ದಿಢೀರನೇ ಸಂಭಾವನೆ ಹೆಚ್ಚಿಸಿಕೊಂಡ 'ಮಹರ್ಷಿ' ನಟಿ!ಕೋಟಿನೂ ಕಮ್ಮಿ ಆಯ್ತಾ?

By Suvarna News  |  First Published Jan 10, 2020, 11:27 AM IST

'ಮಹರ್ಷಿ' ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಮಿಂಚಿದ ನಟಿ ಪೂಜಾ ಹೆಗ್ಡೆ ದಿಢೀರನೇ ಸಂಭಾವನೆ ಹೆಚ್ಚಿಸಿಕೊಂಡು ಟಾಲಿವುಡ್ ನಿರ್ದೇಶಕರಿಗೆ ಬಿಗ್ ಶಾಕ್ ನೀಡಿದ್ದಾರೆ...
 


ಟಾಲಿವುಡ್‌ ಹಾಗೂ ಬಾಲಿವುಡ್‌ ಲೋಕದಲ್ಲಿ ನಟಿಯಾಗಿ ಮಿಂಚುತ್ತಿರುವ ಮಾಡೆಲ್ ಪೂಜಾ ಹೆಗ್ಡೆ 2010ರಲ್ಲಿ ಮಿಸ್‌ ಯೂನಿವರ್ಸ್‌ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ.  

'ಮುಗಮೂದಿ' ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಪೂಜಾ ವೃತ್ತಿ ಜೀವನದಲ್ಲಿ ಪ್ರತಿಯೊಂದು ಸಿನಿಮಾಗಳು ಬ್ರೇಕ್ ನೀಡಿದ್ದೆ. ಬಾಲಿವುಡ್‌ 'ಮಹೆಂಜೊ ದಾರೋ' ಚಿತ್ರದಲ್ಲಿ ಹೃತಿಕ್ ರೋಷನ್‌ಗೆ ಜೋಡಿಯಾಗಿ, 'ಹೌಸ್‌ಫುಲ್-4'ರಲ್ಲಿ ಅಕ್ಷಯ್ ಕುಮಾರ್‌ ಜೊತೆಯೂ ಮಿಂಚಿದ್ದಾರೆ.

Tap to resize

Latest Videos

undefined

ನೀರಲ್ಲಿ ಮೀನಾಗಿ ಬಿಕಿನಿ ತೊಟ್ಟ ನಟಿ!

ಇನ್ನು ಸಂಭಾವನೆ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲ ಮೂಲಗಳ ಪ್ರಕಾರ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ಪೂಜಾ ಹೆಗ್ಡೆ  1.5 ರಿಂದ 2 ಕೋಟಿ ರೂ. ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಚಿತ್ರದ ನಾಯಕ ಅಲ್ಲು ಅರ್ಜುನ್‌ ಆದ ಕಾರಣ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೆ ಕೈ ತುಂಬಾ ಆಫರ್‌ಗಳನ್ನು ತುಂಬಿಕೊಂಡಿರುವ ಪೂಜಾ ತಮ್ಮ ಮುಂದಿನ ಚಿತ್ರಕ್ಕೆ 2.5ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂದು ಖಾಸಗಿ ವೆಬ್‌ಸೈಟ್ ಒಂದು  ವರದಿ ಮಾಡಿದೆ.

click me!