ಸಮಂತಾ ಅಭಿಮಾನಿಗಳಿಗೆ ಬೇಸರದ ವಿಚಾರ: ನಟನೆಯಿಂದ ದೀರ್ಘ ಬ್ರೇಕ್ ಪಡೆಯಲು ಸ್ಯಾಮ್ ನಿರ್ಧಾರ

Published : Jul 05, 2023, 12:33 PM IST
ಸಮಂತಾ ಅಭಿಮಾನಿಗಳಿಗೆ ಬೇಸರದ ವಿಚಾರ: ನಟನೆಯಿಂದ ದೀರ್ಘ ಬ್ರೇಕ್ ಪಡೆಯಲು ಸ್ಯಾಮ್ ನಿರ್ಧಾರ

ಸಾರಾಂಶ

ಸಮಂತಾ ಅಭಿಮಾನಿಗಳಿಗೆ ಬೇಸರದ ವಿಚಾರವಿದು. ಸೌತ್ ಸ್ಟಾರ್ ಸ್ಯಾಮ್ ನಟನೆಯಿಂದ ದೀರ್ಘ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸದ್ಯ ಹಿಂದಿಯ ಸಿಟಾಡೆಲ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ಸಮಂತಾ ನಟಿಸುತ್ತಿದ್ದಾರೆ. ಸಿಟಾಡೆಲ್ ಜೊತೆಗೆ ಸಮಂತಾ ತೆಲುಗಿನಲ್ಲಿ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಸಮಂತಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ನಟನೆಯಿಂ ದೀರ್ಘ ಬ್ರೇಕ್ ಪಡೆಯುತ್ತಿದ್ದಾರೆ ಸಮಂತಾ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಸಮಂತಾ ಆಪ್ತ ಮೂಲಗಳು  ಮಾಹಿತಿ ನೀಡಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

ಸಮಂತಾ ಕೈಯಲ್ಲಿ ಸದ್ಯ ತೆಲುಗಿನ ಖುಷಿ ಮತ್ತು ಸಿಟಾಡೆಲ್ ಸಿನಿಮಾಗಳು ಮಾತ್ರ ಇವೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ಸ್ಯಾಮ್ ದೀರ್ಘ ಬ್ರೇಕ್ ಪಡೆಯುತ್ತಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೈಯೋಸಿಟಿಸ್ ಸಮಸ್ಯೆ ಇರುವ ಬಗ್ಗೆ ಸಮಂತಾ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಲೆ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಕೌಟ್, ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಮಂತಾ ಆನಾರೋಗ್ಯದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರಂತೆ. 

Shobhita Dhulipala: ನಾಗಚೈತನ್ಯ ಜೊತೆ ಡೇಟಿಂಗ್​ ರೂಮರ್ ಮಧ್ಯೆಯೇ ಕನಸಿನ ಹುಡುಗ ಹೀಗಿರಬೇಕೆಂದ ನಟಿ

ತನ್ನ ಆರೋಗ್ಯವನ್ನು ಮರಳಿ ಪಡೆಯಲು ದೀರ್ಘ ವಿಶ್ರಾಂತಿ ಮತ್ತು ಉತ್ತಮ ಚಿಕಿತ್ಸೆ ಆಗತ್ಯವಿರುವ ಕಾರಣ ಸಮಂತಾ ನಟನೆಯಿಂದ ಬ್ರೇಕ್ ಪಡೆಯುವ ನಿರ್ಧಾರ ಮಾಡಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ ಖುಷಿ ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಸುತ್ತಿದ್ದಾರೆ. ಇನ್ನೂ ಸಿಟಾಡೆಲ್ ಶೂಟಿಂಗ್ ಕೂಡ ಮುಕ್ತಾಯದ ಹಂತದಲ್ಲಿದೆ. ಈ ಎರಡು ಸಿನಿಮಾಗಳು ಬಿಟ್ಟರೆ ಸಮಂತಾ ಕೈಯಲ್ಲಿ ಬೇರೆ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ನಿರ್ಮಾಪಕರಿಂದ ಪಡೆದ ಮುಂಗಡ ಹಣವನ್ನು ಸಮಂತಾ ವಾಪಾಸ್ ಮಾಡಿದ್ದಾರಂತೆ.

ಪದೇ ಪದೇ ಬಿಳಿ ಸೀರೆ ಧರಿಸಿದ ಸಮಂತಾ; ಹಿಂದಿರುವ ರಹಸ್ಯ ಪ್ರಶ್ನಿಸಿದ ನೆಟ್ಟಿಗರು!
 
ಸಮಂತಾ ಅನಾರೋಗ್ಯದಿಂದ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರು. ಓಡಾಡಲು ಸಾಧ್ಯವಾಗದೇ ಇರುವ ಸ್ಥಿತಿಯಲ್ಲೂ ಸಮಂತಾ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಿದ್ದರು. ಒಪ್ಪಿಕೊಂಡಿರುವ ಸಿನಿಮಾಗಳಿಗಾಗಿ ಸಮಂತಾ ಸಿಕ್ಕಾಪಟ್ಟೆ ಶ್ರಿಮಿಸಿದ್ದರು. ಡಬ್ಬಿಂಗ್, ಪ್ರಮೋಷನ್ ಅಂತ ಓಡಾಡಿದ್ದರು. ವರ್ಕೌಟ್ ಕೂಡ ಮಾಡುತ್ತಿದ್ದರು. ಸಿಕ್ಕಾಪಟ್ಟೆ ಒತ್ತಡ ಇರುವ ಕಾರಣ ಸಮಂತಾ ದೀರ್ಘ ಬ್ರೇಕ್ ಪಡೆದು ಆರೋಗ್ಯ ಮರಳಿ ಪಡೆದು ಮತ್ತೆ ಸಿನಿಮಾಗಳಲ್ಲಿ ಅಕ್ಟೀವ್ ಆಗಲಿದ್ದಾರೆ. ಈ ಬಗ್ಗೆ ಸಮಂತಾ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ತನ್ನ ವೃತ್ತಿ ಜೀವನ ಪೀಕ್ ನಲ್ಲಿ ಇರುವುದರಿಂದ ನಿಜಕ್ಕೂ ಇಂಥ ನಿರ್ಧಾರ ತೆಗೆದುಕೊಳ್ಳುತ್ತಾರಾ ಎನ್ನುವ ಅನುಮಾನ ಕೂಡ ಇದೆ. ಹಾಗಾಗಿ ಸಮಂತಾ ಪ್ರತಿಕ್ರಿಯೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ
'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?