
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಪ್ರೀತಿ ವಿಚಾರಕ್ಕೆ ಮತ್ತೇ ಸುದ್ದಿಯಾಗಿದ್ದಾರೆ. ಸಲ್ಮಾನ್ ಖಾನ್ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಿಗೆಯೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಮತ್ತೆ ಬಾಲಿವುಡ್ ಬ್ಯಾಡ್ ಬಾಯ್ ಪ್ರೀತಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದೂ ಕರ್ನಾಟಕದ ಕರಾವಳಿ ಮೂಲದ ನಟಿಯ ಜೊತೆ. ಹೌದು ಸಲ್ಮಾನ್ ಖಾನ್ ಮತ್ತು ಕನ್ನಡ ಮೂಲದ ಖ್ಯಾತ ಬಾಲಿವುಡ್ ನಟಿ ಪೂಜಾ ಹೆಗ್ಡೆ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಸು ಗುಸು ಕೇಳಿಬರುತ್ತಿದೆ. ಅಂದಹಾಗೆ ಸಲ್ಮಾನ್ ಖಾನ್ ಮತ್ತು ಕರಾವಳಿ ಸುಂದರಿ ಐಶ್ವರ್ಯಾ ರೈ ಪ್ರೀತಿ-ಪ್ರೇಮದ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿರುವುದೇ, ಹಾಗೂ ತುಂಬಾ ಹಳೆಯ ಸುದ್ದಿ. ಇದೀಗ ಸಲ್ಮಾನ್ ಕರಾವಳಿ ಸುಂದರಿ ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಅಂದಹಾಗೆ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಇಬ್ಬರೂ ಕಿಸಿಕಾ ಬಾಯ್ ಕಿಸಿಕಾ ಜಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾ ಸೆಟ್ ನಲ್ಲಿ ಪೂಜಾ ಹೆಗ್ಡೆ ಮೇಲೆ ಸಲ್ಮಾನ್ ಖಾನ್ ಗೆ ಲವ್ ಆಗಿದೆ, ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅಷ್ಟೆಯಲ್ಲದೇ ಸಲ್ಮಾನ್ ಜೊತೆ ಪೂಜಾ ಹೆಗ್ಡೆ ಮತ್ತಷ್ಟು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಅಂದಹಾಗೆ ಪೂಜೆ ಹೆಗ್ಡೆ ಸಲ್ಮಾನ್ ಖಾನ್ ಗಿಂತ 24 ವರ್ಷ ಚಿಕ್ಕವರು.
ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣಕ್ಕೆ 25 ಕೋಟಿ ರೂ. ಖರ್ಚಾಗಿದೆ; ಸಲ್ಮಾನ್ ತಂದೆ ಸಲೀಂ ಖಾನ್
ಅಂದಹಾಗೆ ಸಲ್ಮಾನ್ ಖಾನ್ ಡೇಟಿಂಗ್ ರೂಮರ್ಸ್ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಸಲ್ಮಾನ್ ಖಾನ್ ಹೆಸರು ಅನೇಕ ನಟಿಯರ ಜೊತೆ ಕೇಳಿಬಂದಿತ್ತು. ಐಶ್ವರ್ಯಾ ರೈ, ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಅನೇಕರ ಜೊತೆ ಸಲ್ಮಾನ್ ಹೆಸರು ಥಳಕು ಹಾಕಿಕೊಂಡಿತ್ತು. ಅಂದಹಾಗೆ ಸಲ್ಮಾನ್ ಖಾನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟೈಗರ್ 3 ಶೂಟಿಂಗ್ ಮುಗಿಸಿರುವ ಸಲ್ಮಾನ್ ಖಾನ್ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಪಾಕ್‌ನಲ್ಲಿ ಬ್ಯಾನ್ ಆದ ಬಾಲಿವುಡ್ ಖಾನ್‌ಗಳ ಸಿನಿಮಾ, ಏನಿರಬಹುದು ರೀಸನ್ಸ್?
ಇನ್ನೂ ಪೂಜಾ ಹೆಗ್ಡೆ ಕೂಡ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಜೊತೆಗೆ ಪೂಜಾ ಸೌತ್ ನಲ್ಲೂ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುವ ಜೊತೆಗೆ ಪೂಜಾ ಹೆಗ್ಡೆ ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ನಟಿಸುತ್ತಿದ್ದಾರೆ. ಸರ್ಕಸ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇತ್ತೀಚಿಗಷ್ಟೆ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.