ಊಂ ಆಂಟಾವಾ ಮಾವ ಮೂಲಕ ಹಲ್ಚಲ್ ಸೃಷ್ಟಿಸಿರೋ ನಟಿ ಸಮಂತಾ ರುತ್ ಪ್ರಭು ಐಟಂ ಸಾಂಗ್ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
ಪುಷ್ಪ ಚಿತ್ರದ ಊಂ ಆಂಟಾವಾ ಮಾವ... ಸೃಷ್ಟಿಸಿದ್ದ ಹಲ್ಚಲ್ ಕುರಿತು ಎಲ್ಲರಿಗೂ ಗೊತ್ತೇ ಇದೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರವು ವಿಶ್ವಾದ್ಯಂತ ಅಬ್ಬರಿಸಲು ಈ ಹಾಡು ಕೂಡ ಕಾರಣವಾಗಿದೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವುದು ನಟಿ ಸಮಂತಾ ರುತ್ ಪ್ರಭು. 'ಪುಷ್ಪ' ಚಿತ್ರದ, ದೇವಿಶ್ರೀ ಪ್ರಸಾದ್ ಸಂಗೀತವಿರುವ ಈ ಐಟಂ ಸಾಂಗ್ ಯಾವ ಮಟ್ಟಕ್ಕೆ ಕಿಚ್ಚೆಬ್ಬಿಸಿತ್ತು ಎಂದರೆ, ರಿಲೀಸ್ ಆದ 24 ಗಂಟೆಗಳಲ್ಲಿ ದಕ್ಷಿಣ ಭಾರತದ ಯಾವ ಸಿನಿಮಾದ ಹಾಡು ಕಾಣದಷ್ಟು ವೀವ್ಸ್ ಅನ್ನು ಕಂಡಿತ್ತು. ಚಂದ್ರಬೋಸ್ ಸಾಹಿತ್ಯದ ಈ ಐಟಂ ಸಾಂಗ್ನಲ್ಲಿ, ಸಮಂತಾ ಅವರು ಡ್ಯಾನ್ಸ್ ಮಾಡಿರುವ ಪರಿಗೆ ಸಿನಿ ಪ್ರಿಯರು ಹುಚ್ಚೆದ್ದು ಕುಣಿದಿದ್ದರೂ, ಒಂದು ಘಟ್ಟದಲ್ಲಿ ಕಾಂಟ್ರವರ್ಸಿಗೂ ಈ ಹಾಡು ಕಾರಣವಾಯಿತು. ಈ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳಲ್ಲಿ ಪುರುಷರನ್ನು ಕಾಮಪ್ರಚೋದಕವಾಗಿ, ಪುರುಷರು ಯಾವಾಗಲೂ ಕಾಮದ ಬಗ್ಗೆಯೇ ಚಿಂತಿಸುತ್ತಾರೆ ಎಂದು ಚಿತ್ರಿಸಲಾಗಿದೆ, ಆದ್ದರಿಂದ ಹಾಡನ್ನು ಬ್ಯಾನ್ ಮಾಡಬೇಕು ಎಂದೆಲ್ಲಾ ಹೇಳಲಾಗಿದ್ದರೂ ಇಂದಿಗೂ ಈ ಹಾಡಿನ ಕ್ರೇಜ್ ಮುಗಿದಿಲ್ಲ.
ಆದರೆ ಇದೀಗ ನಟಿ ಸಮಂತಾ ರುತ್ ಪ್ರಭು, ಈ ಹಾಡಿನ ಕುರಿತು ಬಹು ದೊಡ್ಡ ಸೀಕ್ರೇಟ್ ಒಂದನ್ನು ರಿವೀಲ್ ಮಾಡಿದ್ದು, ಘೋಷಣೆಯನ್ನೂ ಮಾಡಿಬಿಟ್ಟಿದ್ದಾರೆ. ಈ ಹಾಡು ಆ ದಿವಸಗಳಲ್ಲಿ ನನಗೆ ಪ್ರಯೋಗವಾಗಿತ್ತು ಅಷ್ಟೇ. ಆದರೆ ಹಾಡಿನ ಶೂಟಿಂಗ್ ಸಮಯದಲ್ಲಿ ಇದು ನನಗೆ ಹೇಳಿಮಾಡಿಸಿದ್ದು ಅಲ್ಲ ಎಂದೇ ಎನ್ನಿಸಿತ್ತು. ಮೊದಲ ದಿನ ಡಾನ್ಸ್ ಮಾಡುವಾಗ ಅಕ್ಷರಶಃ ಬೆವೆತು ಹೋಗಿದ್ದೆ. ಮೈ ನಡುಗುತ್ತಿತ್ತು. ಅದಕ್ಕೆ ಕಾರಣವೂ ಇದೆ. ಎಲ್ಲರಿಗೂ ತಿಳಿದಿರುವಂತೆ ನಾನು ಅನಾರೋಗ್ಯ ಪೀಡಿತಳು. ಆದರೆ ಡ್ಯಾನ್ಸ್ ಒಪ್ಪಿಕೊಂಡು ಸಿಕ್ಕಾಪಟ್ಟೆ ಕಷ್ಟಪಟ್ಟೆ. ನನಗೆ ನಾನು ತಗೆದುಕೊಂಡ ಸವಾಲು ಅದಾಗಿತ್ತು ಅಂದಿರೋ ಸಮಂತಾ, ಇನ್ನು ಮುಂದೆ ನಾನು ಐಟಂ ಸಾಂಗ್ಗಳಿಗೆ ಡ್ಯಾನ್ಸ್ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.
ಆರೋಗ್ಯ ವಿಚಾರದಲ್ಲಿ 33 ಮಿಲಿಯನ್ ಫಾಲೋವರ್ಸ್ ದಾರಿ ತಪ್ಪಿಸಿದ್ರಾ ನಟಿ ಸಮಂತಾ? ವೈದ್ಯರು ಕಿಡಿಕಿಡಿ!
ಇಂತಹ ಹಾಡುಗಳಲ್ಲಿ ತಾವು ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣವೂ ಇದೆ. ಕಾಯಿಲೆಯಿಂದಾಗಿ ನನ್ನ ದೇಹದ ಶಕ್ತಿ ಕುಗ್ಗುತ್ತಿದೆ. ಅಷ್ಟೇ ಅಲ್ಲದೇ ನನ್ನ ದೇಹ ಸೆಕ್ಸಿಯಾಗಿಲ್ಲ. ಮಾದಕತೆ ಎನ್ನುವುದು ನನ್ನ ಪಾಲಿಗೆ ದೂರ. ಲೈಂಗಕತೆಯ ವಿಷಯದಲ್ಲಿ ತುಂಬಾ ಹಿಂದೆ. ಆದ್ದರಿಂದ ಐಟಂ ಸಾಂಗ್ ಮಾಡಲಾರೆ ಎಂದಿದ್ದಾರೆ. ಈ ಹಿಂದೆ ಕೂಡ ನಟಿ ಈ ವಿಷಯದ ಕುರಿತು ಮಾತನಾಡಿದ್ದರು. 'ನಾವು ಆಗಷ್ಟೇ ಡಿವೋರ್ಸ್ ಅನೌನ್ಸ್ ಮಾಡಿದ್ದೆವು. ಅಷ್ಟರಲ್ಲಿ ಹೂ ಆಂಟಾವಾ ಐಟಂ ಸಾಂಗ್ಗೆ ಆಫರ್ ಬಂದಿತ್ತು. ಅದನ್ನು ತಿಳಿದ ನನ್ನ ಕುಟುಂಬಸ್ಥರು ನಿನಗೆ ಇದೆಲ್ಲಾ ಆಗಿಬರಲ್ಲ. ಮಾಡಬೇಡ ಎಂದಿದ್ದರು. ಸುಮ್ಮನೇ ಮನೆಯಲ್ಲಿ ಕುಳಿತಿರು ಎಂದಿದ್ದರು. ಆದರೆ ನಾನು ಅವರ ಮಾತು ಕೇಳಲಿಲ್ಲ. ಏಕೆಂದರೆ ಡಿವೋರ್ಸ್ ಕೊಡುವಂಥ ತಪ್ಪು ನಾನು ಮಾಡಿಲ್ಲ ಎನ್ನುವುದು ನನಗೆ ತಿಳಿದಿತ್ತು ಎಂದಿದ್ದಾರೆ.
ಆದರೆ ಮೆಯೋಸಿಟಿಸ್ (Myositis) ಕಾಯಿಲೆಯಿಂದ ಈ ಹಾಡಿಗೆ ಡ್ಯಾನ್ಸ್ ಮಾಡುವಾಗ ತುಂಬಾ ಕಷ್ಟವಾಗಿತ್ತು. ಇನ್ನು ಮುಂದೆ ಇಂಥ ಸಾಂಗ್ಗಳಲ್ಲಿ ಒಪ್ಪಿಕೊಳ್ಳಲ್ಲ, ಯಾವ ಪ್ರಯೋಗಕ್ಕೂ ಮುಂದಾಗಲಾರೆ ಎಂದಿದ್ದಾರೆ. ನನ್ನ ದೇಹದ ಸೌಂದರ್ಯ ಈ ಕಾಯಿಲೆಯಿಂದ ಕುಗ್ಗುತ್ತಿದೆ. ನಾನು ನೋಡಲು ಕೂಡ ಸುಂದರವಾಗಿಲ್ಲ, ಸೆಕ್ಸಿ ರೀತಿ ಇಲ್ಲ. ಸೆಕ್ಸಿ ನನ್ನ ವಿಷಯವೇ ಅಲ್ಲ. ನಾನು ಸುಂದರವೂ ಆಗಿಲ್ಲ. ನಾನು ಹಾಗೆ ಕಾಣುವುದೂ ಇಲ್ಲ ಎಂದಿದ್ದಾರೆ. ಇವರ ಈ ಹೇಳಿಕೆಗೆ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈಚೆಗಷ್ಟೇ ನಟಿ ಬಿಕಿನಿಯಲ್ಲಿ ಫೋಟೋ ತೆಗೆಸಿಕೊಂಡು ಹಲ್ಚಲ್ ಸೃಷ್ಟಿಸಿದ್ದರು. ನೀವು ತುಂಬಾ ಸುಂದರವಾಗಿ, ಸೆಕ್ಸಿಯಾಗಿದ್ದೀರಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ಡಿವೋರ್ಸ್, ಮಯೋಸೈಟಿಸ್ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸಮಂತಾ ರುತ್ ಪ್ರಭು