
ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಆಗಿರುವ ರೆಮೋ ಡಿಸೋಜ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ರಹಸ್ಯವಾಗಿ ಭಾಗವಹಿಸಿದ್ದು, ಫೋಟೋ ವೀಡಿಯೋಗಳನ್ನು ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ರಿಶ್ಚಿಯನ್ ಆಗಿರುವ ರೆಮೋ ಡಿಸೋಜ ಅವರು ಹಿಂದೂ ಮಹಾ ಧಾರ್ಮಿಕ ಸಮಾಗಮವಾದ ಮಹಾಕುಂಭ ಮೇಳದಲ್ಲಿ ಭಾಗವಹಿಸಿರುವ ಕಾರಣಕ್ಕೆ ಇವರ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಹಲವು ಚರ್ಚೆಗಳನ್ನು ಸೃಷ್ಟಿಸಿವೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನೃತ್ಯ ಸಂಯೋಜಕ ರೆಮೋ ಡಿಸೋಜಾ ಅವರು ಕುಂಭಮೇಳಕ್ಕೆ ಭೇಟಿ ನೀಡಿದ ವೀಡಿಯೋವನ್ನು ಹಂಚಿಕೊಂಡಿದ್ದರು. ಅವರು ತಮ್ಮ ಪತ್ನಿ ಲಿಜೆಲ್ ಅವರೊಂದಿಗೆ ಸ್ವಾಮಿ ಕೈಲಾಸಾನಂದ ಗಿರಿ ಮಹಾರಾಜ್ ಅವರಿಂದ ಆಶೀರ್ವಾದ ಪಡೆಯುತ್ತಿರುವ ಚಿತ್ರಗಳ ಸರಣಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಅವರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು, ಇದು ಅವರ ಆಧ್ಯಾತ್ಮಿಕ ಪ್ರಯಾಣದ ಮಹತ್ವದ ಕ್ಷಣವಾಗಿದ್ದು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ರೆಮೋ ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಪನ್ನು ಧರಿಸಿ ಮುಖವನ್ನು ಭಾಗಶಃ ಮುಚ್ಚಿಕೊಂಡಿದ್ದಾರೆ. ನಂತರ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ದೋಣಿ ವಿಹಾರ ಮಾಡುತ್ತಿರುವ ಫೋಟೋಗಳಿವೆ. ಇವಲ್ಲದೇ ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್ ಅವರೊಂದಿಗೆ ಇರುವ ಹಲವಾರು ಫೋಟೋಗಳನ್ನು ರೆಮೋ ಹಂಚಿಕೊಂಡಿದ್ದಾರೆ.
ರೆಮೋ ಡಿಸೋಜ ಸೇರಿದಂತೆ ಕೆಲ ಬಾಲಿವುಡ್ ಸೆಲೆಬ್ರಿಟಿಗಳಿಗೆ ಕೊಲೆ ಬೆದರಿಕೆ ಕರೆ ಬಂದಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಈ ಬೆದರಿಕೆಯ ನಡುವೆಯೂ ರೆಮೋ ಡಿಸೋಜ ರಹಸ್ಯವಾಗಿ ಕೋಟ್ಯಾಂತರ ಜನ ಭಾಗವಹಿಸುವ ಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡಿದ್ದು, ಮೆಚ್ಚುಗೆ ಹಾಗೂ ಅಚ್ಚರಿಗೆ ಪಾತ್ರವಾಗಿದೆ. ಅಲ್ಲದೇ ಅವರೊಬ್ಬ ಕ್ರಿಶ್ಚಿಯನ್ ಆಗಿದ್ದರೂ ಸಹ ಹಿಂದೂ ಸನಾತನ ಧರ್ಮದ ಆಚರಣೆಗಳನ್ನು ಪಾಲಿಸಿದ್ದಕ್ಕೆ ಅನೇಕರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಅವರ ನಿಜವಾದ ಧರ್ಮ ಯಾವುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ., ಅನೇಕರು ಅವರೊಬ್ಬ ಮೂಲತಃ ಹಿಂದೂ ಎಂದು ಹೇಳುತ್ತಿದ್ದಾರೆ. ಹಾಗಿದ್ರೆ ರೆಮೋ ಡಿಸೋಜ ನಿಜವಾದ ಹೆಸರೇನು ಮೂಲತಃ ಅವರೊಬ್ಬ ಹಿಂದೂವೇ ?
ಹೌದು ರೆಮೋ ಡಿಸೋಜ ಜನಿಸಿದ್ದು ಹಿಂದೂ ಕುಟುಂಬದಲ್ಲಿ ಕೇರಳ ಮೂಲದ ದಂಪತಿಯಾದ ಮಾಧವಿಯಮ್ಮ ನಾಯರ್ ಹಾಗೂ ಗೋಪಿ ನಾಯರ್ ದಂಪತಿಯ ಮಗನಾಗಿ 1974ರ ಏಪ್ರಿಲ್ 2 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ರಮೇಶ್ ಗೋಪಿ ನಾಯರ್. ಇವರ ತಂದೆ ಗೋಪಿ ನಾಯರ್ ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ ಮಾಧವಿಯಮ್ಮ ಗೃಹಿಣಿ. ಆದರೆ ಗುಜರಾತ್‌ನ ಜಮಾನಗರದಲ್ಲಿ ಶಿಕ್ಷಣ ಪೂರೈಸಿ ಬಳಿಕ ನೃತ್ಯಸಸಂಯೋಜನೆಯಲ್ಲಿ ಗುರುತಿಸಿಕೊಂಡಿದ್ದ ರೆಮೋ ತಮ್ಮ ಪತ್ನಿ ಲಿಜೆಲ್ಲೆ ವ್ಯಾಟ್ಕಿನ್ಸ್ ಅವರನ್ನು ಮದುವೆಯಾಗುವುದಕ್ಕಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿ ಬಳಿಕ ರೆಮೋ ಡಿಸೋಜ ಎಂದು ಹೆಸರು ಬದಲಿಸಿಕೊಂಡರು.
ಇದೇ ಕಾರಣಕ್ಕೆ ರೆಮೋ ಅವರ ಈ ಕುಂಭ ಮೇಳದ ಪುಣ್ಯಸ್ನಾನ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಅನೇಕರು ಅವರಿಗೆ ಸನಾತನ ಧರ್ಮಕ್ಕೆ ಸ್ವಾಗತ ಎನ್ನುತ್ತಿದ್ದಾರೆ. ರಮೇಶ್ ಗೋಪಿ ನಾಯರ್ ತಮ್ಮ ಮೂಲವನ್ನು ಅನುಸರಿಸಿಕೊಂಡು ಹೋಗುತ್ತಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎಷ್ಟೇ ಹಾರಾಡಿದರೂ ಎಲ್ಲರೂ ಒಂದಲ್ಲ ಒಂದು ದಿನ ತಮ್ಮ ಮೂಲಕ್ಕೆ ಮರಳಲೇಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರೆಮೋ ಡಿಸೋಜ ಅವರ ಈ ಆಧ್ಮಾತ್ಮಿಕ ಪಯಣದ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.