ಸಮಂತಾ ಮುಖ ಅಜ್ಜಿಯಂತೆ ಅಂದ ನಿರ್ಮಾಪಕರಿಗೆ ನಟಿ ಕೊಟ್ಟ ಹಿಲೇರಿಯಸ್ ಉತ್ತರ ನೋಡಿ!

Published : Apr 24, 2023, 01:34 PM IST
ಸಮಂತಾ ಮುಖ ಅಜ್ಜಿಯಂತೆ ಅಂದ ನಿರ್ಮಾಪಕರಿಗೆ ನಟಿ ಕೊಟ್ಟ ಹಿಲೇರಿಯಸ್ ಉತ್ತರ ನೋಡಿ!

ಸಾರಾಂಶ

ತೆಲುಗು ನಿರ್ಮಾಪಕ ಚಿಟ್ಟಿಬಾಬು ಸಮಂತಾ ಮುಖ ಅಜ್ಜಿಯಂತೆ ಅಂದು ಆಕೆ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರು. ಇದೀಗ ಚಿಟ್ಟಿಬಾಬು ಕಿವಿ ಮೇಲಿನ ಕೂದಲನ್ನೇ ಟಾರ್ಗೆಟ್ ಮಾಡಿ ಸಮಂತಾ ಕೊಟ್ಟ ಹಿಲೇರಿಯಸ್ ಉತ್ತರ ನೋಡಿ..

ಸಾರ್ವಜನಿಕವಾಗಿ ಸಮಂತಾ ರುತ್ ಪ್ರಭು ನಡೆ, ನುಡಿ, ಮಾತುಗಳು ಜಾಣತನದಿಂದ ಕೂಡಿರುತ್ತವೆ. ವೈಯುಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದರೂ ಆಕೆ ಎಲ್ಲರ ಮುಂದೆ ಬಹಳ ಪ್ರಬುದ್ಧವಾಗಿ ನಡೆದುಕೊಂಡರು. ತನ್ನ ಮೇಲಾಗುತ್ತಿದ್ದ ಟ್ರೋಲ್‌ಗಳು, ಕೆಟ್ಟ ಮಾತುಗಳು, ಅಸಹ್ಯ ಕಮೆಂಟ್‌ಗಳಿಂದ ಧೃತಿಗೆಟ್ಟು ಕೋರ್ಟ್ ಮೆಟ್ಟಿಲೇರಿದರೂ ಕೆಟ್ಟದಾಗಿ ಮಾತನಾಡಿದವರಲ್ಲ. ಬದಲಿಗೆ ಮಾತಿನಲ್ಲಿ ಒಂದು ಘನತೆ ಜಾಣ್ಮೆ ಎಂದಿಗೂ ಉಳಿಸಿಕೊಂಡವರು. ಮೊದಲೆಲ್ಲ ಕೆಟ್ಟ ಕಮೆಂಟ್ ಬಂದರೆ ನೊಂದುಕೊಳ್ಳುತ್ತಿದ್ದ ಆ ಬಗ್ಗೆ ನೋವು ತೋಡಿಕೊಳ್ಳುತ್ತಿದ್ದ ಈ ನಟಿ ಇದೀಗ ಅಂಥಾ ಮಾತುಗಳಿಗೂ ಹರಿತ ಮಾತುಗಳಿಂದ ತಿರುಗೇಟು ನೀಡಲು ಕಲಿತಿದ್ದಾರೆ. ಅವರ ಹೊಸ ಪ್ರಯೋಗ ನಿರ್ಮಾಪಕ ಚಿಟ್ಟಿಬಾಬು ಮೇಲೆ. 'ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ಅವರು ಸರ್ಚ್​ ಮಾಡಿದ್ದಾರೆ. ಅದಕ್ಕೆ ಗೂಗಲ್​ ತೋರಿಸಿದ ಉತ್ತರವನ್ನು ಸ್ಕ್ರೀನ್​ ಶಾಟ್​ ತೆಗೆದುಕೊಂಡು ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಚಿಟ್ಟಿಬಾಬು ತನ್ನ ಬಗ್ಗೆ ಮಾಡಿದ್ದ ಕೆಟ್ಟ ಕಮೆಂಟ್‌ಗೆ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ನಿರ್ಮಾಪಕ ಚಿಟ್ಟಿಬಾಬು ಅವರು ಸಮಂತಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಈಗ ಅವರಿಗೆ ಸಮಂತಾ ತಿರುಗೇಟು ನೀಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಒಂದು ಸ್ಕ್ರೀನ್​ ಶಾಟ್​ ಹಂಚಿಕೊಳ್ಳುವ ಮೂಲಕ ಅವರು ವ್ಯಂಗ್ಯ ಮಾಡಿದ್ದಾರೆ. ನೇರವಾಗಿ ಚಿಟ್ಟಿಬಾಬು ಹೆಸರನ್ನು ಅವರು ಪ್ರಸ್ತಾಪ ಮಾಡದಿದ್ದರೂ ಕೂಡ ನೆಟ್ಟಿಗರಿಗೆ ಎಲ್ಲವೂ ಅರ್ಥವಾಗಿದೆ. ಚಿಟ್ಟಿಬಾಬು ಅವರ ಕಿವಿಯಲ್ಲಿ ಸಿಕ್ಕಾಪಟ್ಟೆ ಕೂದಲು ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ಸಮಂತಾ ಅವರು ಗೂಗಲ್​ನಲ್ಲಿ ಪತ್ತೆ ಹಚ್ಚಿದ್ದಾರೆ.

'ಮನುಷ್ಯರ ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ರುತ್​ ಪ್ರಭು ಅವರು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ. ಅದಕ್ಕೆ ಗೂಗಲ್​ ತೋರಿಸಿದ ಉತ್ತರವನ್ನು ಸ್ಕ್ರೀನ್​ ಶಾಟ್​ ತೆಗೆದುಕೊಂಡು ಅದನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ‘ಲೈಂಗಿಕ ಆಸಕ್ತಿಗೆ ಸಂಬಂಧಿಸಿದ ಟೆಸ್ಟಾಸ್ಟಿರಾನ್​ ಹಾರ್ಮೋನ್​ ಜಾಸ್ತಿ ಇರುವ ಪುರುಷರ ಕಿವಿಯಲ್ಲಿ ಕೂದಲು ಬೆಳೆಯುತ್ತದೆ’ ಎಂಬ ಮಾಹಿತಿ ಈ ಸ್ಕ್ರೀನ್ ಶಾಟ್​ನಲ್ಲಿದೆ. ಇದು ನಿರ್ಮಾಪಕ ಚಿಟ್ಟಿಬಾಬು ಕುರಿತಾಗಿಯೇ ಸಮಂತಾ ಹೇಳಿದ್ದರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಹೆಂಡತಿ 5 ತಿಂಗಳ ಗರ್ಭಿಣಿ, ಸಾಯ್ತೀನಿ ಅಂತ ಹೆದರಿಸಲು ಹೋಗಿ ಕುತ್ತಿಗೆ ಲಾಕ್ ಆಗಿದೆ; ಸಂಪತ್ ಜಯರಾಮ್‌ ಸಾವಿನ ರಹಸ್ಯ ಬಯಲು

'ಸಮಂತಾಳನ್ನು ಯಾರೂ ತಮ್ಮ ಸಿನಿಮಾಗಳಲ್ಲಿ ಹಾಕಿಕೊಳ್ಳುತ್ತಿಲ್ಲ. ಅದಕ್ಕೆಂದೇ ಆಕೆ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಿದ್ದಾಳೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಅಂಥ ಮುಖ ಇಟ್ಟುಕೊಂಡು ಶಕುಂತಲೆಯ ಪಾತ್ರ ಹೇಗೆ ಮಾಡುತ್ತಾಳೋ ಏನೋ? ಕ್ಯಾಮೆರಾಮ್ಯಾನ್ ಏನಾದರೂ ಗಿಮಿಕ್ ಮಾಡಬೇಕು ಅಷ್ಟೆ. ಟಾಪ್ ಹೀರೋಯಿನ್ ಪಟ್ಟದಿಂದ ಆಕೆ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದೇ ಕಾರಣಕ್ಕೆ ‘ಪುಷ್ಪ’ ಸಿನಿಮಾದಲ್ಲಿ ಊ ಅಂಟಾವ, ಊಹು ಅಂಟಾವ ಥರಹದ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಇನ್ನೂ ಸ್ವಲ್ಪ ದಿನ ಇಂಡಸ್ಟ್ರಿಯಲ್ಲಿ ಇರಬೇಕೆಂಬ ಕಾರಣಕ್ಕೆ ಆ ರೀತಿಯ ಹಾಡುಗಳಲ್ಲಿ ನಟಿಸುತ್ತಿದ್ದಾಳೆ’ ಎಂಬ ಚಿಟ್ಟಿಬಾಬು ಮಾತುಗಳು ಸಾಕಷ್ಟು ವಿವಾದ ಹುಟ್ಟುಹಾಕಿದ್ದವು. 'ಶಕುಂತಲೆ ಅಪ್ರತಿಮ ಸುಂದರಿ. ಆದರೆ ಆ ಪಾತ್ರ ಮಾಡಿರುವ ಸಮಂತಾ ಅದಕ್ಕೆ ಸೂಟ್ ಆಗಿಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಅದಕ್ಕಾಗಿ ಜನರನ್ನು ಸೆಳೆಯಲು ತಾನು ಸತ್ತು ಹೋಗುತ್ತೇನೆ.. ಅದೂ ಇದು ಅಂತ ಡ್ರಾಮಾ ಮಾಡುತ್ತಿರುತ್ತಾಳೆ. ಆಕೆಯ ಕರಿಯರ್ ಮುಗಿದು ಹೋಗಿದೆ. ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್​ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೆಲ್ಲ ಪ್ರಚಾರ ತಂತ್ರ. ಹಿಂದೆ ಹಲವು ಕಲಾವಿದರು ತೀವ್ರ ಜ್ವರದ ನಡುವೆಯೂ ಸಿನಿಮಾಗಳಲ್ಲಿ ನಟಿಸಿದ್ದುಂಟು. ಈಕೆ ಮಾತ್ರ ಸುಮ್ಮ ಸುಮ್ಮನೇ ಸ್ಕೋಪ್ ತೆಗೆದುಕೊಳ್ತಾಳೆ ಎಂದು ಚಿಟ್ಟಿಬಾಬು ಹಗುರವಾಗಿ ಮಾತನಾಡಿದ್ದರು. ಇದೀಗ ಅವರಿಗೆ ವ್ಯಂಗ್ಯದಿಂದ ಹರಿತವಾಗಿ ತಿರುಗೇಟು ನೀಡಿದ್ದು, ಆಕೆಯ ಫ್ಯಾನ್ಸ್‌ ನಟಿಯ ಜಾಣ್ಮೆಯನ್ನು ಹೊಗಳುತ್ತಿದ್ದಾರೆ.

ಮನೆಬಾಗಿಲಲ್ಲಿ ಅಲಿಯಾ ಬಿಚ್ಚಿಟ್ಟ ಚಪ್ಪಲಿ ಎತ್ತಿಟ್ಟ ರಣಬೀರ್: ಅಭಿಮಾನಿಗಳ ಹೃದಯಗೆದ್ದ ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?