ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಕನ್ನಡ ಹಾಡೊಂದಕ್ಕೆ ದನಿಯಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಂಚಿತ್ ಹೆಗ್ಡೆ ಹಾಡಿರುವ ನಿಂಗೆ ಅಲ್ಲವಾ ಹಾಡನ್ನು ಪ್ರಿಯಾ ವಾರಿಯರ್ ಹಾಡಿದ್ದಾರೆ. ಕನ್ನಡದಲ್ಲಿ ಹಾಡಿದ್ದಕ್ಕೆ ಸಂಚಿತ್ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ (Kansanne Bedagi Priya Warrier) ಚೆಂದ ಮಾತ್ರವಿಲ್ಲ. ಅವರ ಧ್ವನಿ ಅಧ್ಬುತವಾಗಿದೆ. ಸೋಶಿಯಲ್ ಮೀಡಿಯಾ (social media) ದಲ್ಲಿ ಹಾಡು ಹೇಳ್ತಾ ಅಭಿಮಾನಿಗಳ ಮನಸ್ಸು ತಣಿಸುವ ಪ್ರಿಯಾ ವಾರಿಯರ್ ಮಲಿಯಾಳಂ ನಟಿ (Malayalam actress). ಈಗ ಕನ್ನಡಿಗರಿಗೆ ಪ್ರಿಯಾ ದುಬಾರಿ ಉಡುಗೊರೆ ನೀಡಿದ್ದಾರೆ. ಕನ್ನಡ ಹಾಡೊಂದಕ್ಕೆ ದನಿಯಾಗಿರುವ ಅವರು, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತ (South India)ದ ಚಿತ್ರಗಳು ಎಂದಾಗ ಟಾಲಿವುಡ್ (Tollywood), ಕಾಲಿವುಡ್ (kollywood) ಬಗ್ಗೆ ಮಾತನಾಡೋರೇ ಹೆಚ್ಚು. ಹಾಗೆ ಅಲ್ಲಿನ ಸಿನಿಮಾ ಹಾಡುಗಳು ಜನರ ಬಾಯಲ್ಲಿ ಬರುತ್ವೆ ವಿನಃ ಕನ್ನಡದ ಹಾಡುಗಳನ್ನು ಕೇಳೋದು ಬಹಳ ಅಪರೂಪ ಎನ್ನುವಂತಾಗಿದೆ. ಅಲ್ಲೋ ಇಲ್ಲೋ ನಾಲ್ಕೈದು ಪರ ರಾಜ್ಯದವರು, ಪರ ದೇಶದವರ ಬಾಯಲ್ಲಿ ಕನ್ನಡ ಮಾತು, ಹಾಡು ಕೇಳಿದ್ರೆ ಕನ್ನಡಿಗರು ಖುಷಿಯಾಗ್ತಾರೆ. ಈಗ ಪ್ರಿಯಾ ವಾರಿಯರ್ ಧ್ವನಿಯಲ್ಲಿ ಕನ್ನಡ ಹಾಡನ್ನು ಕೇಳಿದ ಅಭಿಮಾನಿಗಳ ಕಿವಿ ತಂಪಾಗಿದೆ.
ಕೃಷ್ಣ ಫೋಟೋ ಹಂಚಿಕೊಂಡ ನಾಗಚೈತನ್ಯ ಭಾವಿ ಪತ್ನಿ… ಶೋಭಿತಾ ವಿರುದ್ಧ ಬ್ಯಾಟ್ ಬೀಸಿದ ನೆಟ್ಟಿಗರು
ಸಂಚಿತ್ ಹೆಗ್ಡೆ (Sanchit Hegde) ಹಾಡಿರುವ ನಿಂಗೆ ಅಲ್ಲವಾ ಹಾಡನ್ನು ಪ್ರಿಯಾ ವಾರಿಯರ್ ಹಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕೆಲ ದಿನಗಳ ಹಿಂದೆ ಪ್ರಿಯಾ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗ್ಲೂ ಇದು ವೈರಲ್ ಆಗ್ತಾನೆ ಇದೆ. ಕನ್ನಡಿಗರು ಲೈಕ್ ಒತ್ತುತ್ತಿದ್ದಾರೆ. ಕನ್ನಡ ಹಾಡಿನ ವಿಡಿಯೋ ಹಂಚಿಕೊಂಡಿರುವ ಪ್ರಿಯಾ ವಾರಿಯರ್, ನನಗೆ ಕನ್ನಡ ಓದೋಕೆ, ಮಾತನಾಡೋಕೆ ಬರೋದಿಲ್ಲ. ಆದ್ರೆ ಲಿರಿಕ್ಸ್ ಕೇಳಿ ಯಾಕೂ ಹಾಡದೆ ಇರಲು ಮನಸ್ಸಾಗ್ಲಿಲ್ಲ. ತಪ್ಪಿದ್ದಲ್ಲಿ ಕ್ಷಮಿಸಿ ಎನ್ನುವ ಶೀರ್ಷಿಕೆ ಹಾಕಿದ್ದಾರೆ.
ಪ್ರಿಯಾ ವಾರಿಯರ್ಸ್ ಈ ವಿಡಿಯೋಕ್ಕೆ 2 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ಇದಕ್ಕೆ ಸಂಚಿತ್ ಹೆಗಡೆ ರಿಯಾಕ್ಟ್ ಮಾಡಿದ್ದಾರೆ. ತುಂಬಾ ಚೆನ್ನಾಗಿದೆ ಪ್ರಿಯಾ ಎಂದು ಸಂಚಿತ್ ಹೊಗಳಿದ್ದಾರೆ. ಕನ್ನಡದಲ್ಲಿ ಹಾಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದಿರುವ ಅಭಿಮಾನಿಗಳು, ನಿಮಗೆ ಕನ್ನಡ ತಿಳಿದಿಲ್ಲ, ಮಾತನಾಡೋಕೆ ಬರೋದಿಲ್ಲ ಎನ್ನಲು ಸಾಧ್ಯವೇ ಇಲ್ಲ. ಸ್ವಲ್ಪವೂ ತಪ್ಪಿಲ್ಲದೆ ಹಾಡಿದ್ದೀರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕನ್ನಡ ಕಂಟೆಂಟ್ ಕ್ರಿಯೇಟರ್ಸ್ ಈ ಹಾಡನ್ನು ಬಳಸ್ತಿಲ್ಲ. ಆದ್ರೆ ನೀವು ಕನ್ನಡ ಸಾಂಗ್ ಪ್ರಮೋಟ್ ಮಾಡ್ತಿರೋದು ಖುಷಿ ವಿಷ್ಯ ಎಂದು ಅನೇಕ ಕನ್ನಡಿಗರು ಪ್ರಿಯಾ ಆಯ್ಕೆಗೆ ವೋಟ್ ನೀಡಿದ್ದಾರೆ.
ಪ್ರಿಯಾ ವಾರಿಯರ್ ಕನ್ನಡದ ವಿಷ್ಣು ಪ್ರಿಯಾ (Vishnu Priya) ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್ 4ರಂದು ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಪ್ರಮೋಷನ್ ನಡೆದಿದೆ. ಚಿತ್ರದಲ್ಲಿ ಪ್ರಿಯಾ, ನಟ ಶ್ರೇಯಸ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿಯೇ ಚಿತ್ರದ ಸಾಂಗ್ ಬಿಡುಗಡೆಯಾಗಿ ಎಲ್ಲರ ಮನಸ್ಸು ಗೆದ್ದಿದೆ.
ಮಗಳು ಸಾರಾ ಅಲಿಗೆ ಸೆಕ್ಸ್ ಬಗ್ಗೆ ಹೀಗೆ ಪ್ರಶ್ನೆ ಕೇಳೋದಾ ನಟಿ ಕರೀನಾ ಕಪೂರ್? ನೆಟ್ಟಿಗರು ಗರಂ
ಪ್ರಿಯಾ, ಲವ್ ಹ್ಯಾಕರ್ಸ್ ಮತ್ತು 3 ಮಂಕೀಸ್ ಸಿನಿಮಾದಲ್ಲಿಯೂ ಪ್ರಿಯಾ ವಾರಿಯರ್ ನಟಿಸುತ್ತಿದ್ದಾರೆ. ಪ್ರಿಯಾ ಈಗಾಗಲೇ ಮಲಯಾಳಂ ಮತ್ತು ತೆಲುಗು, ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಒರು ಆಡಾರ್ ಲವ್ ಸಿನಿಮಾದಲ್ಲಿ ಕಣ್ಣು ಮಿಟುಕಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ ಪ್ರಿಯಾ. 2018ರಲ್ಲಿ ಏಕಾಏಕಿ ಪ್ರಸಿದ್ಧಿಗೆ ಬಂದ ಬೆಡಗಿ. ಕಣ್ಸನ್ನೆ ಮೂಲಕವೇ ಕೋಟ್ಯಾಂತರ ಹುಡುಗರ ನಿದ್ರೆ ಕದ್ದಿದ್ದರು. ಪ್ರಿಯಾ ವಾರಿಯರ್, 2018ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇದಾದ್ಮೇಲೆ ಶ್ರೀದೇವಿ ಬಂಗಲೆ ಸಿನಿಮಾದಲ್ಲಿ ನಟಿಸಿರುವ ಪ್ರಿಯಾ, ಚಿತ್ರದ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ. ಫೈನಲ್ಸ್ ಚಿತ್ರದಲ್ಲಿ ನರೇಶ್ ಅಯ್ಯರ್ ಜೊತೆ ನೀ ಮಜವಿಲ್ಲು ಹಾಡನ್ನು ಅವರು ಹಾಡಿದ್ದಾರೆ. ಪ್ರಿಯಾ ವಾರಿಯರ್ ತಮಿಳಿನ ಚೆಕ್ ಚಿತ್ರದಲ್ಲಿ ನಟಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ.