ರಿಯಾಗೆ ಬರುತ್ತಿದ್ದ ಕರೆಗಳ ಬಗ್ಗೆ ಸುಳಿವು ಕೊಟ್ಟ ಆದಿತ್ಯ ಉದ್ಧವ್ ಠಾಕ್ರೆ. ಸುಶಾಂತ್ ಸಾವಿಗೆ ರಾಜಕೀಯ ನಂಟಿರುವುದು ನಿಜವೇ?
ಬಾಲಿವುಡ್ ಸಿಂಪಲ್ ನಟ ಸುಶಾಂತ್ ಸಿಂಗ್ ರಜ್‌ಪುತ್ ಅಗಲಿ ಎರಡು ವರ್ಷವೇ ಕಳೆದಿದೆ ಆದರೆ ಸಾವಿಗೆ ಕಾರಣವೇನು? ಅದರ ಹಿಂದಿರುವ ವ್ಯಕ್ತಿ ಯಾರೆಂದು ಸುಳಿವು ಯಾರಿಗೂ ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ ದಿನಕ್ಕೊಂದು ಸುಳಿವು ಸಿಗುತ್ತಿದೆ ಆದರೆ ಅಸಲಿ ಸತ್ಯ ಏನೆಂದು ಯಾರಿಗೂ ಗೊತ್ತಾಗಿಲ್ಲ. ಈ ನಡುವೆ ಆದಿತ್ಯ ಉದ್ಧವ್ ಠಾಕ್ರೆ ಕೊಟ್ಟಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪೊಲೀಸರಿಂದ ಸಿಬಿಐಗೆ ಹಸ್ತಾಂತರ ಆಗಿರುವ ಕಥೆಗೆ ಮತ್ತೊಂದು ಟ್ವಿಸ್ಟ್ ಇದು....
ಹೌದು! ಮಹರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆಗೂ ಈ ಪ್ರಕರಣಕ್ಕೂ ಲಿಂಗ್ ಮಾಡಲಾಗಿತ್ತು. ಆದರೆ ಈ ಪ್ರಕರಣದ ಪ್ರಮುಖ ಅರೋಪಿ ಬಂದು ರಿಯಾ ಚಕ್ರವರ್ತಿ. ಮುಂಬೈ ಪೊಲೀಸರು ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು. ಮೊದಲು ರಿಯಾ ಚಕ್ರವರ್ತಿಯನ್ನು ಅರೆಸ್ಟ್ ಮಾಡಲಾಗಿತ್ತು ಆ ನಂತರ ಜಾಮೀನು ಪಡೆದು ಹೊರ ಬಂದಿದ್ದರು. ಈ ತನಿಖೆ ಸಮಯದಲ್ಲಿ ರಿಯಾಗೆ AU ಹೆಸರಿನಲ್ಲಿ ಸೇವ್ ಆಗಿರುವ ನಂಬರ್‌ನಿಂದ 44 ಸಲ ಫೋಲ್ ಕರೆ ಬಂದಿತ್ತು ಎನ್ನಲಾಗಿದೆ. ಎಯು ಅಂದ್ರೆ ಆದಿತ್ಯ ಠಾಕ್ರೆ ಎಂದು ಬಿಹಾರ್ ಪೊಲೀಸರು ಹೇಳುತ್ತಿದ್ದಾರೆ. ಇದರಿಂದ ಈ ಪ್ರಕರಣಕ್ಕೆ ರಾಜಕೀಯ ಲಿಂಕ್ ಸಿಗುತ್ತಿದೆ.
'ರಿಯಾ ಚಕ್ರವರ್ತಿ ಅವರ ಎಯುನಿಂದ 44 ಬಾರಿ ಕರೆ ಸ್ವೀಕರಿಸಿದ್ದಾರೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ. ಸಿಬಿಐ ತನಿಖೆ ಯಾವ ಹಂತದಲ್ಲಿದೆ?' ಎಂದು ಶಿವ ಸೇನೆ ಏಕನಾಥ್ ಶಿಂಧೆ ಎಂಪಿ ರಾಹುಲ್ ಶಿವಾಲೆ ಅವರ ಬಗ್ಗೆ ಮಾತನಾಡಿದ್ದರು. ಈ ಹೇಳಿಕೆಗೆ ಆದಿತ್ಯ ಪ್ರತಿಕ್ರಿಯೆ ನೀಡಿದ್ದಾರೆ. 'ಲವ್ ಯೂ ಮೋರ್ ಎಂದಷ್ಟೇ ನಾನು ಹೇಳಲು ಸಾಧ್ಯ. ತಮ್ಮ ಪಕ್ಷಕ್ಕೆ ಅವರು ನಿಷ್ಠಾಂವತರಾಗಿಲ್ಲ. ಅಂಥವರಿಂದ ಇನ್ನು ಏನನ್ನು ನಿರೀಕ್ಷಿಸಲು ಸಾಧ್ಯ? ಸಿಎಂ ಏಕನಾಥ್ ಶಿಂಧೆ ವಿರುದ್ಧ ಮಾಡಲಾಗುತ್ತಿರುವ ಆರೋಪವನ್ನು ಮುಚ್ಚಿ ಹಾಕಲು ಈ ರೀತಿ ಆರೋಪಗಳನ್ನು ಮಾಡಲಾಗುತ್ತಿದೆ' ಎಂದಿದ್ದರು.
ಸುಶಾಂತ್ ಮನೆ ಖಾಲಿ:
ನಟ ದಿ.ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಎರಡೂವರೆ ವರ್ಷ ಕಳೆದರೂ ಅವರು ಬಾಡಿಗೆಗೆ ಇದ್ದ ಮನೆಗೆ ಯಾರೂ ಬಾಡಿಗೆಗೆ ಬರುತ್ತಿಲ್ಲ ಎಂದು ಮನೆಯ ಮಾಲೀಕ ರಫೀಕ್ ಹೇಳಿದ್ದಾರೆ. ಮಾಸಿಕ 5 ಲಕ್ಷ ರು. ಬಾಡಿಗೆ ದುಬಾರಿ ಎನ್ನುವ ಕಾರಣಕ್ಕೆ ಮತ್ತು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ ಎನ್ನುವ ಕಾರಣಕ್ಕೆ ಜನರು ಮನೆಗೆ ಬಾಡಿಗೆ ಬರುತ್ತಿಲ್ಲ ಎಂದು ರಫೀಕ್ ಹೇಳಿದ್ದಾರೆ. ಮನೆಯನ್ನು ಬಾಲಿವುಡ್‌ಗೆ ಸಂಬಂಧಿಸಿದವರಿಗೆ ನೀಡುವುದಿಲ್ಲ ಎಂದು ಈ ಹಿಂದೆಯೇ ರಫೀಕ್ ಹೇಳಿದ್ದರು. ನಟ ಸುಶಾಂತ ತಮ್ಮ ಪ್ರೇಯಸಿ ರಿಯಾ ಚಕ್ರವರ್ತಿಯೊಂದಿಗೆ ಬಾಂದ್ರಾದಲ್ಲಿರುವ ಬಂಗಲೆಯಲ್ಲಿ ವಾಸವಿದ್ದರು.
ಮತ್ತೆ ಪ್ರೀತಿ ಕಂಡುಕೊಂಡ ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ; ಯಾರಿದು ಬಂಟಿ ಸಜ್ದೇಹ್?
ಸುಶಾಂತ್ ಸಹೋದರಿ ಮಾತು:
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್‌ನಲ್ಲಿ ಹೇಳಿಕೊಳ್ಳುವಂತ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ಸೋಲಿನ ಸುಳಿಯಲ್ಲಿರುವ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕೊಂಚ ಸಮಾಧಾನ ತಂದಿದೆ. ಕರಣ್ ಜೋಹರ್ ನಿರ್ಮಾಣದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನವೇ 75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಸುದ್ದಿ ವೈರಲ್ ಆದ ಬೆನ್ನಲ್ಲೇ ಸುಶಾಂತ್ ಸಿಂಗ್ ಸಹೋದರಿ ಬ್ರಹ್ಮಾಸ್ತ್ರ ಬಗ್ಗೆ ಪರೋಕ್ಷವಾಗಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ಫೋಟೋ ಶೇರ್ ಮಾಡಿ, ಬ್ರಹ್ಮಾಸ್ತ್ರ ಬಗ್ಗೆ ಬರೆದುಕೊಂಡಿರುವ ಮೀತು ಸಿಂಗ್, 'ಬಾಲಿವುಡ್ ನಾಶಮಾಡಲು ಸುಶಾಂತ್ ಸಿಂಗ್ ಅನ್ನೋ ಬ್ರಹ್ಮಾಸ್ತ್ರ ಸಾಕು. ಬಾಲಿವುಡ್ ಯಾವಾಗಲು ಸಾರ್ವಜನಿಕರನ್ನು ಡಿಕ್ಟೇಟ್ ಮಾಡಲು ಬಯಸುತ್ತದೆ. ಪರಸ್ಪರ ನಮ್ರತೆ ಮತ್ತು ಗೌರವ ತೋರಿಸುವುದನ್ನು ಎಂದಿಗೂ ನಿಲ್ಲಿಸಿಲ್ಲ. ನೈತಿಕ ಮೌಲ್ಯಗಳಿಂದ ಸಮೃದ್ಧವಾಗಿರುವ ನಮ್ಮ ದೇಶದ ಮುಖವಾಗಿರುವ ಇಂಥ ಜನರನ್ನು ನಾವು ಹೇಗೆ ದೂರಮಾಡುವುದು. ಸಾರ್ವಜನಿಕರನ್ನು ಗೆಲ್ಲುವ ಅವರ ವಿಷಾದಕರ ಪ್ರಯತ್ನ ವಿಫಲವಾಗಿದೆ. ಗುಣಮಟ್ಟ ಮತ್ತು ನೈತಿಕ ಮೈಲ್ಯಗಳು ಮೆಚ್ಚುಗೆ ಮತ್ತು ಗೌರವವನ್ನು ಗೆಲ್ಲುವ ಏಕೈಕ ವಿಷಯವಾಗಿದೆ' ಎಂದು ಹೇಳಿದ್ದಾರೆ.