ನಾವೇನು ಮಾಡ್ತಿದ್ದೀವಿ ಅಂತ ಯೋಚಿಸಬೇಕಿದೆ; 'ಕಾಂತಾರ' ಸಕ್ಸಸ್ ಬಗ್ಗೆ ನಿರ್ದೇಶಕ ರಾಜಮೌಳಿ ಅಚ್ಚರಿ ಹೇಳಿಕೆ

By Shruthi Krishna  |  First Published Dec 10, 2022, 2:43 PM IST

ನಾವೇನು ಮಾಡ್ತಿದ್ದೀವಿ ಅಂತ ಯೋಚಿಸಬೇಕಿದೆ ಎಂದು 'ಕಾಂತಾರ' ಸಕ್ಸಸ್ ಬಗ್ಗೆ ನಿರ್ದೇಶಕ ರಾಜಮೌಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ. 
 


ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನಿಮಾ ಸಿನಿಮಾ ಸಕ್ಸಸ್ ಅನೇಕರಿಗೆ ಅಚ್ಚರಿ ಮೂಡಿಸಿದೆ. ಕನ್ನಡದ ಕಡಿಮೆ ಬಜೆಟ್‌ನ ಸಿನಿಮಾ ಈ ಪರಿ ಸದ್ದು ಮಾಡಿದ್ದು ಅನೇಕ ನಿರ್ದೇಶಕ, ನಿರ್ಮಾಪಕರ ಹುಬ್ಬೇರಿಸಿದೆ. ಕೋಟಿ ಕೋಟಿ ಸುರಿದು ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವ ನಿರ್ದೇಶಕ, ನಿರ್ಮಾಪಕರು ಕಾಂತಾರ ಸಕ್ಸಸ್ ಮರುಚಿಂತನೆ ಮಾಡುವಂತೆ ಮಾಡಿದೆ. ಈ ಬಗ್ಗೆ ಖ್ಯಾತ ನಿರ್ದೇಶಕ ರಾಜಮೌಳಿ ಕೂಡ ಮಾತನಾಡಿದ್ದಾರೆ. ರಾಜಮೌಳಿ ಹೆಚ್ಚಾಗಿ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿ ಸಕ್ಸಸ್ ಕಂಡವರು. ಇದೀಗ ಕಡಿಮೆ ಬಜೆಟ್ ನ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿ ಬೀಗುತ್ತಿರುವ ರೀತಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಕ್ಸಸ್ ಸಿನಿಮಾ ತಂತ್ರದ ಬಗ್ಗೆ ಮರುಚಿಂತಿಸುವಂತೆ ಮಾಡಿದೆ ಎಂದು ರಾಜಮೌಳಿ ಹೇಳಿದ್ದಾರೆ. 

ಕಾಂತಾರ ಸಿನಿಮಾದ ಸಕ್ಸಸ್ ಬಗ್ಗೆ ಮೊದಲ ಬಾರಿಗೆ ಮಾತನಾಡಿರುವ ಖ್ಯಾತ ನಿರ್ದೇಶಕ ರಾಜಮೌಳಿ 'ಕಾಂತಾರ ಸಿನಿಮಾ ನಿರ್ದೇಶಕರು ಸಿನಿಮಾ ತಂತ್ರದ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿದೆ' ಎಂದು ಹೇಳಿದ್ದಾರೆ.  ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿದ ನಿರ್ದೇಶಕ ರಾಜಮೌಳಿ, 'ಹೆಚ್ಚು ಹಣ ಗಳಿಸಲು ಬಿಗ್ ಬಜೆಟ್ ಸಿನಿಮಾ ಮಾಡಬೇಕಿಲ್ಲ ಇದಕ್ಕೆ ಕಾಂತಾರ ಸಿನಿಮಾ ದೊಡ್ಡ ಎಕ್ಸಾಂಪಲ್' ಎಂದು ಹೇಳಿದರು. ಕಾಂತಾರ ಸಿನಿಮಾ ಮಾಡಿದ ಕಲೆಕ್ಷನ್ ನೋಡಿದ್ರೆ ಹೆಚ್ಚು ಗಳಿಕೆ ಮಾಡಲು  ದೊಡ್ಡ ಪ್ರಮಾಣದ ಸಿನಿಮಾದ ಅಗತ್ಯವಿಲ್ಲ. ಕಾಂತಾರದಂತಹ ಕಡಿಮೆ ಬಜೆಟ್‌ನ ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡಬಹುದು' ಎಂದು ಹೇಳಿದರು.  

'ಕಾಂತಾರ-2' ಮಾಡಲು ಪಂಜುರ್ಲಿ ಅನುಮತಿ ಕೋರಿದ ರಿಷಬ್ ಶೆಟ್ಟಿ; ದೈವ ಹೇಳಿದ್ದೇನು?

Tap to resize

Latest Videos

ಕಾಂತಾರದಂತಹ ಸಣ್ಣ ಪ್ರಮಾಣದ ಸಿನಿಮಾ ಪ್ರೇಕ್ಷಕರಿಗೆ ಎಕ್ಸಾಯಿಟ್ ಆಗಿರಬೇಕು ಎಂದು ರಾಜಮೌಳಿ ಹೇಳಿದರು. 'ಪ್ರೇಕ್ಷಕರಿಗೆ ಇದು ಎಕ್ಸಾಯಿಟ್ ಆಗಿರುತ್ತದೆ. ಆದರೆ ನಿರ್ದೇಶಕರಾಗಿ ನಾವು ಏನು ಮಾಡುತ್ತೀವಿ ಅಂತ ಮರುಚಿಂತಿಸಬೇಕಾಗಿದೆ' ಎಂದು ಹೇಳಿದರು.  

ಕಾಂತಾರ ಮೋಡಿ; ಪರೀಕ್ಷೆಯಲ್ಲಿ 3ನೇ ತರಗತಿ ವಿದ್ಯಾರ್ಥಿ ಉತ್ತರಕ್ಕೆ ಶಿಕ್ಷಕರು ಶಾಕ್

ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಸ್ಯಾಂಡಲ್ ವುಡ್‌ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡುವಂತೆ ಒತ್ತಾಯ ಹೆಚ್ಚಾಯಿತು. ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲಾ ಭಾಷೆಯಿಂದನೂ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ ಪ್ರೇಕ್ಷಕರು ಸಹ ಕಾಂತಾರ ಚಿತ್ರಕ್ಕೆ ಫಿದಾ ಆಗಿದ್ದರು. ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಕಾಂತಾರ ನೋಡಿ ಹಾಡಿಹೊಗಳಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಕಾರ್ತಿ, ಧನುಷ್, ಪ್ರಭಾಸ್, ಅನುಷ್ಕಾ ಶೆಟ್ಟಿ, ನಾನಿ, ಶಿಲ್ಪಾ ಶೆಟ್ಟಿ, ಕಂಗನಾ, ಸುನಿಲ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಕಾಂತಾರ ಸಿನಿಮಾವನ್ನು ಹಾಡಿಹೊಗಳಿದರು. 

click me!