Asianet Suvarna News Asianet Suvarna News

ಟಾಪ್​ಲೆಸ್​ ಉರ್ಫಿ ಜಾವೇದ್​ ಮೈತುಂಬಾ ಕಿಸ್​: ಈ ಇಬ್ರು ಹೆಣ್ಮಕ್ಕಳು ಮಾಡ್ತಿರೋದೇನು? ವಿಡಿಯೋ ವೈರಲ್

ಉರ್ಫಿ ಜಾವೇದ್​ ಟಾಪ್​ಲೆಸ್​ ಆಗಿದ್ದು, ಇಬ್ಬರು ಹೆಣ್ಣುಮಕ್ಕಳು ಅದೇನೋ ಮಾಡುವ ಪ್ರಯತ್ನದಲ್ಲಿ ಇರುವ ವಿಡಿಯೋ ವೈರಲ್​ ಆಗಿದೆ. ವಿಡಿಯೋ ವೈರಲ್​ ಆಗಿದೆ.
 

Urfi Javed is topless and  two girls trying to do something  has gone viral suc
Author
First Published Dec 17, 2023, 5:43 PM IST

ಈಗ ಎಲ್ಲೆಲ್ಲೂ ಅನಿಮಲ್​ ಚಿತ್ರದ ತೃಪ್ತಿ ಡಿಮ್ರಿಯದ್ದೇ ಮಾತು. ಈ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ರೊಮ್ಯಾನ್ಸ್​ ಮಾಡಿದ ನಟಿ ಟಾಪ್​-1 ಸ್ಥಾನಕ್ಕೇರಿದ್ದಾರೆ. ಈಕೆಯ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ. ನ್ಯಾಷನಲ್​ ಕ್ರಷ್​ ಪಟ್ಟವನ್ನೂ ಪಡೆದುಕೊಂಡಿದ್ದಾರೆ. ಅರೆಬರೆ ಬೆತ್ತಲಾಗಿ ಕಾಣಿಸಿಕೊಳ್ಳುವ ನಟಿಯರಿಗೆ ತೃಪ್ತಿ ಭಾರಿ ಶಾಕ್​ ನೀಡಿದ್ದಾರೆ. ಇವರಿಂದ ಸ್ಫೂರ್ತಿ ಪಡೆದೋ ಗೊತ್ತಿಲ್ಲ ಒಟ್ಟಿನಲ್ಲಿ ಈಗ ಅರೆ ಬೆತ್ತಲ ರಾಣಿ ಉರ್ಫಿ ಜಾವೇದ್​, ಸಂಪೂರ್ಣ ಟಾಪ್​ಲೆಸ್​ ಆಗಿ ಎದೆಯ ಭಾಗವನ್ನಷ್ಟೇ ಕೈಯಿಂದ ಮುಚ್ಚಿಕೊಂಡಿದ್ದಾರೆ. ಇದರ ವಿಡಿಯೋ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಅಷ್ಟಕ್ಕೂ, ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಬಿಕಿನಿ, ಬಟ್ಟೆ ಕ್ಲಿಪ್, ಚ್ಯುಯಿಂಗ್ ಗಮ್, ಮಕ್ಕಳಾಟಿಕೆ, ನ್ಯೂಸ್ ಪೇಪರ್, ಚಿಪ್ಸ ಪ್ಯಾಕೇಟ್, ಮಲ್ಲಿಗೆ ಹೂವು, ಪರದೆ ರೀತಿಯ ದಿರಿಸು, ಕಿವಿ ಹಣ್ಣಿನ ರೀತಿ, ಪ್ಲ್ಯಾಸ್ಟರ್ ಹೀಗೆ ವಿಭಿನ್ನ ವಿಶೇಷ ರೀತಿಯ ಬಟ್ಟೆಗಳನ್ನು ತೊಟ್ಟು ಟ್ರೋಲ್‌ಗೆ ಒಳಗಾಗುತ್ತಿದ್ದರೂ ಅದಕ್ಕೆ ಅವರು ತಲೆನೇ ಕೆಡಿಸಿಕೊಳ್ಳುವುದಿಲ್ಲ. ಬಟ್ಟೆ ಧರಿಸಿದರೆ ತಮಗೆ ಚರ್ಮಕ್ಕೆ ಅಲರ್ಜಿ ಆಗುತ್ತದೆ ಎಂದು ಕಾರಣವನ್ನೂ ಈ ಹಿಂದೆ ನೀಡಿದ್ದರು. ಅವರ ಬಟ್ಟೆ ಎಷ್ಟು ಫೇಮಸ್‌ ಎಂದರೆ, ಒಂದು ವೇಳೆ ಫುಲ್‌ ಡ್ರೆಸ್‌ ಧರಿಸಿದರೂ ಉರ್ಫಿ ಟ್ರೋಲ್‌ ಆಗುವುದುಂಟು.

 ತಮ್ಮ ಫ್ಯಾನ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿ ಬಟ್ಟೆ ಹಾಕಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿರುವ ಕಾರಣದಿಂದಾಗಿ  ಇನ್​ಸ್ಟಾಗ್ರಾಮ್ ಅಕೌಂಟ್ ಸಸ್ಪೆಂಡ್ ಆಗಿದೆಯೆಂದು ಈಚೆಗಷ್ಟೇ ಉರ್ಫಿ ಹೇಳಿದ್ದರು. ಈ ಕುರಿತು ಇನ್​ಸ್ಟಾಗ್ರಾಮ್ ನಟಿಗೆ ಸಂದೇಶ ಕಳಹಿಸಿದೆಯಂತೆ.  ನಾವು ನಿಮ್ಮ ಖಾತೆ ಸಸ್ಪೆಂಡ್ ಮಾಡುತ್ತೇವೆ. ನಿಮ್ಮ ಖಾತೆ ಜನರಿಗೆ ಕಾಣುವುದಿಲ್ಲ. ಈ ಕ್ಷಣ ನೀವು ಖಾತೆ ಬಳಸಲು ಸಾಧ್ಯವಿಲ್ಲ ಎಂದು ಇನ್​ಸ್ಟಾಗ್ರಾಮ್​ ನಟಿಗೆ ತಿಳಿಸಿದೆ.   ಇನ್​ಸ್ಟಾಗ್ರಾಮ್​ನ ಈ ನಿರ್ಧಾರವನ್ನು 180 ದಿನದಲ್ಲಿ ನೀವು ಪ್ರಶ್ನೆ ಮಾಡಬಹುದು. ಇಲ್ಲವಾದರೆ ನಿಮ್ಮ ಖಾತೆ ಶಾಶ್ವತವಾಗಿ ಬ್ಲಾಕ್ ಆಗುತ್ತದೆ ಎಂದು ಸೂಚಿಸಲಾಗಿದೆ.  ಈ ಕುರಿತು ಹೇಳಿಕೊಂಡಿದ್ದ ನಟಿ, ಆರು ತಿಂಗಳಿನಲ್ಲಿ ಈ ಬಗ್ಗೆ ನಾನು ಪ್ರಶ್ನೆ ಮಾಡದೇ ಹೋದರೆ ನನ್ನ ಇನ್​ಸ್ಟಾ ಖಾತೆ ಶಾಶ್ವತ ಬ್ಲಾಕ್​ ಆಗುತ್ತದೆ. ನಿಮಗೆ ಇದರಿಂದ ತುಂಬಾ ಖುಷಿಯಾಗಿರಬೇಕಲ್ಲವೆ ಎಂದು ಪ್ರಶ್ನಿಸಿದ್ದರು. 

ಉರ್ಫಿಯನ್ನು ಮದ್ವೆಯಾಗ್ತಾರಂತೆ ಬಿಗ್​ಬಾಸ್​ನಿಂದ ಹೊರಹಾಕಲ್ಪಟ್ಟ ಯುಟ್ಯೂಬರ್​! ಉಸ್ಸಪ್ಪಾ ಅಂದ ಫ್ಯಾನ್ಸ್​

ಆದರೆ ನಟಿ ಏನು ಮಾಡಿದ್ರೋ ಗೊತ್ತಿಲ್ಲ. ಈಗ ಮತ್ತೆ ಇನ್​ಸ್ಟಾಗ್ರಾಮ್​ನಲ್ಲಿ ನಟಿಯ ಹೊಸ ಅವತಾರ ಕಾಣಿಸಿಕೊಂಡಿದೆ. ಇಷ್ಟೇ ಆಗಿದ್ದರೆ ಅದೇನು ದೊಡ್ಡ ವಿಷ್ಯವೇ ಆಗುತ್ತಿರಲಿಲ್ಲವೇನೋ. ಏಕೆಂದರೆ ಬಹುತೇಕ ತನ್ನ ದೇಹದ ಭಾಗಗಳನ್ನು ನಟಿ ತೋರಿಸಿಯಾಗಿದೆ. ಆದರೆ ಈ ವಿಡಿಯೋದಲ್ಲಿ ಇನ್ನಿಬ್ಬರು ಹೆಣ್ಣುಮಕ್ಕಳು ನಟಿಗೆ ತೊಂದರೆ ಕೊಡುತ್ತಿದ್ದು, ಇದನ್ನು ನೋಡಿ ಉಫ್​ ಅನ್ನುತ್ತಿದ್ದಾರೆ ಫ್ಯಾನ್ಸ್​. ತಮ್ಮ ದೇಹದ ಮೇಲೆ ಉರ್ಫಿ ಕೈಯಿಟ್ಟಿದ್ದು, ಆ ಕೈಯನ್ನು ತೆಗೆಸುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ. ಈ ಇಬ್ಬರು ಹೆಣ್ಣುಮಕ್ಕಳು ಉರ್ಫಿಯ ಕೈಯನ್ನು ತೆಗೆಸಿ ಏನು ಸಾಬೀತು ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ವೈರಲ್​ ವಿಡಿಯೋ ನೋಡಿ ಉರ್ಫಿ ಫ್ಯಾನ್ಸ್​ ಕಣ್​ ಕಣ್​ ಬಿಡುತ್ತಿದ್ದಾರೆ. ಯಾವಾಗ ತಮ್ಮ ಇನ್​ಸ್ಟಾ ಬ್ಲಾಕ್​ ಆಗುತ್ತದೆಯೋ ಗೊತ್ತಿಲ್ಲ ಎಂದು ಕ್ಯಾಪ್ಷನ್​ ಕೂಡ ನೀಡಿದ್ದಾರೆ ನಟಿ. 

ಅಂದಹಾಗೆ ಉರ್ಫಿ ಅವರು, ತಮ್ಮ ಬಟ್ಟೆಯಿಂದಲೇ ಸೆನ್​ಸೇಷನ್​ ಕ್ರಿಯೇಟ್​ ಮಾಡುತ್ತಿದ್ದು, ಈ ಮೂಲಕವೇ,  4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ ಗಳಿಸಿದ್ದಾರೆ. ಇವರು ಏನೇ ಡ್ರೆಸ್​ ಹಾಕಿದರೂ ಟ್ರೋಲ್​ ಮಾಡುತ್ತಲೇ ಈಕೆಯ ಫ್ಯಾನ್ಸ್​ ನಟಿಯ ಫಾಲೋವರ್ಸ್​ ಸಂಖ್ಯೆ ಹೆಚ್ಚು ಮಾಡಿದ್ದದಾರೆ. ಇದೀಗ ನಟಿ ಮಾತ್ರವಲ್ಲದೇ ಆಕೆಯ ಫ್ಯಾನ್ಸ್​ಗೂ ಸಕತ್​ ನಿರಾಸೆಯಾಗಿದೆ. ನಿಮ್ಮನ್ನು ಇನ್​ಸ್ಟಾಗ್ರಾಮ್​ನಲ್ಲಿ ನೋಡಿ ಕಣ್ಣು ತುಂಬಿಸಿಕೊಳ್ತಿದ್ದೆವು. ಇನ್ನೆಲ್ಲಿ ಈಗ ನಿಮ್ಮನ್ನು ನೋಡುವುದು ಎಂದು ಫ್ಯಾನ್ಸ್​ ಪ್ರಶ್ನೆ ಕೇಳಿರುತ್ತವ ನಡುವೆಯೇ, ನಟಿಯನ್ನು ಮದುವೆಯಾಗಲು ಖ್ಯಾತ ಯುಟ್ಯೂಬರ್​ ಒಬ್ಬರು ಮುಂದೆ ಬಂದಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ಯುಟ್ಯೂಬರ್​ ಪುನೀತ್ ಕುಮಾರ್ ಅಕಾ ಪುನೀತ್ ಸೂಪರ್‌ಸ್ಟಾರ್, ಅರೆ ಉರ್ಫಿ ನಾನು ನಿನ್ನನ್ನು ಪ್ರೀತಿಸುತ್ತೇನೆ. ಮದುವೆಯಾಗುತ್ತೇನೆ ಎಂದಿದ್ದು, ಅದು ಸಕತ್​ ವೈರಲ್​ ಆಗುತ್ತಿದೆ.

ದೀಪಿಕಾ-ರಣಬೀರ್​ ಜೋಡಿ ವಿಷ್ಯದಲ್ಲಿ ಮಧ್ಯ ಬೆರಳು ತೋರಿ ಅಸಭ್ಯವಾಗಿ ವರ್ತಿಸಿದ ಕರಣ್​ ಜೋಹರ್​!

 
 
 
 
 
 
 
 
 
 
 
 
 
 
 

A post shared by Uorfi (@urf7i)

Follow Us:
Download App:
  • android
  • ios