ಬಾಲಿವುಡ್ನಲ್ಲಿ ಸೂಪರ್ಹಿಟ್ ಚಿತ್ರಗಳನ್ನು ನೀಡಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮೂಗಿನ ಶಸ್ತ್ರಚಿಕಿತ್ಸೆಯ ಬಳಿಕ ಖಿನ್ನತೆಗೆ ಜಾರಿದ್ದರು ಎನ್ನುವುದು ಗೊತ್ತೆ?
ನಟನಾ ಪ್ರಪಂಚವೆಂದರೆ ಹಾಗೆನೇ. ಅಡಿಯಿಂದ ಮುಡಿಯವರೆಗೆ ಎಲ್ಲವೂ ಚೆನ್ನಾಗಿಯೇ ಇರಬೇಕು. ಇಲ್ಲದಿದ್ದರೆ ಸೈಡ್ಲೈನ್ ಆಗುತ್ತಾರೆ. ಇದೇಕಾರಣಕ್ಕೆ ಬಣ್ಣದ ಲೋಕದ ಕನಸು ಕಂಡು ಬರುವ ಬಹುತೇಕ ಮಂದಿ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುವುದು ಉಂಟು. ಒಂದು ಕಾಲದಲ್ಲಿ ಇಡೀ ಬಾಲಿವುಡ್ ಆಳಿದ ನಟಿ ಶ್ರೀದೇವಿ (Shreedevi) ಕೂಡ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡವರೇ. ಇವರನ್ನು ಬಿಟ್ಟರೆ ಅಂದಿನಿಂದ ಇಂದಿನವರೆಗೂ ಬಹುತೇಕ ನಟ ನಟಿಯರು ತಮ್ಮ ದೇಹದ ವಿವಿಧ ಅಂಗಗಳ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಮೂಗು ಮತ್ತು ತುಟಿಗಳ ಸರ್ಜರಿ ಮಾಡಿಸಿಕೊಂಡವರೇ ಹೆಚ್ಚು. ಅದಕ್ಕಿಂತಲೂ ಹೆಚ್ಚಾಗಿ ಈಚೆಗೆ ಗ್ಲಾಮಸರ್ ಎನ್ನುವ ಪದ ಹೆಚ್ಚೆಚ್ಚು ಸದ್ದು ಮಾಡುತ್ತಿರುವ ಕಾರಣ, ತಮ್ಮ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಲು ಬಹುತೇಕ ನಟಿಯರು ಅವುಗಳಿಗೆ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಹಲವು ನಟಿಯರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಕೆಲವೊಂದು ಅಂಗಾಂಗಗಳಿಗೆ ಸರ್ಜರಿ ಮಾಡಿಸಿಕೊಳ್ಳುವಾಗ ಸ್ವಲ್ಪವೇ ಎಡವಡ್ಡು ಆದರೂ ಜೀವಕ್ಕೆ ಅಪಾಯ ಕಟ್ಟಿಟ್ಟದ್ದೇ. ಕೆಲವೊಂದು ಈ ರೀತಿಯ ಎಡವಟ್ಟು ಬಣ್ಣದ ಲೋಕದಿಂದ ಗೇಟ್ಪಾಸ್ ಮಾಡಿಸುವುದೂ ಉಂಟು. ಅಂಥದ್ದೇ ಒಂದು ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra).
ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಸಂದರ್ಶನವೊಂದರಲ್ಲಿ (Interview) ತಮ್ಮ 'ಡಾರ್ಕ್ ಫೇಸ್' ಬಗ್ಗೆ ಬಹಿರಂಗಪಡಿಸಿದ್ದಾರೆ. ಅದು ಅವರ ಮೂಗಿನ ಶಸ್ತ್ರಚಿಕಿತ್ಸೆಯ ಕುರಿತು. ಮೂಗನ್ನು ಅಂದ ಮಾಡಿಸಿಕೊಳ್ಳುವ ಸಲುವಾಗಿ ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ತಪ್ಪಾದಾಗ ತಾವು ಅನುಭವಿಸಿದ ಆಳವಾದ ಖಿನ್ನತೆಯ ಕುರಿತು ಮಾತನಾಡಿದ್ದಾರೆ. ಇದರೊಂದಿಗೆ, ಮೂಗು ಶಸ್ತ್ರಚಿಕಿತ್ಸೆ ಹದಗೆಟ್ಟ ಕಾರಣ, ಅನೇಕ ಚಿತ್ರಗಳಿಂದ ತಮ್ಮನ್ನು ತೆಗೆದುಹಾಕಲಾಗಿತ್ತು ಎಂಬ ಬಗ್ಗೆಯೂ ತಿಳಿಸಿದ್ದಾರೆ. 'ಶಸ್ತ್ರಚಿಕಿತ್ಸೆಯ ನಂತರ, ನನ್ನ ಮುಖವು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಲಾರಂಭಿಸಿತು ಮತ್ತು ಇದರಿಂದಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ' ಎಂದು ಪ್ರಿಯಾಂಕಾ ಹೇಳಿದ್ದಾರೆ. ನನ್ನ ವೃತ್ತಿಜೀವನ ಪ್ರಾರಂಭವಾಗುವ ಮೊದಲು ಕೊನೆಗೊಳ್ಳಲಿದೆ ಎಂದೇ ಭಾವಿಸಿದೆ. ಮೂರು ಚಿತ್ರಗಳು ನನ್ನಿಂದ ಕೈಬಿಟ್ಟು ಹೋದವು. ಆಗ ನನ್ನ ನೆರವಿಗೆ ನಿಂತವರು ನನ್ನ ತಂದೆ. ನಾನು ಏನಾದರೂ ಮಾಡಿಕೊಂಡು ಬಿಡುತ್ತೇನೆ ಎಂಬ ಭಯದಲ್ಲಿ ನಾನು ನಿನ್ನೊಂದಿಗೆ ರೂಮಿನಲ್ಲಿ ಇರುತ್ತೇನೆ ಎಂದು ನನ್ನ ತಂದೆ ಹೇಳಿ ನನ್ನ ಜೊತೆ ಇರುತ್ತಿದ್ದರು ಎಂದಿದ್ದಾರೆ ನಟಿ.
Met Gala 2023: ಪ್ರಿಯಾಂಕಾ ಧರಿಸಿರುವ ನೆಕ್ಲೆಸ್ ರೇಟ್ಗೆ ಹತ್ತಾರು ಬಂಗ್ಲೆ ಖರೀಸ್ಬೋದು!
ಬಾಲಿವುಡ್ ನಿರ್ದೇಶಕ ಅನಿಲ್ ಶರ್ಮಾ (Anil Sharma) ಅವರನ್ನು ಶ್ಲಾಘಿಸಿದ ಪ್ರಿಯಾಂಕಾ, 'ಚಿತ್ರದಲ್ಲಿ ನಾನು ನಾಯಕಿಯಾಗಿ ನಟಿಸಬೇಕಾಗಿತ್ತು, ಆದರೆ ಇದ್ದಕ್ಕಿದ್ದಂತೆ ನನ್ನನ್ನು ಸೈಡ್ ರೋಲ್‌ಗೆ ಬದಲಾಯಿಸಲಾಯಿತು. ಆ ಚಿತ್ರನಿರ್ಮಾಪಕ (ಅನಿಲ್ ಶರ್ಮಾ) ತುಂಬಾ ಕರುಣಾಮಯಿ. ಎಲ್ಲವೂ ನನ್ನ ವಿರುದ್ಧವಾಗಿದ್ದಾಗ, ನನ್ನ ಪರ ನಿಂತರು. ಚಿತ್ರದಲ್ಲಿ ನಿನ್ನ ರೋಲ್ ಸ್ವಲ್ಪವೇ ಇದ್ದರೂ, ಸಂಪೂರ್ಣ ಪ್ರಯತ್ನದಿಂದ ಅದನ್ನು ನಿಭಾಯಿಸಬೇಕು ಎಂದರು. ನಾನು ಅದಕ್ಕೆ ತಲೆಬಾಗಿ ಅವರು ಹೇಳಿದ್ದನ್ನು ಪಾಲಿಸಿದೆ. ಇದರಿಂದ ನನಗೆ ಅವಕಾಶಗಳು ಸಿಕ್ಕವು ಎಂದಿದ್ದಾರೆ ಪ್ರಿಯಾಂಕಾ. ಅಂದಹಾಗೆ ಅವರು ಮಾತನಾಡಿದ್ದು. ಅವರ ಮೊದಲ ಹಿಂದಿ ಚಿತ್ರ 'ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ'.
ಈ ಶಸ್ತ್ರಚಿಕಿತ್ಸೆ (Operation) ಬಗ್ಗೆ ಪ್ರಿಯಾಂಕಾ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಅವರು ಈ ಕಥೆಯನ್ನು 2021 ರಲ್ಲಿ ಬಂದ ತಮ್ಮ ಅನ್‌ಫಿನಿಶ್ಡ್ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಇತ್ತೀಚೆಗೆ ಮೆಟ್ ಗಾಲಾ 2023 ರಲ್ಲಿ ಗಾಯಕ ಪತಿ ನಿಕ್ ಜೋನಾಸ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. 240 ಕೋಟಿ ರೂಪಾಯಿ ಬೆಲೆಯ ವಜ್ರದ ನೆಕ್ಲೆಸ್ ಧರಿಸಿ ಅವರು ಸುದ್ದಿಯಾಗಿದ್ದಾರೆ.
ಬಾತ್ರೂಮಲ್ಲಿ ಕದ್ದುಮುಚ್ಚಿ ಊಟ ಮಾಡಿದ ದಿನ ನೆನಪಿಸಿಕೊಂಡ Priyanka Chopra