Rhea Chakraborty: ವೇಶ್ಯೆ ಎಂದವರಿಗೆ ನಟಿ ತಿರುಗೇಟು- ಮುಂದಿನ ಬೇಟೆ ಯಾರು ಎಂದ ಟ್ರೋಲಿಗರು!

By Suvarna News  |  First Published Apr 14, 2023, 3:00 PM IST

ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಬಳಿಕ ಬಹಳ ಸದ್ದು ಮಾಡಿದ್ದ ನಟಿ ರಿಯಾ ಚಕ್ರವರ್ತಿ ಕಮ್​ಬ್ಯಾಕ್​ ಮಾಡಿದ್ದಾರೆ. ಇವರ ವಿರುದ್ಧ ಸುಶಾಂತ್​ ಫ್ಯಾನ್ಸ್​ ಕಿಡಿ ಕಾರುತ್ತಿದ್ದಾರೆ. 
 


ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದವು. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ರಹಸ್ಯ ಅವರ ಜೊತೆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಆದರೆ  ಸುಶಾಂತ್ ಸಾವಿನ  ನಂತರ ಕೇಳಿಬಂದ ಹೆಸರು  ನಟಿ ರಿಯಾ ಚಕ್ರವರ್ತಿ(Rhea Chakraborty) ಅವರದ್ದು. ಸುಶಾಂತ್​ ಸಿಂಗ್​ ಅವರ ಪ್ರೇಯಸಿ ಎಂದು ಅನ್ನಿಸಿಕೊಂಡಿದ್ದ ರಿಯಾ ಚಕ್ರವರ್ತಿ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಸುಶಾಂತ್​ ಸಾವಿನ ಹಿಂದೆ ಇವರದ್ದೇ ಕೈವಾಡ ಇದೆ ಎನ್ನುವ ಸುದ್ದಿ ಬಹಳ ಸದ್ದು ಮಾಡಿತ್ತು. ಸಮಯ ಕಳೆದಂತೆ ಸುಶಾಂತ್​ ಸಿಂಗ್​ ಸಾವಿನ ರಹಸ್ಯ ಹಾಗೆಯೇ  ಮರೆಯಾಗುತ್ತಿದೆ. ಇದರ ನಡುವೆಯೇ ರಿಯಾ ಚಕ್ರವರ್ತಿ ಮೂರು ವರ್ಷಗಳ ಬಳಿಕ ಎಲ್ಲಾ ನೋವಿನಿಂದ, ಆರೋಪಗಳಿಂದ ಹೊರಕ್ಕೆ ಬಂದು ಪರದೆಯ ಮೇಲೆ ಮಿಂಚಲು ರೆಡಿಯಾಗುತ್ತಿದ್ದಾರೆ.  ಮೂರು ವರ್ಷಗಳ ನಂತರ ಕ್ಯಾಮೆರಾವನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ.

 ರೋಡೀಸ್ ಚಿತ್ರದ ಮೂಲಕ ಅವರು ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಸೆಟ್‌ಗಳಿಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲ್ಪಟ್ಟ ನಂತರ ಕ್ಯಾಮೆರಾದಿಂದ ದೂರವಿದ್ದ ರಿಯಾ, ಇದೇ ಆರೋಪದ ಮೇಲೆ  ಸ್ವಲ್ಪ ಸಮಯ ಜೈಲಿನಲ್ಲಿಯೂ ಇದ್ದರು. ಆದರೆ ಇದೀಗ ಕ್ಯಾಮೆರಾ ಎದುರಿಸಲು ಸಿದ್ಧರಾಗಿ ಬಂದಿದ್ದಾರೆ.  ನಟ  ಗೌತಮ್ ಗುಲಾಟಿ ಮತ್ತು ಪ್ರಿನ್ಸ್ ನರುಲಾ ಜೊತೆಗೆ MTV ರೋಡೀಸ್ ಸೀಸನ್ 19 ರ ಗ್ಯಾಂಗ್ ಲೀಡರ್‌ಗಳಲ್ಲಿ (Gang Leader) ಒಬ್ಬರಾಗಿ ನಟಿಸುತ್ತಿದ್ದಾರೆ.  ಸೋನು ಸೂದ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 

Tap to resize

Latest Videos

'ಈಗ ಭಯ ಪಡುವ ಸರದಿ ಬೇರೆಯವರದ್ದು' ಎಂದು ಭರ್ಜರಿ ಎಂಟ್ರಿ ಕೊಟ್ಟ ರಿಯಾ; ಸುಶಾಂತ್ ಅಭಿಮಾನಿಗಳ ತರಾಟೆ

ಮೊನ್ನೆಯಷ್ಟೇ ಇವರು ರೌಡೀಸ್​ನಲ್ಲಿ ಪಾಲ್ಗೊಳ್ಳುವ ವಿಷಯ ಶೇರ್​  ಮಾಡುತ್ತಿದ್ದಂತೆಯೇ, ಸುಶಾಂತ್​ ಸಿಂಗ್​ ಅವರ ಸಹೋದರಿ ಪ್ರಿಯಾಂಕಾ ಸಿಂಗ್ ಪರೋಕ್ಷವಾಗಿ ಟ್ವೀಟ್ ಮೂಲಕ ಹಿಯಾಳಿಸಿದ್ದರು. ನಾನು ವಾಪಸ್​ ಸೆಟ್​ಗೆ ಮರಳು ಹೆದರುವುದಿಲ್ಲ ಎಂದು ವಿಡಿಯೋದಲ್ಲಿ ರಿಯಾ ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಿಯಾಂಕಾ, ‘ನೀವು ಯಾಕೆ ಹೆದರುತ್ತೀರಿ ಹೇಳಿ? ನೀವೊಬ್ಬ ವೇಶ್ಯೆಯಾಗಿದ್ದಿರಿ (Prostitute), ಈಗಲೂ ಇದ್ದೀರಾ. ಮುಂದೆಯೂ ಇರುತ್ತೀರಾ.. ಆದರೆ, ನಿಮ್ಮ ಗ್ರಾಹಕರು ಯಾರು ಎಂಬುದು ಮಾತ್ರ ಪ್ರಶ್ನೆಯಾಗಿದೆ. ಈ ಪ್ರಶ್ನೆ ಮಾಡುವ ಧೈರ್ಯವನ್ನು ನನ್ನ ಅಣ್ಣ ಮಾತ್ರ ಕೊಡಬಲ್ಲ. ಸುಶಾಂತ್ ಸಾವಿನ ತನಿಖೆಗೆ ಕಾರಣಗಳು ಸ್ಪಷ್ಟವಾಗಿವೆ‘ ಎಂದಿದ್ದರು. ಇದಕ್ಕೆ ಈಗ ಪರೋಕ್ಷವಾಗಿ ಟಾಂಗ್​ ನೀಡಿರುವ ರಿಯಾ,  ಮೇಕಪ್ ರೂಮ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ  'ಇದು ಬಹಳ ಸಮಯ ಕಾಯುವ ಆಟವಾಗಿದೆ. ಸೆಟ್‌ಗೆ ಮರಳಿದ್ದೇನೆ.  ನನಗೆ ವರ್ಣಿಸಲಾಗದ ಸಂತೋಷ ಉಂಟು ಮಾಡುತ್ತಿದೆ. ಹೃದಯವು ಕೃತಜ್ಞತೆಯಿಂದ ತುಂಬಿದೆ, ಹೋಗಲು ಅಪೇಕ್ಷಣೀಯವಾಗಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಸಮಯಗಳು ಕಠಿಣವಾಗಿವೆ, ಆದರೆ ನಿಮ್ಮ ಪ್ರೀತಿ ನಿಜವಾಗಿದೆ' ಎಂದಿದ್ದಾರೆ. 

ವೀಡಿಯೊದಲ್ಲಿ, ನಟಿ ವ್ಯಾನಿಟಿ ವ್ಯಾನ್‌ನಲ್ಲಿ ಮೇಕ್ಅಪ್ ಮಾಡುವುದನ್ನು ನೋಡಬಹುದು. ಆಗ ಅಲ್ಲಿರುವವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಯಾ,  ' ನಾನು ಮೂರು ವರ್ಷಗಳಿಂದ ಚಿತ್ರೀಕರಣ ಮಾಡಿಲ್ಲ ಮತ್ತು ನಾನು ಮತ್ತೆ ಸೆಟ್‌ಗೆ ಮರಳಿದ್ದೇನೆ. ವ್ಯಾನಿಟಿ ವ್ಯಾನ್ ಹೊಸದನ್ನು ಅನುಭವಿಸುತ್ತಿದೆ, ಕೂದಲು ಸಿಂಗರಿಸಿಕೊಳ್ಳದೇ ಮತ್ತು ಮೇಕ್ಅಪ್ ಮಾಡದೇ ಅನೇಕ ಸಮಯವಾಯಿತು.  ವಿಚಿತ್ರವೆಂದರೆ ನಾನು ಮೂರು ವರ್ಷಗಳ ಹಿಂದೆ ಚಿತ್ರೀಕರಿಸಿದಾಗ, ಅದು ಇದೇ ಸೆಟ್‌ನಲ್ಲಿ, ಚೆಹ್ರೆಗಾಗಿ ಈ ವ್ಯಾನಿಟಿ ವ್ಯಾನ್‌ನಲ್ಲಿತ್ತು (Vanity Van). ಮೂರು ವರ್ಷಗಳ ನಂತರ ಮತ್ತೆ ಇಲ್ಲಿಗೆ ಬಂದಿದ್ದೇನೆ. ಬ್ರಹ್ಮಾಂಡವು ವಿಚಿತ್ರವಾದ ಮಾರ್ಗಗಳನ್ನು ಹೊಂದಿದೆ' ಎಂದಿದ್ದಾರೆ.

ಮತ್ತೆ ಪ್ರೀತಿ ಕಂಡುಕೊಂಡ ಸುಶಾಂತ್‌ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿ; ಯಾರಿದು ಬಂಟಿ ಸಜ್ದೇಹ್?
 
ಇನ್​ಸ್ಟಾಗ್ರಾಮ್​ನಲ್ಲಿ (Instagram) ಈ ವಿಡಿಯೋ ಶೇರ್​ ಆಗುತ್ತಿದ್ದಂತೆಯೇ ಸುಶಾಂತ್​ ಸಿಂಗ್​ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಮುಂದಿನ ಟಾರ್ಗೆಟ್​ ಯಾರು ಎಂದು ಕೆಲವರು ಪ್ರಶ್ನಿಸಿದರೆ, ವಾಪಸ್​ ಬಂದದ್ದು ಒಳ್ಳೆಯದೇ ಆದರೆ ಯಾರನ್ನೂ ಕೊಲ್ಲಬೇಡಿ ಎಂದಿದ್ದಾರೆ. ನಮ್ಮ ದೇವರನ್ನು ಕೊಲೆ  ಮಾಡಿದಂತೆ ಯಾರನ್ನೂ ಮಾಡಬೇಡಿ, ನಿಮಗೆ ಒಳ್ಳೆಯದಾಗಲಿ ಎಂದು ಮತ್ತೋರ್ವ ಬಳಕೆದಾರ ಬರೆದಿದ್ದರೆ, ನೀವು ವಾಪಸ್​ ಬಂದದ್ದು ಯಾಕೆ? ನಿಮ್ಮ ಉದ್ದೇಶ ಏನು ಎಂದು ಇನ್ನೋರ್ವ ಪ್ರಶ್ನಿಸಿದ್ದಾರೆ. ಕೆಲವರು ಮಾತ್ರ ನಿಮಗೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ. 

click me!