ಬಾಲಿವುಡ್ ನಟ ಸೈಫ್ ಮಗಳಾದ್ರೂ ಅವಕಾಶಕ್ಕಾಗಿ ನಿರ್ದೇಶಕರನ್ನು ಬೇಡಿದ್ರು ಸಾರಾ..!

Suvarna News   | Asianet News
Published : Aug 21, 2020, 12:53 PM ISTUpdated : Aug 21, 2020, 01:11 PM IST
ಬಾಲಿವುಡ್ ನಟ ಸೈಫ್ ಮಗಳಾದ್ರೂ ಅವಕಾಶಕ್ಕಾಗಿ ನಿರ್ದೇಶಕರನ್ನು ಬೇಡಿದ್ರು ಸಾರಾ..!

ಸಾರಾಂಶ

ಬಾಲಿವುಡ್ ನೆಪೊಟಿಸಂ, ಸ್ಟಾರ್ ಕಿಡ್‌ಗಳ ಕುರಿತು ಚರ್ಚೆ ಹೆಚ್ಚಾಗುತ್ತಿರುವಾಗ ನಟಿ ಸಾರಾ ಫಿಲ್ಮ್ ಕೆರಿಯರ್ ಆರಂಭದ ಬಗ್ಗೆ ನಿರ್ದೇಶಕ ರೋಹಿತ್ ಶೆಟ್ಟಿ ಮಾತನಾಡಿದ್ದಾರೆ. ಸಾರಾ ಬಗ್ಗೆ ಏನ್ ಹೇಳಿದ್ದಾರೆ..? ಇಲ್ಲಿ ಓದಿ..

ಬಾಲಿವುಡ್ ನೆಪೊಟಿಸಂ, ಸ್ಟಾರ್ ಕಿಡ್‌ಗಳ ಕುರಿತು ಚರ್ಚೆ ಹೆಚ್ಚಾಗುತ್ತಿರುವಾಗ ನಟಿ ಸಾರಾ ಫಿಲ್ಮ್ ಕೆರಿಯರ್ ಆರಂಭದ ಬಗ್ಗೆ ನಿರ್ದೇಶಕ ರೋಹಿತ್ ಶೆಟ್ಟಿ ಮಾತನಾಡಿದ್ದಾರೆ. ಬಾಲಿವುಡ್‌ನಲ್ಲಿ ಒಳಗಿನವರು, ಹೊರಗಿನವರು, ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆ ಹೆಚ್ಚಾಗುತ್ತಿರುವಾಗ ನಿರ್ಮಾಪಕ ರೋಹಿತ್ ಶೆಟ್ಟಿ ಸಾರಾ ಬಗ್ಗೆ ಮಾತನಾಡಿರುವುದು ವೈರಲ್ ಆಗಿದೆ.

ಸುಶಾಂತ್ ಕೇಸ್ ಸಿಬಿಐಗೆ: ನಟಿ ರಿಯಾಳನ್ನು ಫಿಲ್ಮ್‌ನಿಂದ ಕೈಬಿಟ್ಟ ನಿರ್ದೇಶಕ

2018ರ ಸಿಂಬ ಸಿನಿಮಾದಲ್ಲಿ ಸಾರಾ ಅವ್ರನ್ನು ಆಯ್ಕೆ ಮಾಡಿರುವ ಬಗ್ಗೆ ನಿರ್ದೇಶಕ ಮಾತನಾಡಿದ್ದಾರೆ. ಸಾರಾ ಒಂದು ಅವಕಾಶ ಕೊಡಿ ಒಂದು ಬೇಡಿಕೊಂಡಾಗ ಬೇಜಾರಾಗಿತ್ತು ಎಂದಿದ್ದಾರೆ ರೋಹಿತ್ ಶೆಟ್ಟಿ.

ಕಪಿಲ್ ಶರ್ಮಾ ಶೋದಲ್ಲಿ ಮಾತನಾಡಿದ್ದ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಸರ್ ಪ್ಲೀಸ್‌ ನನಗೆ ಕೆಲಸ ಕೊಡಿ. ಅಕ್ಷರಶಃ ನನ್ನಲ್ಲಿ ಬೇಡಿಕೊಂಡಿದ್ದಳು. ಸೈಫ್ ಅಲಿಖಾನ್ ಮಗಳು ಅವಕಾಶಕ್ಕಾಗಿ ಬೇಡಿಕೊಂಡಿದ್ದಳು.

ಕರ್ನಾಟಕದ ದಿವ್ಯಾಂಗ ಮಹಿಳೆಗೆ ತರಕಾರಿ ಅಂಗಡಿ ತೆರೆಯಲು ನಟ ಸೋನು ನೆರವು

ನಟಿ ಅಮೃತಾ ಸಿಂಗ್, ನಟ ಸೈಫ್ ಅಲಿಖಾನ್ ಮಗಳು ಸಾರಾ ಒಬ್ಬಳೇ ನನ್ನ ಆಫೀಸ್‌ಗೆ ಬಂದು ಕೆಲಸ ಕೇಳಿದ್ದಳು. ನನಗೆ ಅಳು  ಬಂತು. ನೀನು ಸಿನಿಮಾ ಮಾಡು ಎಂದು ಹೇಳಿದ್ದೆ ಎಂದಿದ್ದಾರೆ ರೋಹಿತ್ ಶೆಟ್ಟಿ.

ಕೇದರ್‌ನಾಥ್‌ ಸಿನಿಮಾ ನಂತರ ಸಾರಾಳ ಸಿಂಬ ಸಿನಿಮಾ ಜಿಟ್ ಆಯ್ತು. ಜೂನ್‌ನಲ್ಲಿ ಸುಶಾಂತ್ ಆತ್ಮಹತ್ಯೆ ನಂತರ ನೆಪೊಟಿಸಂ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷ ಮಾತನಾಡಿದ ಸಾರಾ, ಸ್ಟಾರ್‌ ಕಿಟ್‌ಗಳಿಗೆ ಬಾಲಿವುಡ್‌ ಸೇರುವುದು ಸುಲಭ ಎಂದ ಸಾರಾ ಹೇಳಿದ್ದರು. ಬಾಲಿವುಡ್ ಪ್ರಮುಖ್ಯ ವ್ಯಕ್ತಿಗಳನ್ನು ಸ್ಟಾರ್‌ ಕಿಡ್‌ಗಳು ಸುಲಭವಾಗಿ ಸಂಪರ್ಕಿಸುವುದಕ್ಕೆ ಸಾಧ್ಯ. ನಾನು ಯಾವುದೇ ಸಿನಿಮಾ ಮಾಡದಿದ್ದರೂ ಕರಣ್ ಜೋಹರ್‌ಗೆ ಕಾಲ್ ಮಾಡಬಹುದು. ನಾನು ರೋಹಿತ್ ಶೆಟ್ಟಿ ಆಫೀಸ್‌ಗೆ ಹೋಗಬಹುದು. ಇದುವೇ ನಮಗಿರುವ ಪ್ರಯೋಜನ ಎಂದಿದ್ದರು. ಆದರೆ ನಮಗೆ ಸಿಗುವ ಸೌಲಭ್ಯಕ್ಕೂ ಮಿತಿ ಇದೆ. ನಾವು ಕಷ್ಟಪಟ್ಟು ದುಡಿಯಬೇಕು ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?