ಯಾವುದೇ ಕಾರಣಕ್ಕೂ ಟ್ಯಾಟೂ ಹಾಕಿಸಿಕೊಳ್ಳಬೇಡಿ; ಯುವಕರಿಗೆ ಸಮಂತಾ ಸಲಹೆ

By Shruiti G KrishnaFirst Published Apr 19, 2022, 12:44 PM IST
Highlights

ತೆಲುಗು ಸ್ಟಾರ್ ನಟಿ ಸಮಂತಾ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಂತಾ ಹೀಗೆ ಹೇಳಿದ್ದಾರೆ. ಅಂದಹಾಗೆ ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೆಸರನ್ನು ಟ್ಯೂಟೂ ಹಾಕಿಸಿಕೊಂಡಿದ್ದರು. 

ಭಾರತೀಯ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಸಮಂತಾ ರುತ್ ಪ್ರಭು(Samantha) ಕೂಡ ಒಬ್ಬರು. ತೆಲುಗು ಮತ್ತು ತಮಿಳು ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಭಾರಿ ಬೇಡಿಕೆ ಹೊಂದಿರುವ ಸಮಂತಾ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ನಾಗ ಚೈತನ್ಯ(Naga Chaitanya) ಅವರಿಂದ ವಿಚ್ಛೇದನ ಪಡೆದು ದೂರ ಆದ ಬಳಿಕ ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ನೀಡುತ್ತಿದ್ದಾರೆ.

ಸಿನಿಮಾ ಕೆಲಸಗಳ ನಡುವೆಯೂ ಸಮಂತಾ ಇತ್ತೀಚಿಗಷ್ಟೆ ಅಭಿಮಾನಿಗಳ ಜೊತೆ ಸಮಾಜಿಕ ಜಾಲತಾಣದಲ್ಲಿ ಸಂವಾದ ನಡೆಸಿದ್ದಾರೆ. ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದ್ದ ಸಮಂತಾಗೆ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಎದುರಾಗಿವೆ. 'ಭವಿಷ್ಯದಲ್ಲಿ ಮತ್ತೆ ಟ್ಯಾಟೂ ಹಾಕಿಸಿಕೊಳ್ಳುವ ಬಗ್ಗೆ ಪ್ಲಾನ್ ಮಾಡಿದ್ದೀರಾ' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಮಂತಾ 'ನಾನು ನನ್ನ ಯುವಕರಿಗೆ ಹೇಳುವ ಮುಖ್ಯವಾದ ವಿಷಯ ಎಂದರೆ ಯಾವತ್ತು ಯಾವಾಗಲು ಟ್ಯಾಟೂ(Tatto) ಹಾಕಿಸಿಕೊಳ್ಳಬೇಡಿ' ಎಂದು ಹೇಳಿದ್ದಾರೆ.

Latest Videos

ಅಂದಹಾಗೆ ಸಮಂತಾ ಹೀಗೆ ಹೇಳಲು ಕಾರಣನು ಇದೆ. ಸಮಂತಾ, ನಾಗಚೈತನ್ಯ ಜೊತೆ ಪ್ರೀತಿಯಲ್ಲಿದ್ದಾಗ ಅನೇಕ ಟ್ಯಾಟುಗಳನ್ನು ಹಾಕಿಸಿಕೊಂಡಿದ್ದರು. ಕೈ, ಕತ್ತಿನ ಹಿಂಭಾಗ ಮತ್ತು ಎದೆಯ ಕೆಳಭಾಗದಲ್ಲಿ ಸಮಂತಾ ಚಾಯ್ ಎಂದು ಟ್ಯಾಟು ಹಾಕಿಸಿಕೊಂಡಿದ್ದರು. ಕೈಯಲ್ಲಿ ಸ್ಯಾಮ್ ಮತ್ತು ಚೈ ಇಬ್ಬರು ಒಂದೇ ರೀತಿಯ ಟ್ಯಾಟೂ ಹಾಕಿಸಿಕೊಂಡಿದ್ದರು. ಸಮಂತಾ ಸಂಪೂರ್ಣವಾಗಿ ಟ್ಯಾಟೂ ರಾಣಿ ಆಗಿದ್ದರು. ಆದರೀಗ ಬದಲಾಗಿದ್ದಾರೆ. ನಾಗ ಚೈತನ್ಯ ಅವರಿಂದ ದೂರ ಆದ ಬಳಿಕ ಟ್ಯಾಟೂ ಮೇಲಿನ ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಯಾವುದೇ ಟ್ಯಾಟು ಹಾಕಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಯಾರು ಹಾಕಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ಸಮಂತಾರಿಂದ ದೂರ ಆಗಿರುವ ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾದ್ರಾ?

ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಸದ್ಯ ಸಾಲು ಸಾಲು ಸಿನಿಮಾಳಲ್ಲಿ ಬ್ಯುಸಿಯಾಗಿದ್ದಾರೆ. ಶಾಕುಂತಲಂ ಸಿನಿಮಾ ಚಿತ್ರೀಕರಣ ಮುಗಿಸಿರುವ ಸಮಂತಾ ಯಶೋಧ, ಆರೆಂಜ್ ಮೆಂಟ್ಸ್ ಆಫ್ ಲವ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಕಾದು ವಾಕುಲ ರೆಂಡು ಕಾದಲ್ ಚಿತ್ರೀಕರಣ ಮುಗಿಸಿದ್ದು ಏಪ್ರಿಲ್ 28ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ಯಶೋಧ ಸಿನಿಮಾದಲ್ಲೂ ಸಮಂತಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಉನ್ನಿ ಮುಕುಂದನ್, ವರಲಕ್ಷ್ಮೀ ಶರತ್ ಕುಮಾರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲೂ ಸಮಂತಾ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ಆಕ್ಷನ್ ದೃಶ್ಯಕ್ಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ನಿರ್ದೇಶನ ಮಾಡುತ್ತಿದ್ದಾರೆ.

ಫಿಟ್ನೆಸ್ ಫ್ರೀಕ್ ಸಮಂತಾ ವರ್ಕೌಟ್ ಗೆ ಫ್ಯಾನ್ಸ್ ಫಿದಾ; ವಿಡಿಯೋ ವೈರಲ್

ದಕ್ಷಿಣ ಭಾರತೀಯ ಸಿನಿಮಾಗಳ ಜೊತೆಗೆ ಸಮಂತಾ ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕರಾದ ರಾಜ್ ಮತ್ತು ಡಿಕೆ ಜೊತೆ ಮತ್ತೆ ಕೆಲಸ ಮಾಡುತ್ತಿದ್ದಾರೆ. ಸಿಟಾಡೆಲ್ ಎನ್ನುವ ವೆಬ್ ಸರಣಿಯಲ್ಲಿ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ಬಾಲಿವುಡ್ ಸ್ಟಾರ್ ನಟ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

click me!