ರಶ್ಮಿಕಾ ಮಂದಣ್ಣ ಹಂದಿ ಮಾಂಸ ತಿಂತಾರಾ? ನ್ಯಾಶನಲ್ ಕ್ರಶ್ ಬಗ್ಗೆ ಮತ್ತೆ ಶುರುವಾಯ್ತು ಹಸಿಬಿಸಿ ಚರ್ಚೆ

By Suvarna NewsFirst Published Aug 5, 2023, 1:26 PM IST
Highlights

ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ವೆಜಿಟೇರಿಯನ್ನಾ ನಾನ್ ವೆಜಿಟೇರಿಯನ್ನಾ ಅನ್ನೋ ಡೌಟು ಕೆಲವು ತಿಂಗಳ ಹಿಂದೆ ನ್ಯಾಶನಲ್‌ ಲೆವೆಲ್‌ನಲ್ಲಿ ಸುದ್ದಿ ಮಾಡಿತ್ತು. ಈಗ ಅದೆಲ್ಲ ಬಿಟ್ಟು ರಶ್ಮಿಕಾ ಮಂದಣ್ಣ ಹಂದಿ ತಿನ್ನೋ ಚರ್ಚೆ ಶುರುವಾಗಿದೆ.

ರಶ್ಮಿಕಾ ಮಂದಣ್ಣ ಕೂತ್ರೂ ಸುದ್ದಿ, ನಿಂತ್ರೂ ಸುದ್ದಿ ಅನ್ನಂಗಾಗಿದೆ. ಈ ಚೋಟುದ್ದದ್ದ ಹೆಣ್ಣುಮಗಳು ತಲೆಕೆಟ್ಟು ಕೊಂಚ ಧಿಮಾಕಿಂದ ಏನಾದ್ರೂ ಅಂದುಬಿಟ್ಟಳೋ ಮುಗೀತು ಕತೆ, ಬೇಟೆಗೆ ಕಾಯ್ತಿರೋ ತೋಳಗಳಂತೆ ಟ್ರೋಲಿಗರು ಮುಗಿಬೀಳ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮೇಲೆ ಟ್ರೋಲ್ ಮಾಡಿ ಭರ್ಜರಿ ವ್ಯೂಸ್‌ ಪಡೆದರೆ ಅವರ ದಿನ ಸಾರ್ಥಕ. ಇರಲಿ, ಈ ರಶ್ಮಿಕಾ ಬಗ್ಗೆ ಈಗ ಒಂದು ವಿಚಾರ ಭಲೇ ಸೌಂಡ್‌ ಮಾಡ್ತಿದೆ. ಮತ್ತೇನಲ್ಲ, ಈ ಚೋಟು ಮೆಣಸಿನಕಾಯಿ ವೆಜ್ಜೋ ನಾನ್‌ವೆಜ್ಜೋ ಅಂತ. ಹಿಂದೊಂದು ವೀಡಿಯೋದಲ್ಲಿ ಈ ಕೊಡಗಿನ ಬಂಗಾರಿ ತಾನು ವೆಜಿಟೇರಿಯನ್‌ ಮಾತ್ರ ಅಲ್ಲ, ವೇಗನ್ ಕೂಡ ಆಗಿದ್ದೀನಿ ಅಂದುಬಿಟ್ಟು ಸುದ್ದಿಯಾಗಿದ್ರು. ನನಗೆ ಪ್ರಾಣಿಗಳನ್ನು ಕಂಡ್ರೆ ಸ್ಯಾನೆ ಪಿರೂತಿ. ಹೀಗಾಗಿ ಪ್ರಾಣಿಗಳನ್ನೆಲ್ಲ ತಿನ್ನೋದಿಲ್ಲ. ಬರೀ ಸೊಪ್ಪು ತರಕಾರಿ ತಿಂದು ಬದುಕ್ತೀನಿ ಅಂದಿದ್ರು. ಇದಾಗಿ ಕೆಲವು ದಿನದಲ್ಲಿ ಚಿಕನ್ ಆಡ್‌ನಲ್ಲಿ ಕಾಣಿಸಿಕೊಂಡಿದ್ರು.

ಅಲ್ಲವ್ವಾ ತಾಯಿ ನೀನು ಮಾಂಸ ತಿನ್ನಂಗಿಲ್ಲ ಅಂತ ಹೇಳಿದ್ದೆ, ಈಗ ನೋಡಿದ್ರೆ ಚಿಕನ್‌ ತಿನ್ನಿ ಅಂತ ಜನರಿಗೆ ಉಪದೇಶ ಮಾಡ್ತಿದ್ದೀಯ ಅಂತ ಟ್ರೋಲ್ ಮಾಡಿದ್ರು. ತನ್ನ ಯಡವಟ್ಟು ಗೊತ್ತಾಯ್ತೇನೋ. ನಾಲಿಗೆ ಕಚ್ಚಿ ಸುಮ್ಮನಾದ್ರು. ಆಮೇಲೆ ವೆಜ್ಜು ನಾನ್‌ವೆಜ್ಜು ತಂಟೆಗೆ ಹೋಗಲಿಲ್ಲ. ಯಡವಟ್ಟು ಹೇಳಿಕೆ ಕೊಟ್ಟು ಆಮೇಲೆ ತಲೆ ತಲೆ ಜಜ್ಜಿಕೊಳ್ಳೋದರಲ್ಲಿ, ಗೋಳೋ ಅಂತ ಕಣ್ಣೀರು ಹಾಕೋದ್ರಲ್ಲಿ ನಮ್ ರಶ್ಮಿಕಾ ಮೀರಿಸೋರಿಲ್ಲ ಅನ್ನೋದು ಕೆಲವು ಮಂದಿಯ ಲೆಕ್ಕಾಚಾರ. ಈಗ ಅವರು ಹಂದಿ ಮಾಂಸ ತಿನ್ನೋ ಬಗ್ಗೆ ಚರ್ಚೆ ಶುರುವಾಗೋ ಲಕ್ಷಣ ಕಾಣ್ತಿದೆ.

Latest Videos

ಒಂದು ಕಪ್ ಕೆಟ್ಟ ಕಾಫಿಗೆ 11 ಸಾವಿರ; ನನ್ನಿಂದಲೇ ಮೋದಿ UPI ಶುರು ಮಾಡಿದ್ದರು ಎಂದ ಮೇಘನಾ ರಾಜ್!

ಹೇಳಿ ಕೇಳಿ ಈ ಸುಂದರಿ ಕೊಡಗಿನವರು. ಕೂರ್ಗಿಗಳಲ್ಲಿ ಹಂದಿಮಾಂಸ ಸಖತ್ ಫೇಮಸ್. ಪಂದಿಕರಿ ಅಂತ ಕರೆಯೋ ಈ ಖಾದ್ಯ ಅವರ ಮನೆ ಫಂಕ್ಷನ್‌ಗಳಲ್ಲಿ(function), ಮದುವೆಗಳಲ್ಲಿ ಮಸ್ಟ್ ಆಂಡ್ ಶುಡ್ ರೆಸಿಪಿ. ಈ ಬಗ್ಗೆ ಮಾತಾಡಿರೋ ರಶ್ಮಿಕಾ ಕೊಡವರು ಹಂದಿಮಾಂಸವನ್ನು ಹೆಚ್ಚಾಗಿ ತಿನ್ನುತ್ತಾರೆ ಎಂದು ತಿಳಿಸಿದ್ದಾರೆ. ಹಂದಿಮಾಂಸವು ತಮ್ಮ ಸಾಂಪ್ರದಾಯಿಕ (traditional)ಭಕ್ಷ್ಯವಾಗಿದೆ. ಹಂದಿಮಾಂಸವನ್ನು ಬೆಂಕಿಯಲ್ಲಿ ಹುರಿದು ತಿನ್ನುತ್ತೇವೆ. ವೈನ್‌ನೊಂದಿಗೆ ಹಂದಿ ಮಾಂಸ ತಿನ್ನೋದನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ ಅಂತಲೂ ಸೇರಿಸಿದ್ದಾರೆ.

ಊಟ ಮಾಡಿ ಮಲಗಿದ ನಂತರ ಮನೆಯಲ್ಲಿಯೇ ತಯಾರಿಸಿದ ಎರಡು ಗ್ಲಾಸ್ ವೈನ್ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಹೇಳಿದಂತೆ ಹಂದಿ ಮಾಂಸ ಕೊಡಗಿನಲ್ಲಿ ತುಂಬಾ ಫೇಮಸ್. ಕೊಡಗಿನ ಪಂದಿ ಕರಿ ರೆಸಿಪಿ(recipe) ಭಿನ್ನವಾಗಿದ್ದು ರುಚಿಯೂ ಅದ್ಭುತವಾಗಿರುತ್ತದೆ.

ಕೊಡಗು, ಕರಾವಳಿ, ಮಲೆನಾಡಿನಲ್ಲಿಯೂ ಹಂದಿ ಮಾಂಸ ತುಂಬಾ ಫೇಮಸ್. ಹಂದಿ ಸುಕ್ಕ ಇಲ್ಲಿ ಉಳಿದೆಲ್ಲ ಆಹಾರದಂತೆ ಒಂದು ವಿಶೇಷ ಆಹಾರ. ಹಂದಿ ಮಾಂಸಕ್ಕೂ ಇಲ್ಲಿ ಭಾರೀ ಬೇಡಿಕೆ ಇದೆ. ಹಂದಿ ಸಾಕಣೆಗೂ ಇಲ್ಲಿ ಹೆಚ್ಚಿನ ಸ್ಕೋಪ್ ಇದೆ.

'ತಣ್ಣಗಾದ್ರೆ ಸೌದೆಗೆ ಏನ್‌ ಬೆಲೆ..' ಯೂಟ್ಯೂಬ್‌ನಲ್ಲಿ ಟೋಬಿ ಟ್ರೇಲರ್‌ ಬೆಂಕಿ!

ಸಾಮಾನ್ಯವಾಗಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ (social media) ತಮ್ಮ ಆಹಾರದ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಆಕರ್ಷಕವಾದ ಒಳ್ಳೊಳ್ಳೆಯ ಡೆಸರ್ಟ್ ಟ್ರೈ ಮಾಡುತ್ತಿರುತ್ತಾರೆ ರಶ್ಮಿಕಾ. ಆದರೆ ಸದ್ಯ ಮಳೆಗಾಲದಲ್ಲಿ ನಟಿಗೆ ಬೇರೊಂದು ಆಹಾರ ತಿನ್ನೋಕೆ ಇಷ್ಟವಾಗ್ತಿದ್ಯಂತೆ. ಅದು ಕೊರಿಯನ್ ಫ್ರೈಡ್ ಚಿಕನ್. ಇದು ಕೊರಿಯನ್ ಶೈಲಿಯ ಅತ್ಯಂತ ರುಚಿಕರವಾದ ಚಿಕನ್ ರೆಸಿಪಿ. ಕೊರಿಯನ್ ಫ್ರೈಡ್ ಚಿಕನ್ ಅನ್ನು ಕೊರಿಯಾ ಭಾಷೆಯಲ್ಲಿ ಚಿಕಿನ್ ಎಂದು ಕರೆಯಲಾಗುತ್ತದೆ. ಇದು ಫ್ರೈಡ್ ಚಿಕನ್ ಕ್ಯಾಟಗರಿಗೆ ಸೇರಿದೆ. ಇದನ್ನು ಸೀಸನ್ಡ್ ಚಿಕನ್ ಬಳಸಿ ಮಾಡಲಾಗುತ್ತದೆ.

ಸೋ ಸದ್ಯಕ್ಕೀಗ ಹೈದ್ರಾಬಾದ್, ಮುಂಬೈ ಅಂತ ಓಡಾಡ್ತಿರೋ ಕೊಡವ ಹುಡುಗಿಗೆ ಪಂದಿಕರಿ ತಿನ್ನೋ ಆಸೆ ಆಗಿದೆ. ಅದೂ ಅವಳೂರಿನ ಪಂದಿ ಕರಿ ಟೇಸ್ಟ್ ಮಾಡೋ ಬಯಕೆ ಆಗಿದೆ. ಅಲ್ಲಿಗೆ ಈ ಮೊಲದ ಮರಿಯಂತಿರೋ ಹುಡುಗಿ ಹಂದಿ ಮಾಂಸವನ್ನೂ ಚಪ್ಪರಿಸಿಕೊಂಡು ತಿನ್ತಾಳೆ ಅನ್ನೋದು ಪ್ರೂವ್‌ ಆದಂಗಾಯ್ತು.

click me!