Kantaraದ ಬಗ್ಗೆ ಹೇಳುತ್ತಲೇ ಕನ್ನಡದ ಹುಡುಗಿಯರಿಗೆ ಮದ್ವೆ ಟಿಪ್ಸ್​ ಕೊಟ್ಟ ನಟಿ ಸಮಂತಾ ರುತ್​ ಪ್ರಭು

Published : Oct 11, 2025, 05:21 PM IST
Samantha Ruth Prabhu

ಸಾರಾಂಶ

ನಟಿ ಸಮಂತಾ ರುತ್ ಪ್ರಭು ಬೆಂಗಳೂರಿನಲ್ಲಿ ಜ್ಯುವೆಲ್ಸ್ ಆಫ್ ಇಂಡಿಯಾ ಎಕ್ಸಿಬಿಷನ್ ಉದ್ಘಾಟಿಸಿದರು. ಈ ವೇಳೆ, ಮದುವೆಯಾಗುವ ಯುವತಿಯರು ಚಿನ್ನ ಖರೀದಿಯ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಅವರು ಹೇಳಿದ್ದೇನು?

ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ನಿನ್ನೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದು, ಅಭಿಮಾನಿಗಳನ್ನು ಕಂಡು ಮಾತನಾಡಿಸಿದ್ದಾರೆ. ಜ್ಯುವೆಲ್ಸ್ ಆಫ್ ಇಂಡಿಯಾ ಎಕ್ಸಿಬಿಷನ್ ಉದ್ಘಾಟನೆಗೆ ಬಂದಿದ್ದ ನಟಿ, ಇದೇ ವೇಳೆ ಕಾಂತಾರ (Kantara Chapter 1) ಚಿತ್ರದ ಬಗ್ಗೆ ಮಾತನಾಡುತ್ತಲೇ, ಕನ್ನಡದ ಹುಡುಗಿಯರಿಗೆ ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರಿನ ಯುವತಿಯರಿಗೆ ಒಂದು ಕಿವಿಮಾತನ್ನು ಹೇಳಿದ್ದಾರೆ. ಮದುವೆಯಾಗಲಿರುವ ಹುಡುಗಿಯರಿಗೆ ಈ ಕಿವಿಮಾತು. ಮೊದಲಿಗೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟಿ, ಕಾಂತಾರಾ ಚಿತ್ರವನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಅವರು, ನಾನು ಸಿನಿಮಾವನ್ನು ಇನ್ನೂ ನೋಡಿಲ್ಲ. ಆದಷ್ಟು ಬೇಗ ನೋಡುತ್ತೇನೆ. ಇದನ್ನು ನೋಡಲು ಉತ್ಸುಕಗಳಾಗಿದ್ದೇನೆ ಎಂದಿದ್ದಾರೆ.

ಯುವತಿಯರಿಗೆ ಕಿವಿಮಾತು

ಇದೇ ವೇಳೆ ಮಹಿಳೆಯರಿಗೆ ಒಂದು ಕಿವಿ ಮಾತು ಹೇಳಿದ್ದಾರೆ. ಅದೇನೆಂದರೆ, ತಾವು ಬಂದಿರುವುದು ಜ್ಯುವೆಲ್ಸ್ ಆಫ್ ಇಂಡಿಯಾ ಎಕ್ಸಿಬಿಷನ್ ಉದ್ಘಾಟನೆಯಾಗಿದ್ದರಿಂದ ಚಿನ್ನದ ಕುರಿತು ಮಾತನಾಡಿದ್ದಾರೆ. ಮದುವೆಯ ಸಂದರ್ಭದಲ್ಲಿ ಇಲ್ಲಿರುವ ಯಾರೂ ಅಪ್ಪ-ಅಮ್ಮ ಅಥವಾ ಇನ್ನಾರದೇ ದುಡ್ಡಿನಲ್ಲಿ ಚಿನ್ನವನ್ನು ಖರೀದಿಸಬಾರದು. ನಿಮ್ಮ ಮದುವೆಗೆ ನೀವೇ ನಿಮ್ಮ ಸ್ವಂತ ದುಡ್ಡಿನಲ್ಲಿ ಚಿನ್ನವನ್ನು ಖರೀದಿಸಿ ಎಂದಿದ್ದಾರೆ. ಅಲ್ಲಿದ್ದ ಯುವತಿಯರೆಲ್ಲರೂ ಒಗ್ಗಟ್ಟಾಗಿ ಇದಕ್ಕೆ ಸಹಮತಿಯನ್ನು ಸೂಚಿಸಿದ್ದಾರೆ.

ಬೆಂಗಳೂರೆಂದ್ರೆ ನನಗಿಷ್ಟ...

ಇದೇ ವೇಳೆ ನಟಿ, ತಮಗೆ ಬೆಂಗಳೂರು ಎಂದರೆ ತುಂಬ ಇಷ್ಟ. ಬೇಸಿಗೆ ಕಾಲದಲ್ಲಿ ಇಲ್ಲಿಗೆ ಬರ್ತಿರುತ್ತೇನೆ. ಕೇವಲ ವೆದರ್ ಮಾತ್ರ ಅಲ್ಲ ಇಲ್ಲಿಯ ಜನ, ಸಿಟಿ ಎಲ್ಲ ನನಗಿಷ್ಟ. ಜ್ಯುವೆಲ್ಸ್ ಆಫ್ ಇಂಡಿಯಾ ಎಕ್ಸಿಬಿಷನ್ ಉದ್ಘಾಟಿಸಿದ್ದಕ್ಕೆ ನನಗೆ ತುಂಬ ಖುಷಿಯಾಗಿದೆ. ಹಲವಾರು ಜ್ಯುವೆಲರಿ ಮಳಿಗೆ ಭೇಟಿ ನೀಡಿದೆ, ಇಷ್ಟ ಆಯಿತು. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಯುವತಿಯರು ಚಿನ್ನಕ್ಕಾಗಿ ಬೇರೆಯವರಿಗೆ ಅವಲಂಬನೆ ಆಗಬೇಡಿ. ನಿಮ್ಮ ದುಡ್ಡಿನಿಂದಲೇ ಖರೀದಿ ಮಾಡಿ ಎಂದಿದ್ದಾರೆ. ಇದೇ ವೇಳೆ ಸಮಂತಾ ಅವರ ಅಭಿಮಾನಿಯೊಬ್ಬ Will u marry me Samantha ಎಂಬ ಬರಹದ ಟೀಶರ್ಟ್ ಹಾಕಿಕೊಂಡಿದ್ದು, ಅದನ್ನು ಸಮಂತಾ ಅವರಿಗೆ ತೋರಿಸಿದಾಗ, ನಗುತ್ತಾ ನಟಿ ನೋ ಎಂದಿದ್ದಾರೆ.

2ನೇ ಮದುವೆಯ ಬಗ್ಗೆ...

ಇನ್ನು ನಟಿ ಸಮಂತಾ, ಡಿವೋರ್ಸ್​ ಬಳಿಕ ಎರಡನೇ ಮದುವೆ ಬಗ್ಗೆನೇ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಲವ್ ಲೈಫ್‌ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಕೆಲವು ದಿನಗಳ ಬಳಿಕ ಇವರ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡಿದ್ದವು. ಅಷ್ಟಕ್ಕೂ ನಟಿ ಸಮಂತಾ 'ಫ್ಯಾಮಿಲಿ ಮ್ಯಾನ್' ವೆಬ್‌ ಸೀರಿಸ್‌ ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿವೆ. ಇವರಿಬ್ಬರು ಒಟ್ಟಿಗೆ ಇರುವ ಅನೇಕ ಫೋಟೋಗಳು ವೈರಲ್ ಆಗಿದ್ದವು. ಆದರೆ, ಇಬ್ಬರೂ ಕೂಡ ತಮ್ಮ ಸಂಬಂಧವನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಇತ್ತೀಚೆಗೆ ಸಮಂತಾ ವಿಡಿಯೋ ಒಂದನ್ನು ಶೇರ್​ ಮಾಡಿದ್ದು, ಇವರ ಮದುವೆ ಆಗುತ್ತದೆಯಾ ಎಂದು ಫ್ಯಾನ್ಸ್​ ತಲೆಕೆಡಿಸಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?