 8 ವರ್ಷದ ಮಗುವಿನಂತಾಗಿರುತ್ತಾನೆ. ಆತನನ್ನು ಮದುವೆಯಾಗುವ ಅದಿತಿ ಆತನಿಗೆ ಆಸರೆಯಾಗಿ ಧೈರ್ಯ ತುಂಬುವ ಹಿನ್ನೆಲೆ ಧಾರಾವಾಹಿಯಾಗಿದೆ. ಧಾರಾವಾಹಿಗೆ ಎಮ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

ಸ್ಟಾರ್‌ ಸುವರ್ಣದಲ್ಲಿ ಹೊಸ ಶೋ ಅರ್ಧಾಂಗಿ!

    ಅಂದಹಾಗೆ ಈ ಧಾರಾವಾಹಿಯ ರಾಯಭಾರಿಯಾಗಿವ ಪ್ರಿಯಾಂಕಾ ತಾನು ಅರ್ಧಾಂಗಿಯಾಗಿ ಹೇಗೆ ನಿಭಾಯಿಸಿದರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಕೋಲ್ಕತ್ತಾ ಮೂಲಕ ನಟಿ ಪ್ರಿಯಾಂಕಾ ಕರ್ನಾಟಕದ ಸೊಸೆಯಾಗಿ ಅನೇಕ ಚಾಲೆಂಜ್ ಗಳನ್ನು ಎದುರಿಸಿದ್ದಾರೆ. ಉಪೇಂದ್ರ ಅವರನ್ನು ಮದುವೆಯಾದ ಬಳಿಕ ಕನ್ನಡ ಕಲಿತು, ಇಲ್ಲಿನ ಸಂಸ್ಕೃತಿ ಅಳವಡಿಸಿಕೊಂಡು, ಹಬ್ಬ, ಅಡುಗೆ ಹೀಗೆ ಪ್ರತಿಯೊಂದು ವಿಚಾರವನ್ನು ಪ್ರಿಯಾಂಕಾ ಕಲಿತಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸುವ ಪ್ರಿಯಾಂಕಾ ಅತ್ತೆ-ಮಾವನ ಬೆಂಬಲ ಕೂಡ ಇತ್ತು ಎಂದಿದ್ದಾರೆ. ಜೀವನದಲ್ಲಿ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ ಎಂದು ರಿಯಲ್ ಸ್ಟಾರ್ ಪತ್ನಿ ಹೇಳಿದ್ದಾರೆ.

    ಕಿರುತೆರೆ ಪ್ರೇಕ್ಷಕರಿಗೆ ಬೇಸರ ಸುದ್ದಿ; ಪ್ರಸಾರ ನಿಲ್ಲಿಸುತ್ತಿದೆ ಸ್ಟಾರ್ ಸುವರ್ಣ ವಾಹಿನಿಯ ಮತ್ತೊಂದು ಧಾರಾವಾಹಿ

    ಪ್ರಸಾರ ನಿಲ್ಲಿಸುತ್ತಿದೆ ಸಂಘರ್ಷ ಧಾರಾವಾಗಿ

    ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸ್ಟಾರ್ ಸುವರ್ಣ(Star Suvarna) ವಾಹಿನಿಯಲ್ಲಿ ಪಯಣ ಮುಗಿಸಿದ ಧಾರಾವಾಹಿಗಳ ಸಂಖ್ಯೆ ಹೆಚ್ಚಿಸಿದೆ. ಅದರಲ್ಲಿ ಇಂತಿ ನಿಮ್ಮ ಆಶಾ, ಮತ್ತೆ ವಸಂತ, ಜೀವ ಹೂವಾಗಿದೆ ಮತ್ತು ರಾಧೆ ಶ್ಯಾಮ ಹೀಗೆ ಮುಂತಾದ ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿವೆ. ಇದೀಗ ಮತ್ತೊಂದು ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದೆ. ಸಂಘರ್ಷ ಧಾರಾವಾಹಿ. ಸಧ್ಯದಲ್ಲೇ ಸಂಘರ್ಷ ಧಾರಾವಾಹಿ ತನ್ನ ಪಯಣ ಮುಗಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಈ ಬಗ್ಗೆ ವಾಹಿನಿಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
    ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?