ಬಾಲಿಯಿಂದ ಬಿಕಿನಿ ಫೋಟೋ ಹಂಚಿಕೊಂಡ ಸಮಂತಾ: ಫ್ಯಾನ್ಸ್ ಫಿದಾ

Published : Jul 26, 2023, 06:32 PM IST
ಬಾಲಿಯಿಂದ ಬಿಕಿನಿ ಫೋಟೋ ಹಂಚಿಕೊಂಡ ಸಮಂತಾ: ಫ್ಯಾನ್ಸ್ ಫಿದಾ

ಸಾರಾಂಶ

ಸೌತ್ ಸುಂದರಿ ಸಮಂತಾ ಸದ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ಸ್ನೇಹಿತೆ ಜೊತೆ ಬಾಲಿ ಪ್ರವಾಸ ಎಂಜಾಯ್ ಮಾಡುತ್ತಿರುವ ಸಮಂತಾ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ.  

ಸೌತ್ ಸುಂದರಿ ಸಮಂತಾ ರುತ್ ಪ್ರಭು ಸದ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ಸಮಂತಾ ತನ್ನ ಸ್ನೇಹಿತೆ ಜೊತೆ ಬಾಲಿಯಲ್ಲಿದ್ದಾರೆ. ಸಮಂತಾ ಪ್ರವಾಸದ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಬಾಲಿಯ ಸುಂದರ ಪ್ರಕೃತಿಯ ಜೊತೆ ಕಾಲಕಳೆಯುತ್ತಿರುವ ಸಮಂತಾ ಅಲ್ಲಿಂದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಮಂತಾ ಶೇರ್ ಮಾಡಿರುವ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬರುತ್ತಿವೆ. ಅಷ್ಟೆಯಲ್ಲದೇ ಸಮಂತಾ ಬಾಲಿಗೆ ಹೋಗಿದ್ದರೂ ವರ್ಕೌಟ್ ಮಾಡುತ್ತಿದ್ದಾರೆ, ಯೋಗ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಜೆಯ ಮಜೆಯಲ್ಲಿದ್ದರೂ ಫಿಟ್ನೆಸ್ ಕಡೆ ಗಮನ ಹರಿಸಿದ್ದಾರೆ. 

ಸದ್ಯ ಸಮಂತಾ ಮತ್ತೊಂದು ಪೋಟೋವನ್ನು ಶೇರ್ ಮಾಡಿದ್ದಾರೆ. ಸಮಂತಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ. ಸಮಂತಾ ಬಿಕಿನಿ ಪೋಟೋವನ್ನು ಶೇರ್ ಮಾಡಿದ್ದಾರೆ. ಇಂಥ ಹಾಟ್ ಫೋಟೋಗಳನ್ನು ಶೇರ್ ಮಾಡದೇ ಅನೇಕ ದಿನಗಳೇ ಆಗಿತ್ತು. ಇದೀಗ ಮತ್ತ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ. ತನ್ನ ಸ್ನೇಹಿತೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಸಮಂತಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಿಯಾನ್ ಆರೆಂಜ್ ಬಿಕಿನಿ ಟಾಪ್ ಧರಿಸಿರುವ ನಟಿ, ತಲೆಯ ಮೇಲೆ ಪಿಂಕ್ ಟೋಪಿ ಮತ್ತು ಕಪ್ಪು ಸನ್ಗ್ಲಾಸ್‌ ಧರಿಸಿದ್ದಾರೆ.  

ಬ್ರೇಕ್ ಪಡೆಯುವ ಮೊದಲು ಸಮಂತಾ ಟೆಂಪಲ್ ರನ್: ಗೋಲ್ಡನ್ ಟೆಂಪಲ್‌ನಲ್ಲಿ ಸ್ಯಾಮ್

ಸಮಂತಾ ಸದ್ಯ ಸಿಟಾಡೆಲ್ ಮತ್ತು ಖುಷಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಹೊಸ ಸಿನಿಮಾಗೆ ಇನ್ನೂ ಸಹಿ ಹಾಕಿಲ್ಲ. ಅನಾರೋಗ್ಯದಿಂದ ಬಳುತ್ತಿದ್ದ ಸಮಂತಾ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಮತ್ತೆ ನಟನೆ ಮಾಡಲ್ಲ ಎನ್ನಲಾಗಿದೆ. ನಟನೆಯಿಂದ ಬ್ರೇಕ್ ಪಡೆದು ವಿದೇಶ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಸಮಂತಾ ಸಿನಿಮಾದಿಂದ ದೀರ್ಘ ಪಡೆಯಲಿದ್ದಾರೆ ಎನ್ನಲಾಗಿದೆ. 

ನಟನೆಗೆ ಬ್ರೇಕ್: ಹೊಸ ಹೇರ್‌ ಸ್ಟೈಲ್‌ ಮಾಡಿಸಿ ವಿದೇಶಕ್ಕೆ ಹಾರಿದ ಸಮಂತಾ

ಸದ್ಯ ವರುಣ್ ಧವನ್ ಜೊತ ಸಿಟಾಡೆಲ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಸಿಟಾಡೆಲ್ ಸಿರೀಸ್ ಶೂಟಿಂಗ್ ಮುಕ್ತಾಯವಾಗಿದೆ. ಸಮಂತಾ ಮತ್ತೆ ಆಕ್ಷನ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ತೆಲುಗಿನಲ್ಲಿ ಖುಷಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ವಿಜಯ್ ದೇವರಕೊಂಡ ಜೊತೆ ಸಮಂತಾ ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಮತ್ತು ದೇವರಕೊಂಡ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಖುಷಿ ಸಿನಿಮಾ ಮೂಲಕ ಸಮಂತಾ ಅಭಿಮಾನಿಗಳ ಮುಂದೆ ಬರಲಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!