ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ಕಳುವಾಗಿದ್ದು, ಸಿಸಿಟಿವಿಯಲ್ಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಆಗಿದ್ದೇನು?
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ತಂಗಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ನಿನ್ನೆ ಕಳ್ಳತನವಾಗಿದ್ದು ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದಷ್ಟೆ ರಜನೀಕಾಂತ್ (Rajinikanth) ಮಗಳ ಮನೆಯಲ್ಲಿ ಕಳ್ಳತನ ಆದ ಪ್ರಕರಣ ಬೆಳಕಿಗೆ ಬಂದಿತ್ತು, ಪೊಲೀಸರು ಆರೋಪಿಗಳನ್ನು ಬಂಧಿಸಿ ಬಹುತೇಕ ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಸಲ್ಮಾನ್ ಖಾನ್ ತಂಗಿಯ ಮನೆಯಲ್ಲಿ ಆಭರಣ ಕಳುವಾಗಿದೆ. ಆದರೆ ಕುತೂಹಲದ ವಿಷಯವೇನೆಂದರೆ, ಅವರ ಮನೆಯಲ್ಲಿ ಬಹಳಷ್ಟು ಆಭರಣವಿದ್ದರೂ ಯಾರಿಗೂ ಡೌಟ್ ಬರಬಾರದು ಎನ್ನುವ ಕಾರಣಕ್ಕೆ ಒಂದೇ ಒಂದು ಆಭರಣ ಕಳುವು ಮಾಡಲಾಗಿದೆ. ಅದು ಅರ್ಪಿತಾ ಖಾನ್ ಅವರ ಕಿವಿಯೋಲೆ. ಆದರೆ ಇದು ಅಂತಿಂಥ ಕಿವಿಯೋಲೆ ಅಲ್ಲ. ವಜ್ರದ ಕಿವಿಯೋಲೆ. ಇದರ ಮೌಲ್ಯ 5 ಲಕ್ಷ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರ್ಪಿತಾ ಅವರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಕಳ್ಳನನ್ನು ಹಿಡಿಯುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಕುತೂಹಲದ ವಿಷಯವೇನೆಂದರೆ ಇಷ್ಟೆಲ್ಲಾ ಟೈಟ್ ಸೆಕ್ಯುರಿಟಿ (Tight Security) ಇದ್ದರೂ ಕಳ್ಳ ಒಳಗೆ ಹೇಗೆ ನುಗ್ಗಿದ ಎನ್ನುವುದು. ನುಗ್ಗಿದವ ಬೇರೆ ಒಡವೆಗಳನ್ನು ಮುಟ್ಟದೇ ಒಂದೇ ಒಂದು ಒಡವೆ ಕದ್ದೊಯ್ದಿದ್ದರೂ ಪೊಲೀಸರನ್ನು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರು. ನಂತರ ಸಿಸಿಟಿವಿ ನೋಡಿದಾಗ ಕಳ್ಳ ಯಾರು ಎಂಬುದು ತಿಳಿದು ಆತನನ್ನು ಬಂಧಿಸಲಾಗಿದೆ. ಇಲ್ಲೇ ಇರುವುದು ಕುತೂಹಲದ ವಿಷಯ. ಕಳ್ಳ ಯಾರೆಂದು ಸಿಸಿಟಿವಿಯಲ್ಲಿ ನೋಡಿದಾಗ ಖುದ್ದು ಸಲ್ಮಾನ್ ಖಾನ್ ಕುಟುಂಬಸ್ಥರು ಶಾಕ್ ಆಗಿದ್ದಾರೆ.
ಮುಂಬೈಯಲ್ಲಿರುವ ಅರ್ಪಿತಾ ಅವರ ಮನೆಯಲ್ಲಿ ಸೋಮವಾರದಂದು ಘಟನೆ ನಡೆದಿದ್ದು, ಮಂಗಳವಾರ ಕಳ್ಳ ಸಿಕ್ಕಿಬಿದ್ದಿದ್ದಾನೆ. ಥಾಣೆ ಜಿಲ್ಲೆಯಲ್ಲಿ ಕಳ್ಳನನ್ನು ಅರೆಸ್ಟ್ ಮಾಡಲಾಗಿದೆ. ಆತನಿಂದ ಅರ್ಪಿತಾ ಅವರು ಬೆಲೆಬಾಳುವ ಕಿವಿಯೋಲೆಯನ್ನೂ ವಶಪಡಿಸಿಕೊಳ್ಳಲಾಗಿದೆ. ಅಷ್ಟಕ್ಕೂ ಆ ಕಳ್ಳ ಬೇರೆ ಯಾರೂ ಅಲ್ಲ. ಖುದ್ದು ಅರ್ಪಿತಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಹೆಗ್ಡೆ (Sandeep Hegde) ಎಂಬಾತ. ದಿನವೂ ಬೆಲೆ ಬಾಳುವ ವಜ್ರಾಭರಣಗಳನ್ನು ಧರಿಸುತ್ತಿದ್ದ ಅರ್ಪಿತಾ ಅವರ ಮೇಲೆ ಕಣ್ಣಿಟ್ಟಿದ್ದ ಈ ಕೆಲಸದವ, ಕಿವಿಯೋಲೆಯನ್ನು ಎಗಿಸುವ ಪ್ಲ್ಯಾನ್ ಮಾಡಿದ್ದಾನೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಹಲವಾರು ಚಿನ್ನ, ವಜ್ರಾಭರಣಗಳು ಇರುವಾಗ ಈ ಒಂದು ಕಿವಿಯೋಲೆ ಕದ್ದರೆ ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡಿರಬೇಕು.
ಇನ್ನೂ ಮದ್ವೆಯಾಗದ ಸಲ್ಮಾನ್ ಸಹೋದರರಿಗೆ ಹಿಂಗ್ ಅಡ್ವೈಸ್ ಮಾಡಿದ್ರಂತೆ !
ಆದರೆ ಆತನ ದುರದೃಷ್ಟಕ್ಕೆ ಅರ್ಪಿತಾ ಅವರಿಗೆ ಕಳುವಾಗಿರುವುದು ತಿಳಿದಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸುಮಾರು 5 ಲಕ್ಷ ಬೆಲೆ ಬಾಳುವ ಡೈಮಂಡ್ ಸ್ಟಡ್ ಗೋಲ್ಡ್ ಇಯರ್ ರಿಂಗ್ಸ್ ಕಳುವಾಗಿದ್ದ ಬಗ್ಗೆ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ದೂರು ನೀಡಿದ್ದರು. ಅದರಂತೆ ತನಿಖೆ ಕೈಗೊಳ್ಳಲಾಗಿತ್ತು. ಸಿಸಿಟಿವಿ ಚೆಕ್ ಮಾಡಿ ಫಾಲೋಅಪ್ ಮಾಡಲಾಗಿತ್ತು. ಟೆಕ್ನಿಕಲ್ ಸಪೋರ್ಟ್ ಮೂಲಕ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಐಪಿಸಿ ಸೆಕ್ಷನ್ 381ರ ಅಡಿಯಲ್ಲಿ ಸಂದೀಪ್ ವಿರುದ್ಧ ಕೇಸ್ ದಾಖಲಾಗಿದೆ ಎಂದಿದ್ದಾರೆ. ಅಷ್ಟಕ್ಕೂ ಸಂದೀಪ್ ಮೇಲೆಯೇ ಅರ್ಪಿತಾ ಡೌಟ್ ಪಟ್ಟಿದ್ದರು. ಅರ್ಪಿತಾ ಮನೆಯಲ್ಲಿ 10 ಸಿಬ್ಬಂದಿಯಿದ್ದು ಕಳೆದ ನಾಲ್ಕು ತಿಂಗಳಿನಿಂದ ಸಂದೀಪ್ ಹೆಗ್ಡೆ ಎಂಬಾತ ಅರ್ಪಿತಾ ಮನೆಗೆ ಕೆಲಸಕ್ಕೆ ಸೇರಿದ್ದ. ಕೆಲವು ದಿನಗಳ ಹಿಂದೆ ಅರ್ಪಿತಾರ ವಜ್ರದ ಓಲೆಯನ್ನು ಕದ್ದಿದ್ದ ಸಂದೀಪ್ ಅಂದಿನಿಂದ ಕೆಲಸಕ್ಕೆ ಸಹ ಬಂದಿರಲಿಲ್ಲ. ಅರ್ಪಿತಾ ಸಹ ತಮಗೆ ಸಂದೀಪ್ ಮೇಲೆಯೇ ಅನುಮಾನ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಕಳ್ಳತನ ಮಾಡಿದ್ದ ಸಂದೀಪ್ ಹೆಗ್ಡೆ ಥಾಣೆಗೆ ತೆರಳಿ ಅಲ್ಲಿ ತಲೆಮರೆಸಿಕೊಂಡಿದ್ದ. ಸಿಸಿಟಿವಿ ಪರಿಶೀಲನೆ ಮಾಡಿದ ಬಳಿಕ ಪೊಲೀಸರು ಥಾಣೆಗೆ (Thane) ತೆರಳಿ ಸಂದೀಪ್ನನ್ನು ಬಂಧಿಸಿದ್ದಾರೆ. ಆತನಿಂದ ಓಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಕುತೂಹಲದ ಅಂಶ ಏನೆಂದರೆ, ಇತ್ತೀಚೆಗೆ ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ ರಜನೀಕಾಂತ್ ಅವರ ಮನೆಯಲ್ಲಿಯೂ ಕಳ್ಳತನ ನಡೆದಿತ್ತು. ಅಲ್ಲಿಯೂ ಮನೆ ಕೆಲಸದಾಕೆಯೇ ಆಭರಣ ಕದ್ದಿದ್ದರು. ಇನ್ನು ಅರ್ಪಿತಾ ಖಾನ್ ಅವರ ಬಗ್ಗೆ ಮಾತನಾಡುವುದಾರೆ, ಇವರು ಸಲ್ಮಾನ್ ಖಾನ್ರ ಸ್ವಂತ ತಂಗಿಯಲ್ಲ ಬದಲಿಗೆ ಸಾಕು ಸಹೋದರಿ. ಸಲ್ಮಾನ್ ಖಾನ್ರ ತಂದೆ ಸಲೀಂ ತಮ್ಮ ಎರಡನೇ ಪತ್ನಿ ಹೆಲೆನ್ ರಿಚರ್ಡ್ಸನ್ ಜೊತೆ ಸೇರಿ ಅರ್ಪಿತಾರನ್ನು ಬಹಳ ಹಿಂದೆಯೇ ದತ್ತು ಪಡೆದಿದ್ದರು. ಅರ್ಪಿತಾರ ತಾಯಿ ಮುಂಬೈನ ಫುಟ್ಪಾತ್ ಮೇಲೆ ಸಾವನ್ನಪ್ಪಿ ಅರ್ಪಿತಾ ಅನಾಥೆಯಾಗಿದ್ದರು. ದತ್ತು ಪಡೆದಾಗಿನಿಂದಲೂ ಅಂದಿನಿಂದಲೂ ಅರ್ಪಿತಾ, ಸಲ್ಮಾನ್ ಖಾನ್ ಹಾಗೂ ಅವರ ಸಹೋದರರೊಟ್ಟಿಗೆ ಬೆಳೆದಿದ್ದಾರೆ.
ಕುಡಿದು ನಟರ ಜೀವನ ಹಾಳು ಮಾಡ್ತಿದ್ದಾರೆ ಸಲ್ಮಾನ್ ಖಾನ್? ಮನಬಿಚ್ಚಿ ಮಾತನಾಡಿದ ನಟ
ಅರ್ಪಿತಾ ಖಾನ್, ಬಾಲಿವುಡ್ನ ಆಯುಷ್ ಶರ್ಮಾ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಸಲ್ಮಾನ್ ಖಾನ್ರಿಗೆ ಸ್ವಂತ ತಂಗಿ ಅಲ್ವಿರಾ ಸಹ ಇದ್ದಾರೆ ಆದರೆ ಖಾನ್ ಸಹೋದರರಿಗೆ ಅರ್ಪಿತಾ ಮೇಲೆ ವಿಶೇಷ ಪ್ರೀತಿ