ಈ ವರ್ಷ ಚಿತ್ರಮಂದಿರಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ರಣಬೀರ್ ಕಪೂರ್ ರಶ್ಮಿಕಾ ಮಂದಣ್ಣ ಅಭಿನಯದ ಎನಿಮಲ್. ಇದು ಇದೇ ಗಣರಾಜ್ಯೋತ್ಸವದಂದು ಒಟಿಟಿಗೆ ಬರಲಿದೆ. ಎಲ್ಲಿ ವೀಕ್ಷಣೆ ಮಾಡಬೇಕು?
ನಿಮ್ಮ ಗಣರಾಜ್ಯೋತ್ಸವ ರಜೆಯ ಮನರಂಜನೆ ಹೆಚ್ಚಿಸಲು ಒಟಿಟಿಗೆ ಬರುತ್ತಿದೆ 'ಎನಿಮಲ್' ಚಿತ್ರ.
ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ನಟಿಸಿರುವ ಬ್ಲಾಕ್‌ಬಸ್ಟರ್ ಚಲನಚಿತ್ರ ಅನಿಮಲ್ ಅನ್ನು 26 ಜನವರಿ 2024 ರಂದು ಒಟಿಟಿಗೆ ಬಿಡುಗಡೆ ಮಾಡಲಾಗುತ್ತಿದೆ.
ಈ ಬಾರಿ 26-28ರವರೆಗೆ ದೀರ್ಘ ವಾರಾಂತ್ಯವಿದ್ದು, ಇದೇ ಸಮಯದಲ್ಲಿ ಎನಿಮಲ್ ನಿಮ್ಮ ಹೆಬ್ಬೆರಳ ತುದಿಯಲ್ಲಿ ಲಭ್ಯವಿರುತ್ತದೆ. ಇಷ್ಟಕ್ಕೂ ಯಾವ ಪ್ಲ್ಯಾಟ್‌ಫಾರಂನಲ್ಲಿ ಈ ಚಿತ್ರ ಸಿಗುತ್ತದೆ ಎಂದು ನೋಡುತ್ತಿದ್ದೀರಾ?
ಒಪ್ಪಿಗೆ ಪಡೆಯದೇ ಸೊಸೆ ಎಂದ ಬಿಗ್ ಬಾಸ್ ಸ್ನೇಹಿತ್ ತಂದೆ; ನಮ್ರತಾ ಗೌಡ ಫುಲ್ ಗರಂ!
ನೆಟ್‌ಫ್ಲಿಕ್ಸ್‌ನಲ್ಲಿ ಎನಿಮಲ್ ಚಿತ್ರವನ್ನು ಹಿಂದಿಯ ಜೊತೆಗೆ, ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರವು ಆಧುನಿಕ-ದಿನದ ಸಂಬಂಧಗಳ ಜಟಿಲತೆಗಳನ್ನು ಪರಿಶೋಧಿಸುತ್ತದೆ, ತಂದೆ ಮತ್ತು ಮಗನ ನಡುವಿನ ಡೈನಾಮಿಕ್ಸ್ ತೋರಿಸುತ್ತದೆ. ಚಿತ್ರವನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಮುರಾದ್ ಖೇತಾನಿ, ಪ್ರಣಯ್ ರೆಡ್ಡಿ ವಂಗಾ ನಿರ್ಮಿಸಿದ್ದಾರೆ.
ಐದು ವರ್ಷದಿಂದ ಒಂದೇ ಒಂದು ಸಿನ್ಮಾದಲ್ಲಿ ನಟಿಸದಿದ್ರೂ ಈ ಬಾಲಿವುಡ್ ನಟಿಯ ಆಸ್ತಿ ಮಾತ್ರ ಬರೋಬ್ಬರಿ 300 ಕೋಟಿ!
ರಣಬೀರ್ ಕಪೂರ್ ಚಿತ್ರದ ನೆಟ್‌ಫ್ಲಿಕ್ಸ್ ಬಿಡುಗಡೆಯ ಸಂತಸ ಹಂಚಿಕೊಂಡಿದ್ದು, 'ಥಿಯೇಟರ್‌ಗಳಲ್ಲಿ 'ಎನಿಮಲ್' ಪಡೆದ ಪ್ರತಿಕ್ರಿಯೆಯಿಂದ ನಾವು ಸಂಪೂರ್ಣವಾಗಿ ಸಂತೋಷಗೊಂಡಿದ್ದೇವೆ ಮತ್ತು ಈಗ ಪ್ರಪಂಚದಾದ್ಯಂತದ ಪ್ರೇಕ್ಷಕರು ತಮ್ಮ ಮನೆಯ ಸೌಕರ್ಯದಲ್ಲಿ ಅದನ್ನು ವೀಕ್ಷಿಸಲು ಅವಕಾಶವನ್ನು ಪಡೆಯುತ್ತಾರೆ ಎಂದು ನನಗೆ ಖುಷಿಯಾಗಿದೆ. ಜಾಗತಿಕವಾಗಿ ನಮ್ಮ ಕೆಲಸವನ್ನು ಪ್ರದರ್ಶಿಸುವ ಅವಕಾಶವು ನಿಜವಾಗಿಯೂ ವಿಶೇಷವಾಗಿದೆ!' ಎಂದಿದ್ದಾರೆ.