RGV ನಿರ್ದೇಶನದ ಲೆಸ್ಬಿಯನ್ ಸಿನಿಮಾದ ಬಿಸಿಬಿಸಿ ಟ್ರೇಲರ್ ರಿಲೀಸ್

Published : Mar 27, 2022, 10:16 AM IST
RGV ನಿರ್ದೇಶನದ ಲೆಸ್ಬಿಯನ್ ಸಿನಿಮಾದ ಬಿಸಿಬಿಸಿ ಟ್ರೇಲರ್ ರಿಲೀಸ್

ಸಾರಾಂಶ

ವಿವಾದಾಸ್ಪದ ಸಿನಿಮಾಗಳನ್ನು ಮಾಡುವಲ್ಲಿ ಕುಖ್ಯಾತರಾದ ರಾಮ್‌ಗೋಪಾಲ್ ವರ್ಮಾ, ಇದೀಗ ತಮ್ಮ ಹೊಸ ಸಲಿಂಗಕಾಮಿ ಸಬ್ಜೆಕ್ಟ್‌ನ ಸಿನಿಮಾದೊಂದಿಗೆ ಬರುತ್ತಿದ್ದಾರೆ.  

ಹಿಂದಿ (Bollywood) ಮತ್ತು ತೆಲುಗಿನ (Tollywood) ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ramgopal Varma) ನಿರ್ದೇಶನದ 'ಖತ್ರಾ ಡೇಂಜರಸ್' (Khatra Dangerous) ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ (Trailer) ನೋಡಿದರೆ ಸುಡುವಷ್ಟು ಬಿಸಿಬಿಸಿ ಇದೆ. ಇಬ್ಬರು ಹುಡುಗಿಯರು ಪರಸ್ಪರ ಹಸಿಬಿಸಿಯಾಗಿ ಪ್ರೇಮಿಸಿಕೊಳ್ಳುವ ದೃಶ್ಯಗಳು ಸಾಕಷ್ಟು ಇವೆ. ಈ ಸಿನಿಮಾ ನಮ್ಮ ದೇಶದ ಮೊದಲ ಲೆಸ್ಬಿಯನ್ ಕ್ರೈಮ್ ಆಕ್ಷನ್ ಡ್ರಾಮಾ (Lesbian crime Action drama) ಸಿನಿಮಾ ಎಂದು ಹೇಳಲಾಗಿದೆ. 

ಲೆಸ್ಬಿಯನ್ ಪ್ರಣಯವನ್ನು ಪ್ರದರ್ಶಿಸುವ ಈ ಸಿನಿಮಾ ಪೂರ್ತಿ ಸಲಿಂಗಪ್ರೇಮದ ರೋಮ್ಯಾಂಟಿಕ್ (Romantic) ದೃಶ್ಯಗಳಿಂದ ತುಂಬಿದೆಯಂತೆ. ಅಡಲ್ಟ್ ಕಂಟೆಂಟ್‌ (Adult content) ನಿಂದಾಗಿ ಈ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ.

 RRR ಮೊದಲ ದಿನದ ಕಲೆಕ್ಷನ್‌ ರು.200- ರು.250 ಕೋಟಿ!

ಟ್ರೇಲರ್ ನೋಡಿದರೆ, ಚಿತ್ರದಲ್ಲಿ ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸುವ, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯಗಳಿರುವುದು ಕಾಣುತ್ತದೆ. ಇದೊಂದು ಅಡಲ್ಟ್ ಚಿತ್ರ. ಚುಂಬನದ (Kiss)  ದೃಶ್ಯಗಳಿಂದ ಹಿಡಿದು ಮಲಗುವ ಕೋಣೆಯ ಪ್ರಣಯದವರೆಗೆ ಎಲ್ಲಾ ರೀತಿಯ ದೃಶ್ಯಗಳು ಇವೆ. ಮೊದಲ ಟ್ರೇಲರ್‌ನಲ್ಲೂ ಇಂಥದೇ ದೃಶ್ಯಗಳಿದ್ದವು. ಆದರೆ ಎರಡನೇ ಟ್ರೇಲರ್‌ನಲ್ಲಿ ಸಾಕಷ್ಟು ಕ್ರೈಮ್, ಹಿಂಸೆಯ ದೃಶ್ಯಗಳೂ ಇವೆ. ಈ ಚಿತ್ರದಲ್ಲಿ ಬೋಲ್ಡ್‌ನೆಸ್‌ನ ಎಲ್ಲ ಮಿತಿಗಳನ್ನು ದಾಟಲಾಗಿದೆ. ಚಿತ್ರದ ಪೋಸ್ಟರ್‌ಗಳು ಕೂಡ ಸಾಕಷ್ಟು ಬೋಲ್ಡ್ ಆಗಿವೆ.

ಈ ಚಲನಚಿತ್ರದಲ್ಲಿ ದಕ್ಷಿಣ ಭಾರತದ ನಾಯಕಿಯರಾದ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರವು ರಾಮ್ ಗೋಪಾಲ್ ವರ್ಮಾ ಅವರ ಅತ್ಯಂತ ವಿವಾದಾತ್ಮಕ ಚಿತ್ರಗಳಲ್ಲಿ ಒಂದಾಗಬಹುದು ಎಂದು ಊಹಿಸಲಾಗಿದೆ. ಏಪ್ರಿಲ್ 8ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ಅಂದಾಜಿಸಲಾಗಿದೆ. 

Shraddha Kapoor ಮತ್ತೆ ಸಿಂಗಲ್‌? ಬಾಯ್ ಫ್ರೆಂಡ್ Rohan Shrestha ಜೊತೆ ನಟಿ ಬ್ರೇಕಪ್‌?

ಇದನ್ನು ಭಾರತದ ಮೊದಲ ಲೆಸ್ಬಿಯನ್ ಕ್ರೈಮ್ ಆಕ್ಷನ್ ಡ್ರಾಮಾ ಸಿನೆಮಾ ಎಂದು ಆರ್‌ಜಿವಿ ಕರೆದುಕೊಂಡಿದ್ದಾರೆ. ಇದು ಯಾವ ಕೆಟಗರಿಯೋ ಗೊತ್ತಿಲ್ಲ. ಆದ್ರೆ ಸಲಿಂಗಕಾಮದ ಫಿಲಂಗಳು ಭಾರತಕ್ಕೆ ಹೊಸದಲ್ಲ. ಈ ಹಿಂದೆಯೂ ಹಿಂದಿಯಲ್ಲಿ ಸಾಕಷ್ಟು ಬಂದಿವೆ. ಬಧಾಯಿ ದೋ ಎಂಬ ಫಿಲಂ ಇತ್ತೀಚೆಗೆ ತಾನೇ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇದರಲ್ಲಿ ಭೂಮಿ ಪೆಡ್ನೇಕರ್ ಲೆಸ್ಬಿಯನ್ ಆಗಿ, ರಾಜ್‌ಕುಮಾರ್ ರಾವ್ ಗೇ ಆಗಿ ನಟಿಸಿದ್ದಾರೆ. ಇದನ್ನೂ ಮುನ್ನ ಶುಭಮಂಗಲ್ ಎಂಬ ಫಿಲಂ ಬಂದಿದ್ದು, ಅದರಲ್ಲಿ ಇಬ್ಬರು ಪುರುಷರ ಪ್ರೇಮವನ್ನು ಸಾಕಷ್ಟು ಎಚ್ಚರದಿಂದ ತೋರಿಸಲಾಗಿದೆ. ಕಪೂರ್ ಆಂಡ್ ಸನ್ಸ್ ಚಿತ್ರದಲ್ಲಿ ಸಲಿಂಗಪ್ರೇಮಿ ಪುರುಷರು ಮುಖ್ಯಪಾತ್ರಗಳಲ್ಲಿ ಇದ್ದರು. ೧೯೯೮ರಷ್ಟು ಹಿಂದೆಯೇ ದೀಪಾ ಮೆಹ್ತಾ ಅವರು ನಿರ್ಮಿಸಿ ನಿರ್ದೇಶಿಸಿದ ಫೈರ್ ಫಿಲಂನಲ್ಲಿ ಇಬ್ಬರು ಮಹಿಳೆಯರ ಸಲಿಂಗಪ್ರೇಮವನ್ನು ತೋರಿಸಲಾಗಿತ್ತು. ಅದರಲ್ಲಿ ಇಬ್ಬರು ಪ್ರಬುದ್ಧ ನಟಿಯರಾದ ಶಬಾನಾ ಅಜ್ಮಿ ಮತ್ತು ನಂದಿತಾ ದಾಸ್, ಸಾಕಷ್ಟು ಸೂಕ್ಷ್ಮತೆಯಿಂದ ನಟಿಸಿದ್ದರು. ತಮ್ಮ ಪತಿಯಂದಿರ ಬ್ರಹ್ಮಚರ್ಯದಿಂದ ಬೇಸತ್ತ ಇಬ್ಬರು ಪತ್ನಿಯರು ನಿಕಟವಾಗುವ ಸನ್ನಿವೇಶಗಳು ಇದರಲ್ಲಿದ್ದವು. ಆಗ ಅದು ಸಾಕಷ್ಟು ವಿವಾದವನ್ನೂ ಹುಟ್ಟುಹಾಕಿತ್ತು. 

ಲೆಸ್ಬಿಯನ್‌ಗಳ ಕತೆ ಎಂಬ ಕಾರಣವೊಂದೇ ಆರ್‌ಜಿವಿ ಫಿಲಂ ಅನ್ನು ಗೆಲ್ಲಿಸಲಾರದು. ಕತೆ, ಮೇಕಿಂಗ್ ಎಲ್ಲ ಚೆನ್ನಾಗಿದ್ದರೆ ಗೆಲ್ಲಬಹುದು. ಆರ್‌ಜಿವಿ ಟ್ರೇಲರ್ ರಿಲೀಸ್ ಮಾಡಿದ ನಂತರ ಕೆಲವು ನೆಟಿಜನ್‌ಗಳು ಅವರನ್ನು ಸಾಕಷ್ಟು ಕಠಿಣವಾಗಿ ಟ್ರೋಲ್ ಮಾಡಿದ್ದಾರೆ. ''ಆರ್‌ಜಿವಿ, ನೀವು ನಮ್ಮ ಪಾಲಿನ ದೇವರು. ಮೊದಲೆಲ್ಲಾ ನಾವು ಪೋರ್ನ್ ಫಿಲಂಗಳನ್ನು ಬಚ್ಚಿಟ್ಟುಕೊಂಡು ನೋಡಬೇಕಾಗಿತ್ತು. ಈಗ ನಿಮ್ಮ ಕೃಪೆಯಿಂದ ಅದನ್ನು ನೇರವಾಗಿ ನೋಡುವಂತಾಗಿದೆ'' ಎಂದು ಒಬ್ಬರು ಕಾಲೆಳೆದಿದ್ದಾರೆ. ಇದು ಫಿಲಂ ಹಸಿಬಿಸಿತನಕ್ಕೆ ಸಿಕ್ಕ ಸ್ವಾಗತ. ಬಿಸಿಬಿಸಿ ದೃಶ್ಯಗಳಷ್ಟೃ ಸಿನಿಮಾವನ್ನು ಗೆಲ್ಲಿಸಲಾರವು. ಯಾಕೆಂದರೆ ಅದು ಈಗ ಎಲ್ಲರ ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಲಭ್ಯ. ಆದರೆ ಒಂದು ಮಟ್ಟಿನ ಮಾರುಕಟ್ಟೆಯಂತೂ ಆರ್‌ಜಿವಿಗೆ ಸಿಗಬಹುದು.    

ಬ್ಯೂಟಿ ಮತ್ತು ಸ್ಟೈಲ್‌ನಲ್ಲಿ ಅಕ್ಕ Janhvi Kapoor ಅನ್ನು ಮೀರಿಸುವ Khushi Kapoor

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!