
ಇಡೀ ತೆಲುಗು (Tollywood), ತಮಿಳು ಚಿತ್ರರಂಗ ಶಾಕ್‌ನಲ್ಲಿದೆ. ಯಾರಿಗೆ ಕ್ಯೂಟ್ ಕಪಲ್, ಪವರ್ ಕಪಲ್, ಮೇಡ್ ಫಾರ್ ಈಚ್ ಅದರ್ (Made for eachother) ಎಂದು ಹೇಳುತ್ತಿದ್ದರೋ ಅವರೇ ಈಗ ಡಿವೋರ್ಸ್‌ಗೆ (Divorce) ಮಾಡಿಕೊಂಡಿದ್ದಾರೆ. ಈಗ ಎಲ್ಲಿದೆ ರಿಯಲ್ ಲವ್ ಎಂಬ ಪ್ರಶ್ನೆ ಶುರುವಾಗಿದೆ. ಈ ಶಾಕ್‌ನಲ್ಲಿರುವ ಅಭಿಮಾನಿಗಳು ಸಮಂತಾ ಮಾಜಿ ಪ್ರಿಯಕರ ಸಿದ್ಧಾರ್ಥ್ ಮಾಡಿರುವ ಟ್ಟೀಟ್ ನೋಡಿ ತಲೆಗೆ ಹುಳ ಬಿಟ್ಟು ಕೊಂಡಿದ್ದಾರೆ.
'ನನ್ನ ಸ್ಕೂಲ್ ಟೀಚರ್‌ನಿಂದ ನಾನು ಕಲಿತ ಒಂದು ಪಾಠ...ಮೋಸಗಾರರಿಗೆ ಎಂದೂ ಏಳ್ಗೆ (Prosper) ಆಗುವುದಿಲ್ಲ. ನಿಮ್ಮದು ಏನು?' ಎಂದು ಟ್ಟೀಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರ ಸಾವಿರಾರು ಕಾಮೆಂಟ್‌ಗಳು ಹರಿದು ಬಂದವು. 'ಸಮಂತಾ (Samantha) ಸಿನಿಮಾದಲ್ಲಿ ತುಂಬಾ ಪ್ರೊಫೆಶನಲ್. ಆದರೆ ವೈಯಕ್ತಿಕ ವಿಚಾರಗಳಲ್ಲಿ ಪ್ರೈವಸಿ (Privacy) ಬಯಸುತ್ತಾರೆ. ಏನು ಮಾಡೋಕೆ ಆಗುತ್ತೆ ನಟಿಯರಿಗೆ? ಒಬ್ಬರ ಜೊತೆನೇ ಇರೋದಕ್ಕೆ ಬೋರ್ ಆಗೋಲ್ವಾ?' ಎಂದರೆ, ಮತ್ತೊಬ್ಬರು 'ಈ ಟ್ಟೀಟ್ ಹೇಳುತ್ತದೆ. ಮನಸಿನಲ್ಲಿ ಎಷ್ಟು ದ್ವೇಷ ಇದೆ ಎಂದು. ಅಕೆ ನಿನ್ನ ಎಕ್ಸ್ ಗರ್ಲ್‌ಫ್ರೆಂಡ್ ಆಗಿರಬಹುದು, ಆದರೀಗ ಆಕೆ ಚೈತನ್ಯ ಎಕ್ಸ್ ಪತ್ನಿ. ಹಾಗಂತ ಆಕೆ ಮೋಸಗಾತಿ ಎಂದಲ್ಲ. ಈಗಲೂ ಆಕೆ ಅದೇ ಬೋಲ್ಡ್, ಇಂಡಿಪೆಂಡೆಂಟ್ ಹುಡುಗಿ (Independent Girl)' ಎಂದು ಕಾಮೆಂಟ್ ಮಾಡಿದ್ದಾರೆ.
ಸಹಜವಾಗಿಯೇ ಒಂದು ಪೋಸ್ಟಿಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಅಂತೆಯೇ ಈ ನಟ ಸಿದ್ಧಾರ್ಥ್ ಪೋಸ್ಟಿಗೂ ಕೆಲವರು ಸಮಂತಾ ಪರ ಮಾತನಾಡಿದ್ದಾರೆ. ಇನ್ನೂ ಕೆಲವರು ಆಕೆಯನ್ನು ದೂಷಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಜೀವನದ ಬಗ್ಗೆ ಇಷ್ಟೆಲ್ಲಾ ಚರ್ಚೆ ಆಗುತ್ತಿರುವಾಗ, ಆಕೆ ಅದೆಲ್ಲೋ ಹಾರಿದ್ದಾಳೆ. ಹೌದು! ಸಮಂತಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅದಕ್ಕೆ ಇಂಗ್ಲಿಷ್ ಹಾಡು ಪ್ಲೇ ಮಾಡಿದ್ದಾರೆ. ಹಲವು ದಿನಗಳಿಂದ ಇದೇ ವಿಚಾರ ಕೇಳಿ ಕೇಳಿ ಬ್ರೇಕ್ ಬೇಕಾಗುತ್ತದೆ, ಹೋಗಿ ಬನ್ನಿ ಎಂದಿದ್ದಾರೆ ಅಭಿಮಾನಿಗಳು.
2003ರಲ್ಲಿ ಸಿದ್ಧಾರ್ಥ್ ಬಾಲ್ಯದ ಗೆಳತಿ ಮೇಘನಾ (Meghana) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 2007ರಲ್ಲಿ ವಿಚ್ಛೇದನ ಪಡೆದುಕೊಂಡರು. ಇದಾದ ನಂತರ ಸಿದ್ಧಾರ್ಥ್ ಸೋಹಾ ಅಲಿ ಖಾನ್ (Soha Ali Khan) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ರೂಮರ್ಸ್ ಸಹ ಇದ್ದವು. ಸಿದ್ಧಾರ್ಥ್ ಮೇಘನಾರಿಂದ ದೂರ ಆಗಲು ಸೋಹಾ ಕಾರಣ ಎಂದು ಹಲವು ಸುದ್ದಿ ಹಬ್ಬಿಸಿದ್ದರು. 'ಸೋಹಾಗೆ ಸಿದ್ಧಾರ್ಥ್ ಸಮಯ ನೀಡುತ್ತಿಲ್ಲ. ಅಲ್ಲದೇ ಇಬ್ಬರೂ ಕಮಿಟ್ ಆದ ಸಮಯದಿಂದಲೂ ಮಾಧ್ಯಮದ ಎದುರು ಒಟ್ಟಾಗಿ ಕಾಣಿಸಿಕೊಳ್ಳಲು ಸಿದ್ಧಾರ್ಥ್ ಒಪ್ಪಿಕೊಳ್ಳುತ್ತಿರಲಿಲ್ಲ. ಬಾಲಿವುಡ್‌ನಿಂದ ಆಫರ್ಸ್ ಹರಿದು ಬರುತ್ತಿದ್ದರೂ, ನಿರಾಕರಿಸುತ್ತಿದ್ದ ಸಿದ್ಧಾರ್ಥ್ ಮುಂಬೈ (Mumbai) ವಾತಾವರಣಕ್ಕೆ ಹೊಂದಿಕೊಳ್ಳಲಿಲ್ಲ. ಅವರಿಬ್ಬರ ನಡುವೆ ದೊಡ್ಡ ಜಗಳವಾದ ಕಾರಣ ಬ್ರೇಕಪ್ ಮಾಡಿಕೊಂಡರು,' ಎಂದು ಈ ಹಿಂದೆ ಸಂದರ್ಶನದಲ್ಲಿ ಅವರಿಬ್ಬರ ಆಪ್ತರು ಹೇಳಿದ್ದರು.
ಇದಾದ ನಂತರ ಮತ್ತು ಶ್ರುತಿ ಹಾಸನ್ (Shruti Hassan) ಜೊತೆಯಲ್ಲಿಯೂ ಪ್ರೀತಿಯಲ್ಲಿ ಬಿದ್ದಿದ್ದರು. 2011ರಲ್ಲಿ ತಮ್ಮ ಪ್ರೀತಿಯನ್ನು ಕಮಲ್ ಹಾಸನ್‌ಗೆ (Kamal Hassan) ತಿಳಿಸಿ, ಇಬ್ಬರೂ ಲಿವಿನ್ ಟುಗೆದರ್‌ಗೆ ಮುಂದಾದರು. ಆದರೆ ಇಬ್ಬರ ನಡುವೆ ಹೊಂದಾಣಿಕೆ, ಸಮಯ ಇಲ್ಲದ ಕಾರಣ ಇಬ್ಬರೂ ದೂರ ಆಗಲು ನಿರ್ಧರಿಸಿದ್ದರು. ಇದೆಲ್ಲಾ ಆದ ನಂತರವೂ ಸಿದ್ಧಾರ್ಥ್ ಸಮಂತಾಳನ್ನು ಪ್ರೀತಿಸಲು ಆರಂಭಿಸಿದ್ದರು.
'ಜಗರ್ದಸ್ತ್' ತೆಲುಗು (Telagu) ಸಿನಿಮಾ ಚಿತ್ರೀಕರಣದ ವೇಳೆ ಸಮಂತಾ ಮತ್ತು ಸಿದ್ಧಾರ್ಥ್ ಭೇಟಿ ಆದರು. ಎರಡೂವರೆ ವರ್ಷಗಳ ಕಾಲ ಪ್ರೀತಿಸಿದ್ದರು. ಖಾಸಗಿ ವೇದಿಕೆಯ ಮೇಲೆ ಸಿದ್ಧಾರ್ಥ್ ಡ್ಯಾನ್ಸ್ ಮಾಡಿ, ಸಮಂತಾಗೆ ಡೆಡಿಕೇಟ್ ಸಹ ಮಾಡಿದ್ದರು. ಸಮಂತಾ ಇವರನ್ನು ಮದುವೆ ಆಗಲೂ ಮುಂದಾಗಿದ್ದರು. ಆದರೆ ಈ ನಡುವೆ ಸಮಂತಾ ಸ್ನೇಹಿತ ಸಿದ್ಧಾರ್ಥ್ ಬಗ್ಗೆ ವಾರ್ನಿಂಗ್ ಮಾಡಿದ್ದರು. ಕನ್ನಡದ ನಟಿ ದೀಪಾ ಸನ್ನಿಧಿ (Deepa Sannidhi) ಜೊತೆ ಸಿದ್ಧಾರ್ಥ್ ಆತ್ಮೀಯವಾಗಿದ್ದರು. ಇಬ್ಬರೂ ಸೈಲೆಂಟ್ ಆಗಿ ಸುತ್ತಾಡುತ್ತಿದ್ದಾರೆ, ಎಂದು ಹೇಳಿದರಂತೆ. 'ಸಿದ್ಧಾರ್ಥ್ ಮತ್ತು ದೀಪಾ ಸನ್ನಿಧಿ ಕೆಲವು ದಿನಗಳಿಂದಲೂ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಅವರಿಬ್ಬರೂ ಕ್ಲೋಸ್ ಆಗಿರುವುದ ನೋಡಿದರೆ ಏನೋ ನಡೆಯುತ್ತಿದೆ. ಇಂಡಸ್ಟ್ರಿಯಲ್ಲಿ ಹಾಟ್ ಆಗಿರುವ ನಟಿಯರ ಮೇಲೆ ಸಿದ್ಧಾರ್ಥ್ ಕಣ್ಣಿಡುತ್ತಾರೆ. ಜೋಪಾನ,' ಎಂದು ಸ್ನೇಹಿತೆ ಹೇಳಿದಾಗ ಸಮಂತಾ ಸಿದ್ಧಾರ್ಥೆ ಜೊತೆ ಬ್ರೇಕಪ್ ಮಾಡಿಕೊಂಡರಂತೆ.
ಒಟ್ಟಿನಲ್ಲಿ ಈ ನಟ, ನಟಿಯರ ಜೀವನದಲ್ಲಿ ಎಲ್ಲವೂ ಸರಿ ಇದೆ ಎನ್ನುವಾಗಲೇ ಡಿವೋರ್ಸ್ ಮಾಡಿಕೊಳ್ಳುತ್ತಾರೆ. ದಾಂಪತ್ಯದಲ್ಲಿ ಅದೇನಾಗುತ್ತೋ ಬಲ್ಲವರು ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.