ಚಿಕಿತ್ಸೆಗಾಗಿ ಸಮಂತಾ 25 ಕೋಟಿ ಸಾಲ ಪಡೆದದ್ದು ನಿಜನಾ? ನಟಿ ಹೇಳಿದ್ದೇನು?

Published : Aug 05, 2023, 02:54 PM IST
ಚಿಕಿತ್ಸೆಗಾಗಿ ಸಮಂತಾ 25 ಕೋಟಿ ಸಾಲ ಪಡೆದದ್ದು ನಿಜನಾ? ನಟಿ ಹೇಳಿದ್ದೇನು?

ಸಾರಾಂಶ

ಟಾಲಿವುಡ್  ನಟಿ ಸಮಂತಾ ರುತ್​ ಪ್ರಭು ತಮ್ಮ ಮೈಯೋಸಿಟಿಸ್ ಕಾಯಿಲೆ ಚಿಕಿತ್ಸೆಗಾಗಿ ನಟನೊಬ್ಬನಿಂದ 25 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿಗೆ ಅವರು ಹೇಳಿದ್ದೇನು?  

ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್​ ಪ್ರಭು, ಕಳೆದ ಕೆಲವು ತಿಂಗಳಿಂದ ಮೈಯೋಸಿಟಿಸ್ (Myositis) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೈಯೋಸಿಟಿಸ್ ಎನ್ನುವುದು ಸ್ನಾಯುಗಳಲ್ಲಿ ಉರಿಯೂತದ ಸ್ಥಿತಿಯಾಗಿದೆ. ಮೈಯೋ ಎಂದರೆ ಸ್ನಾಯು, ಸಿಟಿಸ್ ಎಂದರೆ ಉರಿಯೂತ. ಇದು ವೈರಲ್ ಸೋಂಕುಗಳು, ಔಷಧಗಳು ಮತ್ತು ಸ್ವಯಂ ನಿರೋಧಕ ಸ್ಥಿತಿ ಸೇರಿದಂತೆ ವಿವಿಧ ಕಾರಣಗಳನ್ನು ಹೊಂದಿರುವ ಸ್ಥಿತಿಯಾಗಿದೆ. ಇದಾಗಲೇ ಇದಕ್ಕೆ ಸಮಂತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದ ಚಿಕಿತ್ಸೆಯ ಮೊರೆ ಕೂಡ ಹೋಗಿದ್ದು, ಈ ಕುರಿತು ಇದಾಗಲೇ ಮಾಹಿತಿ ಶೇರ್​ ಮಾಡಿಕೊಂಡಿದ್ದರು. IVIg ಥೆರಪಿಯನ್ನು ನಟಿ ಪಡೆದುಕೊಂಡಿದ್ದಾರೆ.  IVIG  ಥೆರಪಿಯು ದುರ್ಬಲಗೊಂಡಿರುವ ವ್ಯಕ್ತಿ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯ ಪ್ರಕ್ರಿಯೆ ಸುಮಾರು 2 ರಿಂದ 4 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಚಿಕಿತ್ಸೆ ಸಮಯದಲ್ಲಿ, ತಯಾರಾದ ಇಮ್ಯುನೊಗ್ಲಾಬ್ಯುಲಿನ್ ಅನ್ನು ರಕ್ತನಾಳಗಳಲ್ಲಿ ತುಂಬಿಸಲಾಗುತ್ತದೆ. ಇವೆಲ್ಲಾ ಚಿಕಿತ್ಸೆಗಳ ನಡುವೆಯೇ ನಟಿ ಯೋಗ, ವ್ಯಾಯಾಮವನ್ನೂ ಮಾಡುತ್ತಿದ್ದಾರೆ.

ಸದ್ಯ ಬಾಲಿಯ ಟೂರ್​ ಎನ್​ಜಾಯ್​ ಮಾಡ್ತಿರೋ ನಟಿ, ಅಲ್ಲಿ ಕೊರೆಯುವ ಚಳಿಯಲ್ಲಿ ಮೈನಸ್​ 4 ಡಿಗ್ರಿಯಲ್ಲಿ ಆರು ನಿಮಿಷಗಳ  ಕಾಲ ಕುಳಿತಿದ್ದು, ಅದರ ವಿಡಿಯೋ ಕೂಡ ಶೇರ್​ ಮಾಡಿಕೊಂಡಿದ್ದರು.  ಇದು  ಐಸ್ ಸ್ನಾನವಾಗಿದೆ.  ಸ್ನಾಯು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ ಎಂದಿದ್ದರು.  ಬಾಲಿಯಿಂದ  ಮರಳಿದ ಬಳಿಕ ನಟಿ ಸಮಂತಾ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. 

ಇವೆಲ್ಲವುಗಳ ನಡುವೆಯೇ, ಕೆಲ ದಿನಗಳಿಂದ ದೊಡ್ಡದೊಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ, ಸಮಂತಾ ಅವರು ತಮ್ಮ ವೈದ್ಯಕೀಯ ಚಿಕಿತ್ಸೆಗಾಗಿ ಖ್ಯಾತ ನಾಯಕ ಒಬ್ಬರಿಂದ 25 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎನ್ನುವುದು! ಸದ್ಯ ಈ ಸುದ್ದಿ ಸಕತ್​  ವೈರಲ್ ಆಗುತ್ತಿದೆ. ಇದು ಹಲವು ರೀತಿಯ ಚರ್ಚೆಗಳಿಗೆ ಅನುವು ಮಾಡಿಕೊಟ್ಟಿದೆ. ಇದು ಅಷ್ಟೊಂದು ದುಬಾರಿ ಚಿಕಿತ್ಸೆಯಾಗಿತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ತಮಗೆ ಸಮಸ್ಯೆ ಇರುವುದು ತಿಳಿಯುತ್ತಲೇ ಸಮಂತಾ ಅವರು ಕೆಲವು ಚಿತ್ರಗಳಿಂದ ಹಿಂದಕ್ಕೆ ಸರಿದಿದ್ದರು, ಮಾತ್ರವಲ್ಲದೇ ಕೆಲವು ಚಿತ್ರಕ್ಕೆ ಅದಾಗಲೇ ಸಹಿ ಹಾಕಲಾಗಿತ್ತು. ಆದರೆ ಶೂಟಿಂಗ್​ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ  ನಿರ್ಮಾಪಕರಿಂದ ತಾವು ಪಡೆದಿದ್ದ ಮುಂಗಡ ಹಣವನ್ನು ವಾಪಸ್ ಕೂಡ ಮಾಡಿದ್ದರು.  ಇದರ ನಡುವೆ ಈಕೆ ಇಷ್ಟೊಂದು ಹಣವನ್ನು ಸಾಲ ಪಡೆದಿರುವ ಬಗ್ಗೆ ಬಿ-ಟೌನ್​ನಲ್ಲಿ ಸುದ್ದಿಯಾಗುತ್ತಿದೆ. 

ಸಮಂತಾ ಜತೆ ಸೆಲ್ಫಿ ಕ್ಲಿಕ್ಕಿಸಿ ಸನ್​ಗ್ಲಾಸ್​ನೊಂದಿಗೆ ಕೋತಿ ಎಸ್ಕೇಪ್! ಮೈನಸ್​ 4 ಡಿಗ್ರಿಯಲ್ಲಿ ನಟಿಯ ಐಸ್​ಬಾತ್​!

ಇದಕ್ಕೆ ಈಗ ಖುದ್ದು ಸಮಂತಾ ಸ್ಪಷ್ಟನೆ ನೀಡಿದ್ದಾರೆ. 'ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ ರೂಪಾಯಿಗಳಾ? ಅಬ್ಬಾ ಈ ಚಿಕಿತ್ಸೆಗೆ ಇಷ್ಟೊಂದು ಖರ್ಚಾಗುತ್ತದೆ ಎಂದು ಯಾರಾದರೂ ಹೇಳಿದರೆ ಅವರು ನಿಮ್ಮ ಜೊತೆ ಕೆಟ್ಟ ವ್ಯವಹಾರವನ್ನು ಮಾಡಿದ್ದಾರೆ ಎಂದೇ ಅರ್ಥ.  ನಾನು ಈ ದೊಡ್ಡ ಮೊತ್ತದ ಅತಿ  ಚಿಕ್ಕ ಭಾಗವನ್ನು ಮಾತ್ರ ಖರ್ಚು ಮಾಡುತ್ತಿದ್ದೇನೆ ಎಂದು ಹೇಳಲು ಖುಷಿಯಾಗಿದೆ. ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ಎಲ್ಲಾ ಕೆಲಸಗಳಿಗೆ ಸರಿಯಾಗಿಯೇ ಲೆಕ್ಕ ಇಟ್ಟಿದ್ದು, ಈಗಲೂ ಕೂಡ ನನ್ನನ್ನು  ನಾನು ಸುಲಭವಾಗಿ  ನೋಡಿಕೊಳ್ಳು ಶಕ್ತಿ ಹೊಂದಿದ್ದಾರೆ.  Myosotosನಿಂದ ಸಾವಿರಾರು ಜನರು ಬಳಲುತ್ತಿರುತ್ತಾರೆ. ಇಷ್ಟೊಂದು ದೊಡ್ಡ ಮೊತ್ತ ಇದಕ್ಕೆ ಖರ್ಚಾಗುತ್ತದೆ ಎನ್ನುವ ಮೂಲಕ ಅವರನ್ನು ಹೆದರಿಸುವುದು ಸರಿಯಲ್ಲ. ಸರಿಯಾದ ಮಾಹಿತಿಯನ್ನು ನೀಡಿ ಜವಾಬ್ದಾರಿಯಿಂದ ವರ್ತಿಸಬೇಕು' ಎಂದು ನಟಿ ಹೇಳಿದ್ದಾರೆ. ಈ ಮೂಲಕ ತಾವು ಯಾರದ್ದೇ ಸಹಾಯ ಪಡೆದಿಲ್ಲ, ಹಾಗೂ ಈ ಕಾಯಿಲೆಗೆ ಅಷ್ಟೆಲ್ಲಾ ಖರ್ಚೂ ಆಗುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಈ ಕಾಯಿಲೆ ಕುರಿತು ಜನರಲ್ಲಿ ಭಯ ಹುಟ್ಟಿಸಬೇಡಿ ಎಂದೂ ಹೇಳಿಕೊಂಡಿದ್ದಾರೆ. 

ಅಂದಹಾಗೆ ನಟಿ ಸದ್ಯ ನಟನೆಯಿಂದ ಸಮಂತಾ ಅಲ್ಪಕಾಲಿಕ ಬ್ರೇಕ್ (break) ತೆಗೆದುಕೊಂಡಿದ್ದಾರೆ.   ಜೊತೆಗೆ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಇವರು ಮೊದಲು ತಮ್ಮ ಈ ಕಾಯಿಲೆಯ ಕುರಿತು  ಶಾಕುಂತಲಂ ಸಿನಿಮಾ ಪ್ರಮೋಷನ್ ಸಮಯದಲ್ಲಿ  ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ದರು. ಆದರೆ ಇದರ ನಡುವೆಯೇ ಚಿಕಿತ್ಸೆ ಪಡೆಯುವ ಸಮಯದಲ್ಲಿಯೇ ವಿಜಯ್ ದೇವರಕೊಂಡ ಜೊತೆ ಖುಷಿ (Khushi) ಚಿತ್ರದಲ್ಲಿ ಮತ್ತು ವರುಣ್ ಧವನ್ ಜೊತೆ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸಿದ್ದರು. ಈಗ ಇವುಗಳ ಶೂಟಿಂಗ್ ಮುಗಿದ ಬಳಿಕ ನಟಿ ಬ್ರೇಕ್ ತೆಗೆದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ.  

ಗುಟ್ಟಾಗಿ ಮದ್ವೆಯಾದ್ರಂತೆ ನಟಿ ರಶ್ಮಿಕಾ ಮಂದಣ್ಣ! ಹುಡುಗನ ಬಗ್ಗೆ ರಿವೀಲ್​ ಮಾಡಿದ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?