ನಟಿ ಸಾಯಿ ಪಲ್ಲವಿಯ ತಂಗಿ ಪೂಜಾ ಕಣ್ಣನ್‌ಳ ನಿಶ್ಚಿತಾರ್ಥ ಅವಳ ಧೀರ್ಘಕಾಲದ ಬಾಯ್‌ಫ್ರೆಂಡ್ ವಿನೀತ್ ಜೊತೆ ನೆರವೇರಿದೆ. ಈ ಸಮಯದಲ್ಲಿ ಅಕ್ಕ ಹೇಗೆ ಜೊತೆಯಾಗಿದ್ದಳು ಎಂಬ ವಿಡಿಯೋವನ್ನು ತಂಗಿ ಶೇರ್ ಮಾಡಿದ್ದಾಳೆ. ಇದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ.
ನಟಿ ಸಾಯಿ ಪಲ್ಲವಿಯ ತಂಗಿ ಪೂಜಾ ಕಣ್ಣನ್ ತನ್ನ ಧೀರ್ಘಕಾಲದ ಬಾಯ್‌ಫ್ರೆಂಡ್ ವಿನೀತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಸಮಯದಲ್ಲಿ ಅಕ್ಕ ಸಾಯಿ ಪಲ್ಲವಿ ತಂಗಿಗೆ ಹೇಗೆಲ್ಲ ಜೊತೆಯಾಗಿ ನಿಂತಿದ್ದಳು ಎಂಬುದನ್ನು ತೋರಿಸುವ ವಿಡಿಯೋವನ್ನು ಪೂಜಾ ಹಂಚಿಕೊಂಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ನನಗೂ ಇಂಥ ಅಕ್ಕ ಇರಬೇಕಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಮೊನ್ನೆಯಷ್ಟೇ ಸಾಯಿಪಲ್ಲವಿಯ ತಂಗಿ ಪೂಜಾಳ ನಿಶ್ಚಿತಾರ್ಥವಾಗಿದೆ. ಈ ಸಂಬಂಧ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಾ ಗಮನ ಸೆಳೆಯುತ್ತಿವೆ. ಈ ಮಧ್ಯೆ ನಟಿಯ ಸಹೋದರಿ ನಿಶ್ಚಿತಾರ್ಥದ ಸಮಯದಲ್ಲಿ ಅಕ್ಕ ತನಗೆ ಬೆಂಬಲವಾಗಿ ನಿಂತ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದು ನೋಡಿದವರ ಹೃದಯ ಕರಗಿಸುವಷ್ಟು ಸುಂದರವಾಗಿದೆ. ಈ ವಿಡಿಯೋಗೆ ಪೂಜಾ, 'ಅವಳು ನನ್ನ ಜೊತೆ ಇಲ್ಲದಿದ್ದರೆ ಆ ದಿನವನ್ನು ಅಥವಾ ಯಾವುದೇ ದಿನವನ್ನು ಕಳೆಯಲು ನನ್ನಿಂದಾಗುತ್ತಿರಲಿಲ್ಲ. ಐ ಲವ್ಯೂ ದ ಮೋಸ್ಟ್' ಎಂದು ಬರೆದು ಅಕ್ಕ ಸಾಯಿ ಪಲ್ಲವಿಯನ್ನು ಟ್ಯಾಗ್ ಮಾಡಿದ್ದಾಳೆ.
ನಟಿ ಆಶಿಕಾ ರಂಗನಾಥ್ ಅಕ್ಕ ಅನುಷಾ ಮದುವೆ ಸಂಭ್ರಮ ಹೇಗಿತ್ತು ನೋಡಿ
ಈ ವಿಡಿಯೋದಲ್ಲಿ ಸರಳವಾದ ಬಿಳಿ ಕುರ್ತಾ ಧರಿಸಿರುವ ಸಾಯಿ ಪಲ್ಲವಿ ತಂಗಿಯ ಕೈ ಕಾಲು ಉಗುರುಗಳಿಗೆ ಬಣ್ಣ ಹಚ್ಚುವುದನ್ನು ಕಾಣಬಹುದು. ತಂಗಿಯ ಫೋಟೋ ತೆಗೆಯುತ್ತಾ, ಅವಳ ಕಾಲಿಗೆ ಗೆಜ್ಜೆ ಹಾಕುತ್ತಾ,ಲಿಪ್‌ಸ್ಟಿಕ್ ಹಚ್ಚಿ ಹಣೆಗೆ ಬಿಂದಿ ಇಡುತ್ತಾ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ.
ಅಷ್ಟೇ ಅಲ್ಲ, ಸಮಾರಂಭದಲ್ಲಿ ತಂಗಿಯ ಕೂದಲು, ಸೀರೆ ಸರಿ ಮಾಡುತ್ತಾ, ಜೊತೆ ನಿಂತು ಮಾತಾಡಿ ನಗಿಸುತ್ತಾ, ತಂಗಿಯೊಂದಿಗೆ ಡ್ಯಾನ್ಸ್ ಮಾಡುತ್ತಾ, ಜೋಡಿಯ ಫೋಟೋ ತೆಗೆಯುವ ಸಾಯಿಪಲ್ಲವಿಯನ್ನು ನೋಡಿದರೆ ಎಂಥವರಿಗೂ ಇಂಥ ಅಕ್ಕ ಇರಬೇಕು ಎನಿಸುವುದರಲ್ಲಿ ಅತಿಶಯೋಕ್ತಿ ಇಲ್ಲ.
ಸಮಾರಂಭದಲ್ಲಿ ಸಿಂಪಲ್ ಹಳದಿ ಸೀರೆಯುಟ್ಟು, ತೀರಾ ಸರಳ ಮೇಕಪ್ ಮಾಡಿರುವ ಸಾಯಿ ಪಲ್ಲವಿಯ ಗುಣ ಅಚ್ಚರಿ ಮೂಡಿಸುತ್ತದೆ. ಅಂಥಾ ದೊಡ್ಡ ನಟಿಯೊಬ್ಬಳು ತನ್ನ ಮನೆಯ ಕಾರ್ಯಕ್ರಮದಲ್ಲೇ ಇಷ್ಟು ಸರಳವಾಗಿ ಇರಲು ಸಾಧ್ಯವೇ ಎನಿಸುತ್ತದೆ.
ನಾಳೆನೇ ಒಟಿಟಿಗೆ ಬರಲಿದೆ 'ಎನಿಮಲ್'; ಯಾವ ಪ್ಲ್ಯಾಟ್‌ಫಾರಂನಲ್ಲಿ ನೋಡ್ಬೋದು ರಣಬೀರ್ ಕಪೂರ್ ಚಿತ್ರ?
ಈ ವಿಡಿಯೋ ನೋಡಿದ ನೆಟ್ಟಿಗರು, ನೀವು ಅದೃಷ್ಟವಂತೆ ಎಂದು ಪೂಜಾಗೆ ಹೇಳುವ ಜೊತೆಗೆ ಸಾಯಿ ಪಲ್ಲವಿಯ ಸಿಂಪ್ಲಿಸಿಟಿಗೆ ಮರುಳಾಗಿದ್ದಾರೆ.
ಇಲ್ಲಿದೆ ವಿಡಿಯೋ