ಕೃಷ್ಣಮೃಗ ಸಾಯಿಸಿದ ಪ್ರಕರಣದಲ್ಲಿ ಕೊಲೆ ಬೆದರಿಕೆ ಎದುರಿಸುತ್ತಿರುವ ಸಲ್ಮಾನ್ ಖಾನ್ ಅವರ ಹಿಟ್ ಆ್ಯಂಡ್ ರನ್ ಕೇಸ್ ಸಕತ್ ಸದ್ದು ಮಾಡ್ತಿದೆ.
ಸದ್ಯ ಬಾಲಿವುಡ್ ನಟಿ ಸಲ್ಮಾನ್ ಖಾನ್ ಸಕತ್ ಸದ್ದು ಮಾಡುತ್ತಿದ್ದಾರೆ. ಕೃಷ್ಣಮೃಗವನ್ನು ಸಾಯಿಸಿ ಲಾರೆನ್ಸ್ ಬಿಷ್ಣೋ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಎದುರಿಸುತ್ತಿರುವ ಸಲ್ಮಾನ್ ಖಾನ್ ಸದ್ಯ ಹಾಟ್ ಟಾಪಿಕ್ ಆಗಿದ್ದಾರೆ. ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಬಿಷ್ಣೋ ಪದೇ ಪದೇ ಹೇಳುತ್ತಿದ್ದರೂ, ಸಲ್ಮಾನ್ ಖಾನ್ ಇದುವರೆಗೆ ಹಾಗೆ ಮಾಡಿಲ್ಲ. ಇದೇ ಕಾರಣಕ್ಕೆ ಜೈಲಿನಲ್ಲಿದ್ದರೂ ಲಾರೆನ್ಸ್ ಬಿಷ್ಣೋ ಸಲ್ಮಾನ್‌ರನ್ನು ಬಿಡುತ್ತಿಲ್ಲ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಹೇಳುತ್ತಲೇ ಇದ್ದಾನೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್ ಎಚ್ಚರಿಕೆ ನೀಡುತ್ತಲೇ ಇದೆ. ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ.
ಇದರ ಬೆನ್ನಲ್ಲೇ ಸಲ್ಮಾನ್ ಖಾನ್ ಅವರ ಹಿಟ್ ಆ್ಯಂಡ್ ರನ್ ಕೇಸ್ ಸಕತ್ ಸದ್ದು ಮಾಡುತ್ತಿದೆ. ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಟೊಯಾಟೋ ಲ್ಯಾಂಡ್ ಕ್ರೂಸರ್ ಕಾರನ್ನು ಹರಿಸಿದ್ದ ಪ್ರಕರಣವಿದು. ಮೊದಲಿಗೆ ಕಾರನ್ನು ಸಲ್ಮಾನ್ ಅವರೇ ಓಡಿಸುತ್ತಿದ್ದರು ಎಂದು ಹೇಳಲಾಗಿತ್ತು. ಕೊನೆಗೆ, ಅದನ್ನು ಡ್ರೈವರ್ ಚಲಾಯಿಸುತ್ತಿದ್ದರು ಎಂದು ಸಲ್ಮಾನ್ ಹೇಳಿಕೆ ಕೊಟ್ಟಿದ್ದೂ ಆಯ್ತು. ಇದೀಗ ಈ ವಿಷಯ ಮತ್ತೆ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ಘಟನೆ ನಡೆದದ್ದು, 2002ರ ಸೆಪ್ಟೆಂಬರ್ 28ರಂದು ಮುಂಬೈನ ಬಾಂದ್ರಾದಲ್ಲಿ. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದರು. ಆರಂಭದಲ್ಲಿ ಸಲ್ಮಾನ್ ವಿರುದ್ಧ ದೂರು ದಾಖಲಾಗಿತ್ತು. ನಂತರ ಅವರು, ಈ ಪ್ರಕರಣದಲ್ಲಿ ತಮ್ಮ ಕೈವಾಡ ಇಲ್ಲ, ಡ್ರೈವರ್ ಕಾರು ಓಡಿಸುತ್ತಿದ್ದ ಎಂದು ಹೇಳಿದ್ದರು. ಇದೇ ಮಾತನ್ನು ಅವರು ರಜತ್ ಶರ್ಮಾ ಅವರು ನಡೆಸಿಕೊಡುವ ‘ಆಪ್ ಕಿ ಅದಾಲತ್’ನಲ್ಲಿಯೂ ಹೇಳಿಕೊಂಡಿದ್ದು ಅದರ ವಿಡಿಯೋ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಈ ಷೋಗೆ ಆಗಮಿಸಿದ್ದ ಸಲ್ಮಾನ್, ‘ನನಗೆ ಆ ಘಟನೆ ಬಗ್ಗೆ ಈಗಲೂ ಬೇಸರ ಇದೆ. ಮನೆಗೆ ಹೋಗುವಾಗ ನನಗೆ ಆ ಘಟನೆ ನೆನಪಾಗುತ್ತದೆ. ಘಟನೆ ನಡೆದ ಜಾಗದಲ್ಲಿ ಪ್ರತಿ ಬಾರಿ ಬಲಕ್ಕೆ ತಿರುಗುವಾಗ ನನಗೆ ನೋವಾಗುತ್ತದೆ, ಕಾಡುತ್ತದೆ. ಆದರೆ ಇದನ್ನು ನಾನು ಮಾಡಿಲ್ಲ. ಇಂಥ ಕೆಟ್ಟ ಘಟನೆ ಮತ್ತೊಂದು ನಡೆಯೋಕೆ ಸಾಧ್ಯವಿಲ್ಲ ಎಂದಿದ್ದರು.
ನಾನು ಹಾಗೂ ಕಮಾಲ್ ಹಿಂದೆ ಕೂತಿದ್ದೆವು. ರಸ್ತೆಯ ಮೇಲೆ ಕಲ್ಲಿತ್ತು. ಡ್ರೈವರ್ ಬ್ರೇಕ್ ಹಾಕಿದ. ಇದರಿಂದ ಕಾರು ಸ್ಕಿಡ್ ಆಯಿತು. ಇದರಿಂದ ನನಗೆ ತುಂಬಾ ಬೇಸರ ಇಂದಿಗೂ ಇದೆ ಎಂದಿದ್ದರು. ಕಾರು 180-200 ಕಿಮೀ ಸ್ಪೀಡ್ನಲ್ಲಿ ಇತ್ತು ಎಂದು ಅನೇಕರು ಆರೋಪಿಸುತ್ತಾರೆ. ಆದರೆ ಅದು ಸುಳ್ಳು ಎಂದು ಹೇಳಿದರು. ಆದರೆ ಈ ಘಟನೆಯ ಬಳಿಕ ಸಲ್ಮಾನ್ ಖಾನ್ ವಿರುದ್ಧ ಹಲವರು ಕಿಡಿ ಕಾರುತ್ತಿದ್ದರು. ಇವರೇ ಡ್ರೈವ್ ಮಾಡಿದ್ದರೂ ಸಿನಿಮಾಗಿಂತಲೂ ಚೆನ್ನಾಗಿ ಕಥೆ ಕಟ್ಟಿ ಹೇಳಿ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡರು ಎಂದೆಲ್ಲಾ ಕಮೆಂಟ್ಸ್ ಸುರಿಮಳೆಯಾಗಿತ್ತು. ಇಷ್ಟೇ ಅಲ್ಲದೇ, ಹಲವಾರು ಹೆಣ್ಣುಮಕ್ಕಳ ಜೀವನ ಹಾಳು ಮಾಡಿದ್ದಾರೆ ಎನ್ನುವ ಆರೋಪವೂ ಅವಿವಾಹಿತರಾಗಿರುವ ಸಲ್ಮಾನ್ ಖಾನ್ ವಿರುದ್ಧ ಇದ್ದು, ಇದಾಗಲೇ ಕೆಲವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅದೇ ಇನ್ನೊಂದೆಡೆ ನಟ, ಕೆಲವರ ಪಾಲಿಗೆ ದೇವರೂ ಆಗಿದ್ದಾರೆ.
ಟೈಗರ್ ಶ್ರಾಫ್ ಜೊತೆ ಒಂದು ಗಂಟೆ ಲಿಫ್ಟ್ನಲ್ಲಿ ಸಿಕ್ಕಿಬಿದ್ದ ನಟಿ ನೇಹಾ: ರೋಚಕ ಕ್ಷಣದ ಕುರಿತು ಹೇಳಿದ್ದೇನು?