ಮಮತಾ ಬ್ಯಾನರ್ಜಿ ಭೇಟಿಯಾದ ಸಲ್ಮಾನ್ ಖಾನ್; ಕುತೂಹಲ ಹೆಚ್ಚಿಸಿದ ಇಬ್ಬರ ಮಾತುಕತೆ

Published : May 14, 2023, 11:32 AM IST
ಮಮತಾ ಬ್ಯಾನರ್ಜಿ ಭೇಟಿಯಾದ ಸಲ್ಮಾನ್ ಖಾನ್; ಕುತೂಹಲ ಹೆಚ್ಚಿಸಿದ ಇಬ್ಬರ ಮಾತುಕತೆ

ಸಾರಾಂಶ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಭೇಟಿಯಾಗಿದ್ದಾರೆ. 

ಸದಾ ಡೇಟಿಂಗ್, ಮದುವೆ, ಸಿನಿಮಾ ವಿಚಾರಕ್ಕೆ ಸುದ್ದಿಯಾಗುತ್ತಿದ್ದ ಬಾಲಿವುಡ್ ಬ್ಯಾಡ್ ಸಲ್ಮಾನ್ ಖಾನ್ ಇದೀಗ ರಾಜಕೀಯ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ರಾಜಕೀಯ ಮತ್ತು ಸಿನಿಮಾರಂಗಕ್ಕೆ ವಿಶೇಷವಾದ ನಂಟಿದೆ. ಅನೇಕ ಸಿನಿಮಾ ತಾರೆಯರೂ ರಾಜಕೀಯರಂಗದಲ್ಲೂ ಮಿಂಚುತ್ತಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಇದೀಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಲ್ಮಾನ್ ಮತ್ತು ಮಮತಾ ಬ್ಯಾನರ್ಜಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇಬ್ಬರ ಭೇಟಿ ಭಾರಿ ಕುತೂಹಲ ಮೂಡಿಸಿದೆ. ಸದಾ ಸಿನಿಮಾ ಕೆಲಗಳಲ್ಲಿ ಬ್ಯುಸಿಯಾಗಿದ್ದ ಸಲ್ಮಾನ್ ಖಾನ್ ದೀಢೀರ್ ಮಮತಾ ಬ್ಯಾನರ್ಜಿ ಜೊತೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. 

ಕೋಲ್ಕತ್ತಾದ ಮಮತಾ ಬ್ಯಾನರ್ಜಿ ನಿವಾಸದಲ್ಲಿ ಸಲ್ಮಾನ್ ಖಾನ್ ಭೇಟಿಯಾಗಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸಲ್ಮಾನ್​ ಖಾನ್​ಗೆ ಮಮತಾ ಬ್ಯಾನರ್ಜಿ ಶಾಲು ಹೊದಿಸಿ ಸ್ವಾಗತಿಸಿದ್ದಾರೆ. ಇಬ್ಬರೂ ಕ್ಯಾಮರಾಗೆ ಪೋಸ್ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಇಬ್ಬರೂ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಳಿಕ ಮಮತಾ ಬ್ಯಾನರ್ಜಿ ಸಲ್ಮಾನ್ ಖಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

'ಪ್ರಸಿದ್ಧ ವ್ಯಕ್ತಿ ಮತ್ತು ಖ್ಯಾತ ಸಿನಿಮಾ ನಟ ಸಲ್ಮಾನ್ ಖಾನ್ ಅವರನ್ನು ನನ್ನ ನಿವಾಸದಲ್ಲಿ ಭೇಟಿಯಾಗಿ ಮತ್ತು ಅವರೊಂದಿಗೆ ಮಾತುಕತೆ ನಡೆಸಿದ್ದು ಸಂತೋಷವಾಗಿದೆ' ಎಂದು ಹೇಳಿದ್ದಾರೆ. 'ನಮ್ಮ ಮಾತುಕತೆ ಸಿನಿಮಾ ಪ್ರಪಂಚ, ಕಲೆ, ಸಮಾಜ ಮತ್ತು ಜನರ ಅಭಿವೃದ್ಧಿಯ ವಿವಿಧ ವಿಷಯಗಳ ಕುರಿತು ಅರ್ಥಪೂರ್ಣ ಒಳನೋಟಗಳನ್ನು ಒಳಗೊಂಡಿತ್ತು. ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಭೇಟಿ ನೀಡಿದ ಅವರಿಗೆ ನನ್ನ ನಮ್ರ ನಮನಗಳು. ಅವರಿಗೆ ಇನ್ನೂ ಯಶಸ್ಸು ಸಿಗಲಿ, ಆರೋಗ್ಯ, ಉತ್ತಮ ಭವಿಷ್ಯ ಅವರದ್ದಾಗಲಿ ಎಂದು ಶುಭಹಾರೈಸುತ್ತೇನೆ' ಎಂದು ಹೇಳಿದ್ದಾರೆ. 

ಕುಡಿದು ನಟರ ಜೀವನ ಹಾಳು ಮಾಡ್ತಿದ್ದಾರೆ ಸಲ್ಮಾನ್​ ಖಾನ್​? ಮನಬಿಚ್ಚಿ ಮಾತನಾಡಿದ ನಟ

ಅಷ್ಟಕ್ಕೂ ಪಶ್ಚಿಮ ಬಂಗಾಳ ಸಿಎಂ ಭೇಟಿಯಾಗ ಕಾರಣ, ಸಲ್ಮಾನ್ ಖಾನ್ ಸದ್ಯ ಕೋಲ್ಕತ್ತಾದಲ್ಲಿದ್ದಾರೆ. ದಬಂಗ್ ಟೂರ್ ಎನ್ನುವ ಕಾರ್ಯಕ್ರಮದ ವಿಚಾರವಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದು ಅಲ್ಲೇ ತಂಗಿದ್ದರು. ಆ ವೇಳೆ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಅನೇಕ ಕಲಾವಿದರು ಭಾಗಿಯಾಗುವ ಸಾಧ್ಯತೆ ಇದೆ. ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡಿಸ್, ಗುರು ರಾಂಧವ, ಸೋನಾಕ್ಷಿ ಸಿಂಹ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ.

ನೈತಿಕ ಪೊಲೀಸ್‌ಗಿರಿ ಮಾಡ್ತಿದ್ದಾರೆ; ಹೆಣ್ಮಕ್ಕಳ ಬಟ್ಟೆ ಕುರಿತು ಸಲ್ಮಾನ್ ಹೇಳಿಕೆಗೆ ನಟ ಚೇತನ್ ಅಹಿಂಸಾ ಕಿಡಿ

ಸಲ್ಮಾನ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಿದ್ರು ಸಹ ನಿರೀಕ್ಷೆಯ ಗೆಲುವು ತಂದುಕೊಟ್ಟಿಲ್ಲ. ಸದ್ಯ ಟೈಗರ್ -3 ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!