ಸುಶಾಂತ್ ಮಾಜಿ ಗೆಳತಿಗೆ ಎನ್‌ಸಿಬಿ ಕಾಟ | ಚಾರ್ಜ್‌ಶೀಟ್‌ನಲ್ಲಿ ನಟಿಯ ಹೆಸರು | ಒಂದು ತಿಂಗಳು ಜೈಲಿನಲ್ಲಿದ್ದ ರಿಯಾಗೆ ಮತ್ತೊಮ್ಮೆ ಡ್ರಗ್ಸ್ ಘಾಟು | ಡ್ರಗ್ಸ್ ಡೀಲ್ಸ್‌ಗೆ ದುಡ್ಡು ಕೊಡುತ್ತಿದ್ದವಳೇ ಈ ಬಾಲಿವುಡ್ ಸುಂದರಿ
ಮುಂಬೈ(ಮಾ.06): ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜೈಲಿನಿಂದ ಹೊರಬಂದ ಮೇಲೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿಲ್ಲ. ಡ್ರಗ್ಸ್ ಘಾಟು ಅಂಟಿದ ನಟಿಯ ಕೆರಿಯರ್ ಕೂಡಾ ಅಷ್ಟಕ್ಕಷ್ಟೇ.
ಇತ್ತೀಚೆಗೆ ಎನ್ಸಿಬಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ನಟಿ ರಿಯಾ ಚಕ್ರವರ್ತಿ ಹೆಸರು ಸೇರಿದಂತೆ ಸುಮಾರು 32 ಜನರ ಹೆಸರುಗಳಿವೆ. ನಟ ಸುಶಾಂತ್ ಸಿಂಗ್ ರಜಪೂತ್ನ ಆತ್ಮಹತ್ಯೆಗೆ ಸಂಬಂಧಿಸಿದ ಡ್ರಗ್ಸ್ ತನಿಖೆಗೆ ಸಂಬಂಧಿಸಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಮಾಧ್ಯಮಗಳಿಂದ ದೂರವೇ ಇದ್ದ ರಿಯಾ ತಬ್ಬಿಕೊಂಡೆ ಕಾಣಿಸಿಕೊಂಡ್ರು.. ಯಾರೀತ?
ಎನ್ಡಿಪಿಎಸ್ ಆಕ್ಟ್ನ ಸೆಕ್ಷನ್ 27ಎ ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದು, ಇದರ ಪ್ರಕಾರ ಕನಿಷ್ಠ 10 ಮತ್ತು ಗರಿಷ್ಠ ವರ್ಷ ಜೈಲು ಶಿಕ್ಷೆಯಾಗುತ್ತದೆ. 2019 ನವೆಂಬರ್ನಿಂದ ರಿಯಾ ಚಕ್ರವರ್ತಿ ಮನೆಯಲ್ಲಿ ಡ್ರಗ್ಸ್ ಡೀಲ್ಗಳು ನಡೆದಿವೆ ಎಂದು ಎನ್ಸಿಬಿ ತಿಳಿಸಿದೆ.
ಆಕೆ ಬಾಯ್ಫ್ರೆಂಡ್ ರಜಪೂತ್ಗೆ ಡ್ರಗ್ಸ್ ತೆಗೆದುಕೊಳ್ಳಲು ತನ್ನ ಮನೆಯಲ್ಲಿಯೇ ವ್ಯವಸ್ಥೆ ಮಾಡಿಕೊಟ್ಟಿದ್ದಳು. ಅಕ್ರಮ ಡ್ರಗ್ಸ್ ಡೀಲಿಂಗ್, ಡ್ರಗ್ಸ್ ಖರೀದಿಗೆ ರಿಯಾ ಚಕ್ರವರ್ತಿಯೇ ಹಣ ಒದಗಿಸಿದ್ದಳು ಎಂದು ಎನ್ಸಿಬಿ ಆರೋಪಿಸಿದೆ. ಆಕೆಯ ಸಹೋದರ ಶೋವಿಕ್ ನೆರವನ್ನೂ ಪಡೆದಿದ್ದಳು ಎಂದು ಎನ್ಸಿಬಿ ತಿಳಿಸಿದೆ.
ಎಲ್ಲರನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದ ರಿಯಾ.. ಬಾಕಿಯವರಿಗೆ ನೋ ಚಾನ್ಸ್!
ಸಿಕ್ಕಿರುವ ಸಾಕ್ಷಿಗಳ ಪ್ರಕಾರ ರಿಯಾ ಚಕ್ರವರ್ತಿ ಡ್ರಗ್ಸ್ ಸಂಗ್ರಹಿಸಿದ್ದು, ಪ್ರೊಸೆಸ್ ಮಾಡಿದ್ದು, ಸಾಗಾಟ ಮಾಡಿದ್ದು ಸಾಬೀತಾಗಿದೆ. ಅಂತಾರಾಜ್ಯ ಸಾಗಣೆಯನ್ನೂ ಮಾಡಿದ್ದಳು. ಗಾಂಜಾ, ಮರಿಜುವಾನಾ, ಬಡ್ ಮಾರಾಟ ಮಾಡುತ್ತಿದ್ದಳು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 7ರಂದು ರಿಯಾ ವಿರುದ್ಧ ಸಾಕ್ಷಿಗಳಿಲ್ಲ ಎಂದು ಬಾಂಬೆ ಹೈಕೋರ್ಟ್ ಆಕೆಗೆ ಬೇಲ್ ನೀಡಿತ್ತು.