ವಿವಾದದಲ್ಲಿ ಸೈಫ್​ ಇರಿತ ಪ್ರಕರಣ! ಹೇಳಿಕೆ ಕೊಟ್ಟಿದ್ಯಾರು? FIR ಇಲ್ಲದೇ ವಿಮೆ ಹಣ ಬಂದದ್ಹೇಗೆ? ತನಿಖೆಗೆ ಆದೇಶ

Published : Jan 27, 2025, 05:43 PM ISTUpdated : Jan 28, 2025, 10:00 AM IST
ವಿವಾದದಲ್ಲಿ ಸೈಫ್​ ಇರಿತ ಪ್ರಕರಣ! ಹೇಳಿಕೆ ಕೊಟ್ಟಿದ್ಯಾರು? FIR ಇಲ್ಲದೇ ವಿಮೆ ಹಣ ಬಂದದ್ಹೇಗೆ? ತನಿಖೆಗೆ ಆದೇಶ

ಸಾರಾಂಶ

ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ದಾಳಿಕೋರನ ಗುರುತು, ಸೈಫ್ ಆಸ್ಪತ್ರೆಗೆ ಆಟೋದಲ್ಲಿ ಹೋದ ಸಂಗತಿ, ಶೀಘ್ರ ಗುಣಮುಖತೆ, ವೈರಲ್ ಫೋಟೋಗಳ ಸತ್ಯಾಸತ್ಯತೆ ಚರ್ಚೆಯಲ್ಲಿದೆ. ₹25 ಲಕ್ಷದ ನಗದುರಹಿತ ವಿಮಾ ಪರಿಕ್ಷೆಗೆ ಅನುಮೋದನೆ ವಿವಾದಕ್ಕೆ ಕಾರಣವಾಗಿದ್ದು, ಎಫ್‌ಐಆರ್ ಇಲ್ಲದೆ ಅನುಮೋದನೆ ನೀಡಿದ್ದೇಕೆ ಎಂದು ವೈದ್ಯಕೀಯ ಸಂಘ ಪ್ರಶ್ನಿಸಿದೆ.

ಇದೇ 15ರಂದು ನಟ ಸೈಫ್​ ಅಲಿ ಖಾನ್​ ಮೇಲೆ ನಡೆದ ಚೂರಿ ಇರಿತದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ರಿಯಲ್ಲೋ, ರೀಲೋ ಎನ್ನುವ ಚರ್ಚೆ ಶುರುವಾಗಿದೆ. ಘಟನೆ ನಡೆದಿದೆ ಎಂದ ಕ್ಷಣದಿಂದ ಹಿಡಿದು, ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದು, ಮನೆಯಲ್ಲಿ ಅಷ್ಟೆಲ್ಲಾ ಕಾರುಗಳಿದ್ದರೂ, ಚಾಲಕರು ಇದ್ದರೂ ಆಟೋದಲ್ಲಿ ಹೋಗಿದ್ದು, ಅದಕ್ಕೆ ಒಂದಿಷ್ಟು ಕಾರಣಗಳನ್ನು ನೀಡಿದ್ದು, ಇಷ್ಟು ದೊಡ್ಡ ಚೂರಿ ದೇಹದಿಂದ ತೆಗೆಯಲಾಗಿದೆ ಎನ್ನುವ ಫೋಟೋ ವೈರಲ್​ ಆಗಿದ್ದು, ಅದನ್ನು ನೋಡಿದರು ಅಬ್ಬಬ್ಬಾ ನಟನಿಗೆ ಇದ್ಯಾವ ಪರಿಯಲ್ಲಿ ಗಾಯವಾಗಿದೆ ಎಂದು ಶಾಕ್​ಗೆ ಒಳಗಾಗುತ್ತಿರುವಾಗಲೇ ಆಸ್ಪತ್ರೆಯಿಂದ ಏನೂ ಆಗಿಲ್ಲ ಎನ್ನುವಂತೆ ಶೀಘ್ರದಲ್ಲಿಯೇ ನಟ ಡಿಸ್​ಚಾರ್ಜ್​ ಆಗಿದ್ದು, ವಾಪಸ್​ ಬಂದು ಮಾಮೂಲಿನಂತೆಯೇ ಆಟೋ ಡ್ರೈವರ್​ಗೆ ಸಿಕ್ಕಿದ್ದು ಇವೆಲ್ಲವೂ ಬಹು ಚರ್ಚಿತ ವಿಷಯ ಆಗಿರುವ ನಡುವೆಯೇ,   ಇದೀಗ ವಿಮಾ ಕಂಪೆನಿ ವಿರುದ್ಧ ಭಾರಿ ವಿವಾದ ಹುಟ್ಟಿಕೊಂಡಿದೆ!

 ವಿಮಾ ಕಂಪೆನಿಯ ವಿವಾದವನ್ನು ನೋಡುವ ಮೊದಲು, ಸೈಫ್​ ಮೇಲೆ ದಾಳಿ ಮಾಡಿದವನ ಕುರಿತು ಇದೀಗ ಬಂದಿರುವ ಹೊಸ ಅಪ್​ಡೇಟ್ ನೋಡುವುದಾದರೆ, ಪೊಲೀಸರು ಹಿಡಿದ ವ್ಯಕ್ತಿ ಹಾಗೂ ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿ ಬೇರೆ ಬೇರೆ ಎನ್ನುವ ಮಾಹಿತಿ ಸಿಕ್ಕಿದೆ. ಸಿಸಿಟಿವಿಯಲ್ಲಿ ಇರುವವ ನಮ್ಮ ಮಗನಲ್ಲ ಎಂದು ಸೆರೆಯಾಗಿರುವ ಯುವಕನ ಅಪ್ಪ ಹೇಳಿದ್ದಾರೆ. ಅವರು ಒಂದು ವೇಳೆ ಸುಳ್ಳು ಹೇಳುತ್ತಿದ್ದಾರೆ ಎಂದು  ಭಾವಿಸಿದರೂ, ಅವರಿಬ್ಬರ ಫಿಂಗರ್​ಪ್ರಿಂಟ್​ ಮ್ಯಾಚ್​ ಆಗದೇ ಇರುವುದು ಇದಕ್ಕೆ ಪುಷ್ಟಿ ನೀಡಿದೆ. ಅದೇನೋ ಸರಿ, ಒಂದು ವೇಳೆ ಅರೆಸ್ಟ್​ ಆದ ವ್ಯಕ್ತಿ ಅಸಲಿ ಅಪರಾಧಿ ಅಲ್ಲದಿದ್ದರೆ, ತಾನು ಸೈಫ್​ ಅಲಿ ಮನೆಗೆ ಗೊತ್ತಿಲ್ಲದೇ ಹೋಗಿರುವುದಾಗಿ ಆರೋಪಿ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ವಿವರಣೆ ನೀಡಿದ್ದರು. ಸೈಫ್​ ಮನೆಗೆ ಹೋಗಿರುವ ವ್ಯಕ್ತಿ ಆತ ಅಲ್ಲ ಅಂದ ಮೇಲೆ ಅವನು ಹೇಳಿಕೆ  ಕೊಡಲು ಹೇಗೆ  ಸಾಧ್ಯ? ಈ ವಿಷಯದಲ್ಲಿ ಪೊಲೀಸರು ಸುಳ್ಳು ಹೇಳಿದ್ರಾ ಎನ್ನುವ ಚರ್ಚೆ  ಶುರುವಾಗಿದೆ!

ಸೈಫ್​ ಮನೆಯೆಂದು ಗೊತ್ತಿಲ್ದೇ ನುಗ್ಗಿದ್ನಂತೆ ಕಳ್ಳ! ಪೊಲೀಸರಿಗೆ ಪರೋಟಾ ಸಾಕ್ಷಿ- ಖದೀಮ ಸಿಕ್ಕಿಬಿದ್ದದ್ದೇ ರೋಚಕ...

 ಸೆಲೆಬ್ರಿಟಿಗಳ ಮನೆಯಲ್ಲಿ ಚಾಲಕ ಇರುವುದಿಲ್ಲವೆ ಎಂದು ಆರಂಭದಲ್ಲಿ ಈ ಬಗ್ಗೆ ಪ್ರಶ್ನೆಗಳು ಮೂಡಿಬಂದಿದ್ದವು. ಅಪ್ಪನಿಗೆ ಈ ಪರಿ ಇರಿತ ಆದಾಗ ಮಗನಿಗೆ ದಿಕ್ಕೇ ತೋಚುವುದಿಲ್ಲ, ಆ ಸಮಯದಲ್ಲಿ ಕಾರು ಓಡಿಸುವುದು ಸೇಫ್​ ಅಲ್ಲ ಎಂಬ ಹೇಳಿಕೆ ನಿಜವಾಗಿರಬಹುದು, ಅದು ಸಹಜ ಕೂಡ. ಆದರೆ, ಕಾರು ಚಾಲಕ ಇರಲಿಲ್ಲವಾ? ರಸ್ತೆಗೆ ಹೋಗಿ ಆಟೋ ಮಾಡಿಸುವಷ್ಟು ಸಾಮಾನ್ಯ ಮನುಷ್ಯರಾ ಸೈಫ್​ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಒಂದು ವೇಳೆ ಆಟೋದಲ್ಲಿ ಹೋಗಿದ್ದರೂ, ಅಲ್ಲಿ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ವಿಶೇಷ ರೀತಿಯಲ್ಲಿ ಟ್ರೀಟ್​ಮೆಂಟ್​ ದೊರೆತಿದ್ದರೆ ಅದೇನೂ ಅಚ್ಚರಿಯಲ್ಲ. ಆದರೆ ಎಷ್ಟೋ ಕಡೆ ಇರಿತ, ಇಷ್ಟುದ್ದದ ಚೂರಿಯನ್ನು ತೆಗೆದಿರುವ ಫೋಟೋ... ಇವೆಲ್ಲಾ ವೈರಲ್​ ಆಗಿದ್ದು ಸುಳ್ಳಾ? ಸೈಫ್​ ಸ್ಥಿತಿ ಗಂಭೀರವಾಗಿದೆ ಎಂದು ಆರಂಭದಲ್ಲಿ ವೈದ್ಯರು ಹೇಳಿದ್ದು ನೋಡಿದರೆ, ಸಾಮಾನ್ಯ ಮನುಷ್ಯ ಅಷ್ಟು ಬೇಗ ವಾಸಿಯಾಗಲು ಸಾಧ್ಯವಿಲ್ಲ, ಅದೂ ಅಷ್ಟು ದೊಡ್ಡ ಚೂರಿ ದೇಹದಲ್ಲಿ ಹೊಕ್ಕಿರುವಾಗ? ಹೀರೋ ಆಗಿದ್ದರೆ ಸಿನಿಮಾದಲ್ಲಿ ಆಗಿರಬಹುದು, ನಿಜ ಜೀವನದಲ್ಲಿಯೂ ಹೀರೋ ಎಂದು ವೈದ್ಯರೇ ಹಾಡಿ ಹೊಗಳಿದ್ದರೂ ಅಷ್ಟು ಬೇಗ ಡಿಸ್​ಚಾರ್ಜ್​ ಆಗಿ ಅಷ್ಟು ಸುಲಭದಲ್ಲಿ ಓಡಾಟ ಮಾಡಲು ಸಾಧ್ಯವೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇವುಗಳ ನಡುವೆಯೇ ಇದೀಗ, ಅವರಿಗೆ 25 ಲಕ್ಷ ರೂಪಾಯಿಗಳ ನಗದುರಹಿಸ ಚಿಕಿತ್ಸಾ ಕ್ಲೇಮ್​ಗೆ ಅನುಮೋದನೆ ದೊರೆತಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಸುಮಾರು 14 ಸಾವಿರದಷ್ಟು ವೈದ್ಯಕೀಯ ವೃತ್ತಿಪರರನ್ನು ಪ್ರತಿನಿಧಿಸುವ ಅಸೋಸಿಯೇಷನ್ ​​ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ (AMC), ಈಗ ಈ ಬಗ್ಗೆ ತಕರಾರು ತೆಗೆದಿದೆ.  ಸೈಫ್​ ಅವರಿಗೆ ಅಷ್ಟು ಬೇಗ ಅನುಮೋದನೆ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದೆ.   ಮಾತ್ರವಲ್ಲದೇ ಈ ಬಗ್ಗೆ  ಎಎಂಸಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ತನಿಖೆಗೆ ಆದೇಶಿಸಿರುವುದಾಗಿ ಕರೆ  ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಷ್ಟಕ್ಕೂ ಇದು ವಿವಾದಕ್ಕೆ ಕಾರಣವಾಗಿದ್ದು ಏಕೆಂದರೆ, ಇಂಥ  ಪ್ರಕರಣಗಳಲ್ಲಿ ನಿಯಮಾನುಸಾರ ಮೊದಲು ಎಫ್​ಐಆರ್ ದಾಖಲಾಗಬೇಕು.  ವೈದ್ಯಕೀಯ ಕಾನೂನು ಪ್ರಕರಣಗಳಲ್ಲಿ ಎಫ್‌ಐಆರ್ ಪ್ರತಿಯಂತಹ ಹೆಚ್ಚುವರಿ ದಾಖಲೆಗಳನ್ನು ನೀಡಬೇಕು. ಆದರೆ, ಸೈಫ್​ ಪ್ರಕರಣದಲ್ಲಿ ಏಕಾಏಕಿ ಅನುಮೋದನೆ ನೀಡಿರುವುದು ಏಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ. FIR ಪ್ರತಿ ಇಲ್ಲದೇ   ನಗದುರಹಿತ ವಿನಂತಿಯನ್ನು ತಕ್ಷಣವೇ ಅನುಮೋದಿಸಿರುವುದು ಹೇಗೆ ಎಂದು ಪ್ರಶ್ನಿಸಲಾಗಿದೆ.

ಸೈಫ್​ ಮೇಲೆ ಹಲ್ಲೆ ಮಾಡಿದ ರಾಷ್ಟ್ರೀಯ ಕುಸ್ತಿಪಟು ಶರೀಫುಲ್ಲಾ, ವಿಜಯ್​ ದಾಸ್​ ಆಗಿದ್ದು ಹೇಗೆ? ರೋಚಕ ಸ್ಟೋರಿ ಇಲ್ಲಿದೆ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್