
ಸೌತ್ ನಟಿ ಸಮಂತಾ ರುಥ್ ಪ್ರಭು(Samantha ruth prabhu) ಅವರು ಟಾಲಿವುಡ್(Tollywood) ನಟ ನಾಗ ಚೈತನ್ಯ ಅವರಿಂದ ವಿಚ್ಚೇದಿತರಾಗಿ ಆಗಲೇ ಎರಡು ತಿಂಗಳು ಕಳೆದವು. ಆದರೆ ಇವರ ವಿಚ್ಚೇದನೆ ಕುರಿತ ಮಾತುಗಳಿಗೆ ಬ್ರೇಕ್ ಇಲ್ಲ. ವಿಚ್ಚೇದನೆ ವದಂತಿ ಶುರುವಾದಾಗಿನಿಂದ, ಜೀವನಾಂಶ, ಪ್ರೆಗ್ನೆನ್ಸಿ, ಸ್ಟೈಲಿಷ್ಟ್ ಜೊತೆ ಪ್ರೇಮ ಹೀಗೆ ಹತ್ತು ಹಲವು ಬಗೆಯಲ್ಲಿ ಸಮಂತಾ ಕುರಿತು ಟ್ರೋಲ್‌ಗಳಾಗಿವೆ. ಇಷ್ಟಾದರೂ ನಾಗ ಚೈತನ್ಯ ಕುರಿತು ಜನ ಮಾತನಾಡಿದ್ದು ಭಾರೀ ಕಡಿಮೆ. ಈ ವಿಚ್ಚೇದನೆಯಲ್ಲಿ ಹೆಚ್ಚು ಚರ್ಚೆಗೊಳಗಾಗಿದ್ದು ಸಮಂತಾ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಎಲ್ಲವನ್ನೂ ಕಡೆಗಣಿಸಿಕೊಂಡೇ ಬಂದಿದ್ದ ನಟಿ ಈಗ ಆ ಬಗ್ಗೆ ಮಾತನಾಡಿದ್ದಾರೆ.
ಸೌತ್ ಸ್ಟಾರ್ ಜೋಡಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ವಿಚ್ಛೇದನವನ್ನು ಘೋಷಿಸಿದಾಗ ಅದು ಅವರ ಸಾವಿರಾರು ಅಭಿಮಾನಿಗಳಿಗೆ ಶಾಕಿಂಗ್ ವಿಚಾರವಾಗಿತ್ತು. ಈ ಬಗ್ಗೆ ಸಣ್ಣ ಕ್ಲೂ ಮೊದಲೇ ಇದ್ದರೂ ಅಧಿಕೃತ ಘೋಷಣೆ ಬಹಳಷ್ಟು ಅಭಿಮಾನಿಗಳಿಗೆ ನೋವು ಕೊಟ್ಟಿತ್ತು. ಸಮಂತಾ ಮತ್ತು ನಾಗಾ ಅವರ ವಿಚ್ಛೇದನದ ಸುದ್ದಿ ವದಂತಿಯಂತೆ ಪ್ರಾರಂಭವಾದಾಗಿನಿಂದ, ಈಗ ದೂರವಾಗಿರುವ ದಂಪತಿಗಳು ತಮ್ಮ ಸಂಬಂಧದಲ್ಲಿನ ತೊಂದರೆ ಮತ್ತು ನಂತರದ ಪ್ರತ್ಯೇಕತೆಯ ಬಗ್ಗೆ ಮೌನವನ್ನು ಕಾಯ್ದುಕೊಂಡಿದ್ದಾರೆ. ವಿಚ್ಛೇದನದ ಬಗ್ಗೆ ನಾಗಾ ಮೌನವಾಗಿದ್ದರೂ, ಸಮಂತಾ ರುತ್ ಪ್ರಭು ತನ್ನ ಇನ್‌ಸ್ಟಾಗ್ರಾಮ್ ಮೂಲಕ ತನ್ನ ಟ್ರೋಲ್‌ಗಳಿಗೆ ಸ್ಟ್ರಾಂಗ್ ಮೆಸೆಜ್ ಕೊಡುವ ಸೀಕ್ರೆಟ್ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.
Samantha Speaks about Sex: ಒಂದಿನ ಆಹಾರ ಬೇಕಾದ್ರೂ ಬಿಡ್ತೀನಿ, ಸೆಕ್ಸ್ ಬಿಡಲ್ಲ ಎಂದ ನಟಿ
ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ಅಕ್ಟೋಬರ್ 2 ರಂದು ಬೇರ್ಪಡುವುದಾಗಿ ಘೋಷಿಸಿದ್ದರು. ಬಹಳ ಚರ್ಚೆ ಮತ್ತು ಚಿಂತನೆಯ ನಂತರ ಚಾಯ್ ಮತ್ತು ನಾನು ನಮ್ಮದೇ ಹಾದಿಯನ್ನು ಅನುಸರಿಸಲು, ಗಂಡ-ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದೆವು. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟವಂತರು, ಅದು ನಮ್ಮ ಸಂಬಂಧದ ಮೂಲವಾಗಿತ್ತು. ನಂಬಿಕೆ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ಹೇಳಿದ್ದರು.
ವಿಚ್ಛೇದನ ಘೋಷಣೆಯ ಸುಮಾರು 2 ತಿಂಗಳ ನಂತರ, ಸಮಂತಾ ಅಂತಿಮವಾಗಿ ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ತನ್ನ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಮಂತಾ ತನ್ನ ವಿಚ್ಛೇದನದ ಘೋಷಣೆಯ ನಂತರ ತಕ್ಷಣವೇ ತೆಗೆದುಕೊಂಡ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಇದು ನಾನು ಆಶಿಸಿದ್ದು, ಮತ್ತು ಇನ್ನೂ ಹೆಚ್ಚು. ನಿಮ್ಮಲ್ಲಿ ಏನೋ ಶಾಶ್ವತವಾಗಿ ಬದಲಾಗುತ್ತದೆ. ದೇವರು ನನಗೆ ಮುಂದುವರಿಯಲು ಸರಿಯಾದ ಶಕ್ತಿಯನ್ನು ನೀಡಿದ್ದಾನೆಂದು ನಾನು ಭಾವಿಸುತ್ತೇನೆ. ಲಾಕ್‌ಡೌನ್ ಸಮಯದಲ್ಲಿ ನಾನು ಧ್ಯಾನ ಮಾಡಲು ಪ್ರಾರಂಭಿಸಿದೆ ಎಂದಿದ್ದಾರೆ.
ನಾನು ಎಲ್ಲರ ಸ್ವೀಕಾರವನ್ನು ಕೇಳುವುದಿಲ್ಲ. ನಾನು ವಿಭಿನ್ನ ಅಭಿಪ್ರಾಯಗಳನ್ನು ಹೊಂದಲು ಜನರನ್ನು ಪ್ರೋತ್ಸಾಹಿಸುತ್ತೇನೆ. ಆದರೆ ಅದನ್ನು ಹೇಳುವಾಗ ಪ್ರೀತಿ ಮತ್ತು ಸಹಾನುಭೂತಿ ಹೊಂದಬಹುದು. ತಮ್ಮ ನಿರಾಶೆಯನ್ನು ಹೆಚ್ಚು ಸುಸಂಸ್ಕೃತ ರೀತಿಯಲ್ಲಿ ವ್ಯಕ್ತಪಡಿಸಲು ನಾನು ಅವರನ್ನು ವಿನಂತಿಸುತ್ತೇನೆ ಎಂದಿದ್ದರು.
ಸೆಕ್ಸ್ ಕುರಿತ ಹೇಳಿಕೆ ವೈರಲ್:
2017ರ ಸಂದರ್ಶನ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ಸಮಂತಾರಲ್ಲಿ ಆಹಾರವೋ ಸೆಕ್ಸ್ ಮುಖ್ಯವೋ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಟಿ ಒಂದಿನ ಆಹಾರ ಇಲ್ಲಾಂದ್ರೂ ಓಕೆ, ಆದರೆ ಸೆಕ್ಸ್ ಬೇಕೇ ಬೇಕು ಎಂದು ಉತ್ತರ ಕೊಟ್ಟಿದ್ದಾರೆ ನಟಿ. ಒಂದಿನ ಊಟ ಇಲ್ಲವೆಂದರೂ ನಿಲ್ಲಬಹುದು, ಸೆಕ್ಸ್ ಇಲ್ಲದೆ ಇರಲಾರೆ ಎಂದಿದ್ದಾರೆ ಸೌತ್ ನಟಿ. ಈ ವಿಡಿಯೋ ತುಣುಕು ಈಗ ವೈರಲ್ ಆಗಿದ್ದು ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪ್ರಯಿಕ್ರಿಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.