ತಂದೆ ಸೈಫ್ ಅಲಿ ಖಾನ್ ಜೀವನದ ಬಗ್ಗೆ ತುಂಬಾ ಇಷ್ಟವಾಗುವ ವಿಚಾರದ ಬಗ್ಗೆ ರಿವೀಲ್ ಮಾಡಿದ ಪುತ್ರಿ. ಇಂಟರ್ನೆಟ್ ಪ್ರಪಂಚದಲ್ಲಿ ಫೇಮ್ ಗಳಿಸುವುದು ಕಷ್ಟವೇ?
ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್‌ಗೆ ಹುಟ್ಟಿರುವ ಸಾರಾ ಅಲಿ ಖಾನ್ ಈಗ ಬಿ-ಟೌನ್ ಪ್ರಪಂಚದ ರೂಲಿಂಗ್ ಕ್ವೀನ್. ತಂದೆ ತಾಯಿ ದೂರ ಆದ್ಮೇಲೆ ಹೇಗೋ ಏನೋ ಎನ್ನುತ್ತಿದ್ದ ಜನರಿಗೆ ತಂದೆನೇ ಸ್ಫೂರ್ತಿ ಎನ್ನುತ್ತಾರೆ ಸಾರಾ.
'ನನ್ನ ತಂದೆ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಾರೆ ಕೆಲವನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ ಆದರೆ ಫ್ಯಾಮಿಲಿ ತುಂಬಾ ಮುಖ್ಯವಾಗುತ್ತದೆ. ಬಾಂದ್ರಾ ಜುಹೂ ಬಿಟ್ಟು ಹೊರ ಹೋಗುವುದು ಖುಷಿ ಕೊಡುತ್ತದೆ, ವಿದೇಶ ಪ್ರಯಾಣ ಮಾಡುವುದು ಮುಖ್ಯವಾಗಿ ಪರಿಗಣಿಸುತ್ತಾರೆ. ಒಂದೊಂದು ಜೀವನ ಹೇಗಿರುತ್ತದೆ ಅಂದ್ರೆ 365 ದಿನವೂ ಕೆಲಸ ಮಾಡಬೇಕು ಅನಿಸುತ್ತದೆ ಮಾಡಿಲ್ಲ ಅಂದ್ರೆ ಸೋಂಬೇರಿ ಎನ್ನುತ್ತಾರೆ ಆದರೆ ಪ್ರತಿ ಸಲವೂ ಹಾಗೆ ಇರುವುದಕ್ಕೆ ಅಗಲ್ಲ. ಸದಾ ಕೆಲಸ ಮಾಡಬಾರದು ಆಗಾಗ ಬ್ರೇಕ್ ತೆಗೆದುಕೊಂಡು ನಮಗೆಂದು ಸಮಯ ಕೊಡಬೇಕು ನಮ್ಮ ದೇಹಕ್ಕೆ ವಿಶ್ರಾಂತಿ ಅಗತ್ಯವಿದೆ ಅದನ್ನು ನನ್ನ ತಂದೆ ನಂಬುತ್ತಾರೆ' ಎಂದು ರಣವೀರ್ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಹಿಂದು ದೇಗುಲದಲ್ಲಿ ನಟಿ ಸಾರಾ ಅಲಿ ಖಾನ್; ಶಕ್ತಿಗಳ ಮೇಲೆ ನಂಬಿಕೆ ಇದೆ, ಜನರ ಕಾಮೆಂಟ್‌ಗಳಿಗೆ ಡೋಂಟ್ ಕೇರ್!
'2022 ನನ್ನ ಜೀವನದ ಕೆಟ್ಟ ವರ್ಷ ಕಾರಣ ಏನೆಂದು ಪದಗಳಲ್ಲಿ ಹೇಳುವ ಅಗತ್ಯವಿಲ್ಲ ಏಕೆಂದರೆ ಪ್ರತಿಯೊಂದು ಸೋಷಿಯಲ್ ಮೀಡಿಯಾದಲ್ಲಿದೆ. ನಿಜಕ್ಕೂ ನಡೆದಿರುವ ಘಟನೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಸುಮ್ಮನೆ ನನ್ನ ಮೇಲೆ ಕಣ್ಣು ಹಾಕಬೇಡಿ ಅದರಿಂದ ನನಗೆ ನೆಗೆಟಿವ್ ಅಥವಾ ಕೆಟ್ಟದಾಗಿಲ್ಲ ನಿಮಗೆ ಅದರಿಂದ ಕೆಟ್ಟದಾಗುತ್ತಿದೆ ಅಂದ್ರೆ ಮೊದಲು ಅಲ್ಲಿಂದ ಹೊರ ನಡೆಯಬೇಕು' ಎಂದು ಕಳೆದ ವರ್ಷ ನಡೆದಿರುವ ಅದೆಷ್ಟೋ ಘಟನೆಗಳ ಬಗ್ಗೆ ಮಾತನಾಡದೆ ವಿಚಾರ ಮುಂದಾಕಿದ್ದಾರೆ.
'ಇಷ್ಟು ವರ್ಷ ಬಾಲಿವುಡ್ ಚಿತ್ರರಂಗದಲ್ಲಿದ್ದು ನನಗೆ ಯಾವ ರೀತಿ ಫೇಮ್ ಸಿಕ್ಕಿದೆ ಗೊತ್ತಿಲ್ಲ ಏಕೆಂದರೆ ಸೋಷಿಯಲ್ ಮೀಡಿಯಾ ಪ್ರಪಂಚದಲ್ಲಿ ಯಾರು ಯಾವಾಗ ಟ್ರೋಲ್ ಆಗುತ್ತಾರೆ ಯಾವಾಗ ಹೆಸರು ಮಾಡುತ್ತಾರೆಂದು ಹೇಳಲು ಆಗಲ್ಲ ಹೀಗಾಗಿ ಸೆಲೆಬ್ರಿಟಿ ಆಂಡ್ ಫೇಮ್ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಜನಪ್ರಿಯತೆ ಹೊಂದಿರವ ವ್ಯಕ್ತಿ ಎನ್ನುವುದು ಸೂಕ್ತ' ಎಂದು ಫೇಮ್ ಬಗ್ಗೆ ಹೇಳಿದ್ದಾರೆ.
ಕರಣ್ ಜೋಹಾರ್ ಹೇಳಿದ್ದಕ್ಕೆ ತೆಳ್ಳಗಾದೆ; ತೂಕ ಇಳಿಸಿಕೊಂಡ ಕಷ್ಟದ ಜರ್ನಿ ಬಿಚ್ಚಿಟ್ಟ ಸಾರಾ ಅಲಿ ಖಾನ್
ಡಿವೋರ್ಸ್ ವಿಚಾರಕ್ಕೆ ಮಕ್ಕಳ ರಿಯಾಕ್ಷನ್:
ಅಮೃತಾ ಜೊತೆಗಿನ ಡಿವೋರ್ಸ್ ವಿಷಯವನ್ನು ಮಕ್ಕಳಿಗೆ ಹೇಳಬೇಕಾದ ಕ್ಷಣ ನನ್ನ ಬದುಕಿನಲ್ಲೇ ಅತ್ಯಂತ ಕೆಟ್ಟದ್ದು. ಆ ಕ್ಷಣ ನನ್ನನ್ನು ಇನ್ನೂ ಕಾಡುತ್ತಲೇ ಇದೆ.ಕಂಫರ್ಟೇಬಲ್ ಆಗಿರುವ, ಮನಸ್ಸಿಗೆ ಸಮಾಧಾನ ಕೊಡುವ ವಾತಾವರಣ ಮನೆಯಲ್ಲಿರಬೇಕು. ತಂದೆ, ತಾಯಿ ಸದಾ ತನ್ನ ಜೊತೆಗಿರಬೇಕು.. ಅಂತೆಲ್ಲ ಮಕ್ಕಳ ಮನಸ್ಸು ಬಯಸುತ್ತೆ. ಆದರೆ ಈ ಕಾಲದಲ್ಲಿ ಎಷ್ಟೋ ಮಕ್ಕಳಿಗೆ ಅಂಥಾ ವಾತಾವರಣ ಸಿಗೋದೇ ಇಲ್ಲ. ನನ್ನ ಇಬ್ಬರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ತಂದೆ ಪ್ರೀತಿ ಕೊಡಲಾಗಲಿಲ್ಲ.ಬೆಳೆಯೋ ಮಕ್ಕಳಿಗೆ ಬೇಕಾಗೋದು ಹಣ, ಅಂತಸ್ತು, ಸ್ಟೇಟಸ್‌ಗಳಲ್ಲ. ಬದಲಿಗೆ ಗಮನ, ಪ್ರೀತಿ ಮತ್ತು ಸುರಕ್ಷಿತ ಭಾವ .21 ರ ಹರೆಯದಲ್ಲಿ ಮದುವೆಯಾದಾಗ ಇದ್ದ ಸೈಫ್ ಮನಸ್ಥಿತಿಗೂ, ಐವತ್ತರ ಈ ಹೊತ್ತಿನ ಅವರ ಯೋಚನೆಗಳಿಗೂ ಬಹಳ ವ್ಯತ್ಯಾಸವಿದೆ. ಆದರೆ ಅಂದು ಮಾಡಿದ ಒಂದು ತಪ್ಪು ಇಡೀ ಬದುಕಿಗೆ ಕೊರಗನ್ನು ಉಳಿಸಿ ಪಾಠ ಕಲಿಸಿದೆ. ಇದನ್ನು ಸ್ವತಃ ಸೈಫ್ ಹೇಳಿದ್ದಾರೆ.