
ನಟ ನಾಗ ಚೈತನ್ಯ ಹಾಗೂ ನಟಿ ಸಾಯಿ ಪಲ್ಲವಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ತೆಲುಗು ಸಿನಿಮಾ 'ಲವ್ ಸ್ಟೋರಿ' ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣವೇ ದೀಪಾವಳಿ ದಿನ ತಂಡ ರಿಲೀಸ್ ಮಾಡಿರುವ ಪೋಸ್ಟರ್ ಲುಕ್.
ಸೌಂದರ್ಯ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ..?
ಹೌದು! ಮದುವೆ ಮಂಟಪದಲ್ಲಿ ಸಾಯಿ ಮಧು ಮಗಳಾಗಿ ಅಲಂಕರಿಸಿಕೊಂಡರೆ, ಚೈತನ್ಯ ಶರ್ಟ್-ಪ್ಯಾಂಟ್ ಧರಿಸಿ ಪಕ್ಕದಲ್ಲಿ ಕುಳಿತು ನೋಡುತ್ತಿದ್ದಾರೆ. 'ಎಲ್ಲರಿಗೂ ಸೇಫ್ ಹಾಗೂ ಹ್ಯಾಪಿ ದೀಪಾವಳಿ' ಎಂದು ಚೈತನ್ಯ ಈ ಫೋಟೋ ಶೇರ್ ಮಾಡಿಕೊಂಡು, ಹಬ್ಬಕ್ಕೆ ಶುಭಕೊರಿದ್ದಾರೆ.
ಲಾಕ್‌ಡೌನ್ ನಂತರ ಎರಡನೇ ಶೆಡ್ಯೂಲ್ ಚಿತ್ರೀಕರಣ ಪ್ರಾರಂಭಿಸಿದ ತಂಡ, ಮುಂದಿನ ವರ್ಷ ರಿಲೀಸ್ ಮಾಡಲು ಪ್ಲಾನಿಂಗ್ ನಡೆಯುತ್ತಿದೆ. ಸದ್ಯಕ್ಕೆ ಹೈದರಾಬಾದ್‌ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರಕ್ಕೆ ಮತ್ತೊಂದು ವಿಶೇಷತೆ ಇದೆ. ಅದುವೇ ಎಆರ್ ರೆಹಮಾನ್ ಸಂಗೀತ.
ಪ್ರೇಮಂ ನಟಿಗೆ ಸೀರೆ ಮೇಲೆ ಸಿಕ್ಕಾಪಟ್ಟೆ ಲವ್ ಅನ್ನೋದಕ್ಕೆ ಈ ಪೋಟೋಗಳೇ ಸಾಕ್ಷಿ..!
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಾಯಿ ಪಲ್ಲವಿ ಫೋಟೋ ಮಾತ್ರ ವೈರಲ್ ಮಾಡುತ್ತಿದ್ದಾರೆ. ನಾಗಚೈತ್ಯಗೆ ಈಗಾಗಲೇ ಮದುವೆಯಾಗಿದ್ದು, ಪಲ್ಲವಿಗೆ ಯಾರು ಲೈಫ್ ಪಾರ್ಟನರ್ ಆಗುತ್ತಾರೆ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಬ್ಯುಟಿ ವಿತ್ ಬ್ರೈನ್ ಸಾಯಿ ಪಲ್ಲವಿ ಹುಡುಗ ತುಂಬಾನೇ ಲಕ್ಕಿ ಎಂದು ಕೆಲವರು ಉತ್ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.