ಎರಡನೇ ಮದ್ವೆಯಾಗ್ತೀರಾ ಎಂದು ನಟಿ ಸಮಂತಾ ರುತ್ ಪ್ರಭು ಅವರಿಗೆ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದಾಗ, ನಟಿ ಕೊಟ್ಟ ಅಂಕಿ- ಅಂಶವೇನು?
ಸಿನಿ ಕ್ಷೇತ್ರದ ಕ್ಯೂಟ್ ಜೋಡಿ ಎಂದೇ ಬಿಂಬಿತವಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ಮದುವೆ ಮರಿದು ಬಿದ್ದು ವರ್ಷಗಳೇ ಆಗಿವೆ. ಹಲವು ವರ್ಷಗಳ ಕಾಲ ಪ್ರೀತಿ ಮಾಡಿ, ಆನಂತರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2017ರಲ್ಲಿ ಮದುವೆ ಆಗಿದ್ದರು. ಆದರೆ ಆ ಮದುವೆ ಬಹಳ ಕಾಲ ಇರಲಿಲ್ಲ. 2021ರಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿತು. ಇಬ್ಬರು ಕೂಡ ಈಗ ತಮ್ಮದೇ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆ ನಟ ನಾಗ ಚೈತನ್ಯ ಅವರು ಎರಡನೇ ಮದುವೆ ಆಗುವುದಕ್ಕೆ ರೆಡಿ ಆಗುತ್ತಿದ್ದಾರೆ ಎಂಬ ಗಾಸಿಪ್ ಇದ್ದು, ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ನಡುವೆಯೇ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ. ಇವರಿಬ್ಬರ ವಿಚ್ಛೇದನಕ್ಕೆ ಹಲವಾರು ಮಂದಿ ತಮ್ಮದೇ ಆದ ಕಾರಣಗಳನ್ನು ನೀಡುತ್ತಲೇ ಬಂದಿದ್ದಾರೆ. ಇವರ ಡಿವೋರ್ಸ್ ವಿಷಯ ಸದಾ ಚರ್ಚೆಯಲ್ಲಿದೆ.
ಕೆಲ ದಿನಗಳ ಹಿಂದೆ ಡಿವೋರ್ಸ್ ಕುರಿತಾಗಿ ಸಮಂತಾ ಮಾತನಾಡಿದ್ದರು. ಚಿಕಿತ್ಸೆಗಾಗಿ ಮೊದಲು ಅಮೆರಿಕಕ್ಕೆ ಹೋಗಿದ್ದ ಅವರು ಭೂತಾನ್‌ಗೆ ಹೋಗಿದ್ದ ಸಂದರ್ಭದಲ್ಲಿ ನಾಗ ಚೈತನ್ಯ ಜೊತೆ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದರು. ನೀವು ನಿಮ್ಮ ತಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆ ನಟಿಗೆ ಎದುರಾಗಿತ್ತು. ಅದಕ್ಕೆ ನಟಿ, ನನ್ನದು ವಿಫಲ ಮದುವೆ. ಇದು ನನ್ನ ಆರೋಗ್ಯ ಹಾಗೂ ಕೆಲಸದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕಳೆದ ಎರಡು ವರ್ಷಗಳಿಂದ ನಾನು ಎಲ್ಲಿಲ್ಲದ ನೋವನ್ನು ಅನುಭವಿಸಿದ್ದೇನೆ. ಆ ಸಮಯದಲ್ಲಿ, ನಾನು ಹೆಚ್ಚು ಜೀವನದಲ್ಲಿ ನೋವಿಗೊಳಗಾದವರ ಬಗ್ಗೆ ಓದಿದ್ದೇನೆ. ಮತ್ತು ಅವರ ಕಥೆಗಳನ್ನು ಓದುವುದು ನನಗೆ ನನ್ನ ನೋವಿನಿಂದ ಹೊರಬರಲು ಸಹಾಯ ಮಾಡಿತು ಎಂದಿದ್ದರು. ಇದರ ಬೆನ್ನಲ್ಲೇ ಸಮಂತಾ ಎರಡನೆಯ ಮದ್ವೆಯಾಗುತ್ತಾರೆ ಎಂದೂ ಸುದ್ದಿ ಹರಿದಾಡುತ್ತಿದೆ.
ಟಾಪ್ಲೆಸ್ ಉರ್ಫಿ ಜಾವೇದ್ ಮೈತುಂಬಾ ಕಿಸ್: ಈ ಇಬ್ರು ಹೆಣ್ಮಕ್ಕಳು ಮಾಡ್ತಿರೋದೇನು? ವಿಡಿಯೋ ವೈರಲ್
ಇದರ ನಡುವೆಯೇ, ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಜನರ ಜೊತೆ ಸಂವಾದ ನಡೆಸುತ್ತಿದ್ದಾರೆ. ಫ್ಯಾನ್ಸ್ ಕೇಳೋ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಸಂಡೇ ಸ್ಪೇಷಲ್ ಎನ್ನುವ ಹಾಗೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅದಕ್ಕೆ ಉತ್ತರಿಸುತ್ತೇನೆ ಎಂದು ಬರೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಎರಡನೆಯ ಮದ್ವೆಯ ಕುರಿತು ಮಾತನಾಡಿದ್ದಾರೆ. ಅದಕ್ಕೆ ನಟಿ, ಅಂಕಿ ಅಂಶಗಳ ಮೂಲಕವೇ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಮದ್ವೆಯ ವಿಷ್ಯಕ್ಕೆ ಸದ್ಯ ತೆರೆ ಎಳೆದಿದ್ದಾರೆ. ನಗು ಮೊಗದ ಎಮೋಜಿ ಹಾಕಿ, ಎರಡನೇ ಮತ್ತು ಮೂರನೇ ಮದುವೆಗಳ ವಿಚ್ಛೇದನ ಜ ಅಂಕಿಅಂಶಗಳನ್ನು ಹಂಚಿಕೊಂಡು ಮತ್ತೆ ಮದ್ವೆಯಾಗುವುದಿಲ್ಲ ಎಂದು ಪರೋಕ್ಷವಾಗಿಯೇ ಹೇಳಿದ್ದಾರೆ. ‘ಅಂಕಿ ಅಂಶಗಳ ಪ್ರಕಾರ ಇದೊಂದು ಕೆಟ್ಟ ಹೂಡಿಕೆ’ ‘ಮೊದಲ ಮದುವೆಯಲ್ಲಿ ವಿಚ್ಛೇದನದ ಸಾಧ್ಯತೆ ಶೇ.50 ಇರುತ್ತದೆ. ಎರಡು ಹಾಗೂ ಮೂರನೇ ಮದುವೆಯಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇ. 67 ಹಾಗೂ ಶೇ.73 ಇರುತ್ತದೆ’ ಎಂದಿದ್ದಾರೆ.
ಅದೇ ಇನ್ನೊಂದೆಡೆ, ಸಮಂತಾ ಮತ್ತು ವಿಜಯ್ ದೇವರಕೊಂಡ ಅವರ ರೊಮ್ಯಾನ್ಸ್ ವಿಷಯ ಸದ್ದು ಮಾಡುತ್ತಲೇ ಇದೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಳಿ ಸುದ್ದಿ ಕೆಲ ತಿಂಗಳಿನಿಂದ ಹರಿದಾಡುತ್ತಿರುವ ನಡುವೆಯೇ ಈ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು. ಅದಕ್ಕೂ ಮುನ್ನ ಖುಷಿ ಸಿನಿಮಾದ ಟ್ರೈಲರ್ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್ ಪ್ರಭು ತಮ್ಮ ಕ್ರಷ್ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ್. ಇಲ್ಲಿಯವರೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರ ಹೆಸರು ಸಮಂತಾ ಜೊತೆ ಥಳಕು ಹಾಕಿಕೊಂಡಿದೆ.
ನಟನಾಗಬೇಕೆಂದ್ರೆ ಸಿನಿಮಾನೇ ಯಾಕೆ ಮಾಡ್ಬೇಕು? ದುಡ್ಡಿಗಾಗಿ ವಿಲನ್ನೂ ಆಗ್ಬಿಟ್ಟೆ: ಪ್ರಕಾಶ್ ರಾಜ್