ಮನೆಯೊಳಗಿದ್ದರೆ ದುಡ್ಡು ಬರುತ್ತೆ, ಭಾವ ಮಾಡಿದ ತಪ್ಪಿಗೆ ನಾನು ಟ್ರೋಲ್: ನಟಿ ಶಮಿತಾ ಶೆಟ್ಟಿ

Suvarna News   | Asianet News
Published : Oct 05, 2021, 11:51 AM ISTUpdated : Oct 05, 2021, 12:34 PM IST
ಮನೆಯೊಳಗಿದ್ದರೆ ದುಡ್ಡು ಬರುತ್ತೆ, ಭಾವ ಮಾಡಿದ ತಪ್ಪಿಗೆ ನಾನು ಟ್ರೋಲ್: ನಟಿ ಶಮಿತಾ ಶೆಟ್ಟಿ

ಸಾರಾಂಶ

ಹೀನಾಯವಾಗಿ ಟ್ರೋಲ್ ಆಗುತ್ತಿರುವ ಶಮಿತಾ ಶೆಟ್ಟಿ, ಕೊನೆಗೂ ಮೌನ ಮುರಿದಿದ್ದಾರೆ. ರಾಜ್‌ ಕುಂದ್ರಾ ಜೈಲಿಗೆ ಸೇರಿದ್ದು, ಬಿಗ್ ಬಾಸ್ ಓಟಿಟಿ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. 

ಬಾಲಿವುಡ್ ಝಿರೋ ಫಿಗರ್ (Zero Figure), ಮಂಗಳೂರು ಮೀನು ಶಿಲ್ಪಾ ಶೆಟ್ಟಿ (Shilpa Shetty) ಸಹೋದರಿ ಶಮಿತಾ ಶೆಟ್ಟಿ ಈ ವರ್ಷ ಅತಿ ಹೆಚ್ಚು ಟ್ರೋಲ್ (troll) ಆದ ನಟಿ.  ಪ್ಯಾಪರಾಜಿಗಳಿಗೆ ಪೋಸ್ ನೀಡುತ್ತಿದ್ದ ಚೆಲುವೆಯನ್ನು ನೆಟ್ಟಿಗರು ಕಾಲೆಳೆಯುತ್ತಿರುವ ರೀತಿ ಸಹಿಸಿಕೊಳ್ಳಲು ಆಗದೆ ಪ್ರತಿಕ್ರಿಯೆ ನೀಡಿದ್ದಾರೆ. 

ಶಮಿತಾ (Shamitha Shetty) ಓಟಿಟಿ ಬಿಗ್ ಬಾಸ್‌ (Bigg Boss)ನಲ್ಲಿ ಸ್ಪರ್ಧಿಸುವ ಮುನ್ನವೇ ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಸಿದ್ದರು. ಆದರೆ ಸಹೋದರಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ (Raj Kundra) ಮದುವೆ ದಿಢೀರ್‌ ಎಂದು ಫಿಕ್ಸ್ ಆದ ಕಾರಣ ಅರ್ಧಕ್ಕೇ ಮನೆಯಿಂದ ಹೊರ ಬಂದರು. ಆನಂತರ ಬಿಬಿ ಮನೆ ಪ್ರವೇಶ ಮಾಡಲು ಸಾಕಷ್ಟು ಅವಕಾಶಗಳು ಬಂದರೂ, ಕಾರಣಾಂತರಗಳಿಂದ ದೂರ ಉಳಿಯುತ್ತಿದ್ದರು. ಆದರೆ ಕರಣ್ ಜೋಹಾರ್ (Karan Johar) ಓಟಿಟಿ ಆಫರ್ ನೀಡಿದ ತಕ್ಷಣವೇ ಒಪ್ಪಿಕೊಂಡು. ಇನ್ನೇನು ಮನೆ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಅಕ್ಕನ ಗಂಡ ರಾಜ್‌ ಕುಂದ್ರಾ ಅಶ್ಲೀಲ ವೀಡಿಯೋ ಚಿತ್ರ ಶೂಟಿಂಗ್ ಕೇಸಲ್ಲಿ ಕಂಬಿ ಎಣಿಸುವಂತಾಯಿತು.

ಭಾವ ಜೈಲಿನಲ್ಲಿದ್ದರೂ ನಾದಿನಿ ಮಜಾ ಮಾಡುತ್ತಿದ್ದಾಳೆ, ಅಕ್ಕನಿಗೆ ಸಾಂತ್ವನ ಹೇಳುವಷ್ಟು ಜ್ಞಾನ ಇಲ್ಲ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಮನೆಯಿಂದ ಹೊರ ಬಂದ ನಂತರ ಶಮಿತಾ ಮೌನವಾಗಿದ್ದರು. ನೆಟ್ಟಿಗರು ಅತಿರೇಕದಿಂದಲೇ ಈಕೆಯನ್ನು ಟ್ರೋಲ್ ಮಾಡುತ್ತಿದ್ದರು. ಹೀಗಾಗಿ ಖಾಸಗಿ ಸಂದರ್ಶನದಲ್ಲಿ ಮಾತನಾಡುವ ಮೂಲಕ ಮೌನ ಮುರಿದಿದ್ದಾರೆ. 'ಆರಂಭದ ದಿನಗಳಲ್ಲಿ ನನಗೆ ತುಂಬಾನೇ ಕಷ್ಟವಾಗಿತ್ತು. ಇದೆಲ್ಲಾ ನನಗೆ ನನ್ನ ಕುಟುಂಬಕ್ಕೆ ಹೊಸದು. ಅದರಲ್ಲೂ ನಾನು ಮಾಡಿರದ ತಪ್ಪಿಗೆ ನನ್ನನ್ನು ತುಂಬಾನೇ ಟ್ರೋಲ್ ಮಾಡಿದ್ದಾರೆ. ಆಗ ನನ್ನ ಫ್ಯಾಮಿಲಿ ಕೂಡ ಹೇಳಿತ್ತು ಮನೆಯಲ್ಲಿ ಲಾಕ್‌ ಮಾಡಿಕೊಂಡು ಇರುವುದೇ ಉತ್ತರ ಎಂದು. ಕ್ಯಾಮೆರಾಗೆ ಕಾಣಿಸಿಕೊಂಡರೂ, ಇಲ್ಲದಿದ್ದರೂ ಊಹಾಪೋಹಗಳು ಶುರುವಾದವು. ರಾಜ್ ಕುಂದ್ರಾ ಅವರ ಘಟನೆ ನಡೆಯುವ ಮುನ್ನವೇ ನಾನು ಓಟಿಟಿ ಬಿಗ್ ಬಾಸ್‌ಗೆ (Bigg boss OTT) ಒಪ್ಪಂದ ಮಾಡಿಕೊಂಡಿದ್ದೆ. ಇದರಿಂದ ಹಿಂದೆ ಸರಿದು ನಾನು ಕೊಟ್ಟ ಮಾತಿಗೆ ತಪ್ಪುವುದಕ್ಕೆ ಇಷ್ಟವಿರಲಿಲ್ಲ. ಎಲ್ಲರೂ ಹೇಳುತ್ತಾರಲ್ಲ The Show Must Go On ಹಾಗೇಯೇ ಜೀವನ' ಎಂದು  ಶಮಿತಾ ಮಾತನಾಡಿದ್ದಾರೆ. 

OTT ನಂತ್ರ ಬಿಗ್‌ಬಾಸ್15: ಸಿಕ್ಕಿದ ಕೆಲಸ ಬಿಡಲ್ಲ ಎಂದ ಶಮಿತಾ

'ಅದರಲ್ಲೂ ಈ ಕೊರೋನಾದಿಂದ ಹಲವು ಕೆಲಸ ಇಲ್ಲದೇ ಮನೆಯಲ್ಲಿಯೇ ಕುಳಿತಿದ್ದಾರೆ. ಇಲ್ಲಿ ಮನೆಯೊಳಗಿದ್ದರೆ, ದುಡ್ಡು ಬರುತ್ತೆ ಅಂದ್ರೆ ನಾನ್ ಯಾಕೆ ಬೇಡ ಅಂತ ಹೇಳಲಿ?  ಹೊರ ಬಂದು ನೋಡಿದಾಗ ಜನರು ನನಗೆ ತೋರಿಸುತ್ತಿರುವ ಪ್ರೀತಿ ಬಗ್ಗೆ ಹೇಳಲು ಪದಗಳು ಸಾಲದು. ನಾನು ಮನೆಯಲ್ಲಿದ್ದ ರೀತಿಯ ಬಗ್ಗೆ ನನ್ನ ಕುಟುಂಬಕ್ಕೆ ಹೆಮ್ಮೆ ಇದೆ. ಸಂತೋಷ ಪಟ್ಟಿದ್ದಾರೆ. ನಾನು ಏನನ್ನೂ ಪ್ಲಾನ್ ಮಾಡುವುದಿಲ್ಲ. ನೀವು ಮನೆಯಲ್ಲಿ ನನ್ನನ್ನು ನೋಡಿರಬಹುದು. ನಾನು ಫ್ಲೋನಲ್ಲಿ ಹೋಗುವವಳು. ಕೆಲವರಿಂದ ಒಂದೆರಡು ಸಲಹೆಗಳು (Suggestion) ಸಿಕ್ಕಿದೆ ಅದನ್ನು ಪಾಲಿಸುತ್ತೇನೆ,' ಎಂದಿದ್ದಾರೆ ಶಮಿತಾ. 

ಅಕ್ಕ ಶಿಲ್ಪಾ ಶೆಟ್ಟಿ ಹೆಸರೇಳಿದಾಗ ನಾಚಿಕೊಂಡ ತಂಗಿ ಶಮಿತಾ ಬಾಯ್‌ಫ್ರೆಂಡ್

'ನಾನು ತುಂಬಾನೇ ಪ್ರೈವೇಟ್ ವ್ಯಕ್ತಿ (Private Person). ಬಿಗ್ ಬಾಸ್‌ ಮನೆಯಲ್ಲಿರುವುದು ಅಂದ್ರೆ ನನ್ನ ಕಂಫರ್ಟ್‌ ಝೋನ್‌ (Comfort Zone)ನಿಂದ ಹೊರ ಬರುವುದು ಅಂತ. ನನ್ನ ಜೀವನದಲ್ಲಿ ಆದ ಕೆಲವೊಂದು ಘಟನೆಗಳಿಂದ ಈಗ ನಾನು ಬದಲಾಗಿರುವೆ, ನನ್ನ ಬಣ್ಣ ನಾನು ಒಪ್ಪಿಕೊಂಡಿದ್ದೀನಿ. ನಾನಗೂ ಬೇರೆ ಅವರಿಗೂ ವ್ಯತ್ಯಾಸವಿದೆ ಎಂದು ಅರ್ಥ ಮಾಡಿಕೊಂಡಿದ್ದೀನಿ. ಯಾವುದೇ ಉದ್ದೇಶ ಇಲ್ಲದೆ, ನಾನು ಯಾರ ತಂಟೆಗೂ ಹೋಗುವುದಿಲ್ಲ. ನೀವು ಮಾತನಾಡುತ್ತೀರಾ ನಾನು ಮಾತನಾಡುತ್ತೀನಿ. ಇಲ್ಲವಾದರೆ ನಾನು ಸುಮ್ಮನೆ ಇರುವೆ,' ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?