
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ಮೂಕುತಿ ಅಮ್ಮನ್ ಸಿನಿಮಾ ಈಗ ರಿಲೀಸ್ ಆಗುತ್ತದೆ, ಆಗ ರಿಲೀಸ್ ಆಗುತ್ತದೆ ಎಂದು ಹೇಳಿ ಹೇಳಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು. ಇಷ್ಟೆಲ್ಲ ಸರ್ಕಸ್ ಬೇಡವೇ ಬೇಡ ಎಂದು ನೆಟ್ಟಿಗರಿಗಾಗಿ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಲಾಗಿದೆ.
ಬಾಯ್‌ಫ್ರೆಂಡ್ ಬರ್ತ್‌ಡೇ ಸದಾ ನೆನಪಿನಲ್ಲಿ ಉಳಿಯೋಕೆ ನಯನತಾರಾ ಏನ್ ಮಾಡಿದ್ರು ನೋಡಿ
ಹೌದು! ದೀಪಾವಳಿ ಹಬ್ಬದ ಪ್ರಯುಕ್ತ ನಯನತಾರಾ ಅಭಿನಯದ ಮುಕುತಿ ಅಮ್ಮನ್ ಸಿನಿಮಾವನ್ನು ನವೆಂಬರ್ 14ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಮಾಡಲಾಗಿದೆ. ಮೊದಲ ದಿನವೇ ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವ ಈ ಚಿತ್ರ ಈಗ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.
ಚಿತ್ರದ ದೃಶ್ಯಗಳು ಲೀಕ್
ರಿಲೀಸ್ ಆದ ದಿನವೇ ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ವಿಚಾರ ಕೇಳಿ ಇಡೀ ತಂಡ ಶಾಕ್ ಆಗಿದೆ. ಭಕ್ತಿ ಪ್ರಧಾನ ಹಾಸ್ಯ ಸಿನಿಮಾಗೆ ಆರ್‌ಜೆ ಬಾಲಾಜಿ ಆ್ಯಕ್ಷನ್ ಕಟ್ ಹೇಳಿದ್ದು, 20 ಕೋಟಿ ರೂ. ನೀಡಿ ಡಿಜಿಟಲ್ ಹಕ್ಕು ಪಡೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಒಂದು ಕಥೆ ಹಾಕಿದ ಶ್ರಮವನ್ನು ಕೆಲವು ಕಿಡಿಗೇಡಿಳು ಹಾಳು ಮಾಡಿದ್ದಾರೆ. ಆಗುತ್ತಿರುವ ನಷ್ಟಕ್ಕೆ ನಮ್ಮನ್ನು ಯಾರು ಕಾಪಾಡಬೇಕು ಎಂದು ತಂಡ ಚಿಂತೆಯಲ್ಲಿದೆ.
ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ?
ಕೆಲವು ದಿನಗಳ ಹಿಂದೆ ರಿಲೀಸ್ ಆದ ಸೂರರೈ ಪೋಟ್ರು ಸಿನಿಮಾ ಕೂಡ ಮೊದಲ ದಿನವೇ ಲೀಕ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.