ಅಮಿತಾಭ್ ಬಚ್ಚನ್ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಓಡಿ ಬಂದು ಜಯಾ ಬಚ್ಚನ್ ತಬ್ಬಿಕೊಂಡ ರೇಖಾ: ವೀಡಿಯೋ

By Suvarna News  |  First Published Aug 28, 2024, 11:31 AM IST


ಬಾಲಿವುಡ್‌ನ ಹಿರಿಯ ನಟಿಯರಾದ ಜಯಾ ಬಚ್ಚನ್ ಹಾಗೂ ರೇಖಾ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆದರೆ ಅವರಿಬ್ಬರೂ ಜೊತೆಯಾಗಿರುವ ಅತೀ ಅಪರೂಪದ ಹಳೆ ವೀಡಿಯೋವೊಂದು ಈಗ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಬಾಲಿವುಡ್‌ನ ಹಿರಿಯ ನಟಿಯರಾದ ಜಯಾ ಬಚ್ಚನ್ ಹಾಗೂ ರೇಖಾ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆದರೆ ಅವರಿಬ್ಬರೂ ಜೊತೆಯಾಗಿರುವ ಅತೀ ಅಪರೂಪದ ಹಳೆ ವೀಡಿಯೋವೊಂದು ಈಗ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2015ರ ಸ್ಟಾರ್ ಸ್ಕ್ರೀನ್ ಅವಾರ್ಡ್ ಪ್ರಶಸ್ತಿ ಸಮಾರಂಭದ ವೀಡಿಯೋ ಇದಾಗಿದ್ದು, ಇದರಲ್ಲಿ ಇಬ್ಬರು ನಟಿಯರು ಪರಸ್ಪರ ತಬ್ಬಿಕೊಳ್ಳುತ್ತಾರೆ. ಈ ಸಮಾರಂಭದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಪಿಕು ಸಿನಿಮಾಗೆ ಉತ್ತಮ ನಟ ಪ್ರಶಸ್ತಿ ನೀಡಲಾಗಿತ್ತು. ಈ ಸಮಾರಂಭದಲ್ಲಿ ಎಲ್ಲರನ್ನು ಅಚ್ಚರಿಗೀಡು ಮಾಡಿದ ಘಟನೆ ಎಂದರೆ ನಟ ಅಮಿತಾಭ್ ಬಚ್ಚನ್ ಪ್ರಶಸ್ತಿ ತೆಗೆದುಕೊಳ್ಳುತ್ತಿದ್ದಂತೆ ನಟಿ ರೇಖಾ ಅವರು ಖುಷಿ ಪಟ್ಟ ರೀತಿ...

ಅಮಿತಾಭ್ ಬಚ್ಚನ್ ಅವರ ಹೆಸರನ್ನು ಉತ್ತಮ ನಟ ಪ್ರಶಸ್ತಿಗೆ ಘೋಷಣೆ ಮಾಡ್ತಿದ್ದಂತೆ  ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರು ತಾವು ಕುಳಿತಿದ್ದ ಆಸನದಿಂದ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ.  ಪ್ರಶಸ್ತಿ ಸ್ವೀಕರಿಸಲು ಅಮಿತಾಭ್ ವೇದಿಕೆಯತ್ತ ಹೋದರೆ ಇತ್ತ ರೇಖಾ ತಮ್ಮ ಸೀಟಿನಿಂದ ಎದ್ದು ಬಂದವರೆ ಜಯಾ ಅವರ ಬಳಿ ಓಡಿ ಬಂದು ಅವರನ್ನು ತಬ್ಬಿಕೊಳ್ಳುತ್ತಾರೆ. ರೇಖಾ ಅವರಿಂದ ಇದನ್ನು ನಿರೀಕ್ಷಿಸದ ಜಯಾ ಬಚ್ಚನ್ ಅಚ್ಚರಿಯಿಂದಲೇ ರೇಖಾರನ್ನು ತಬ್ಬಿಕೊಳ್ಳುತ್ತಾರೆ.  ಇಬ್ಬರು ಬಳಿಕ ಜೊತೆ ಜೊತೆಗೆ ನಿಂತು ಅಮಿತಾಭ್ ಬಚ್ಚನ್ ಪ್ರಶಸ್ತಿ ಸ್ವೀಕರಿಸುವುದನ್ನು ನೋಡುತ್ತಾರೆ. 

Tap to resize

Latest Videos

ಬಾಲಿವುಡ್ ಸಿನಿಮಾ ರಂಗದ ಈ ಮೂವರು ತಾರೆಯರ ವೈಯಕ್ತಿಕ ಬದುಕು ತಿಳಿದವರಿಗೆ ರೇಖಾ ಅವರ ಈ ಪ್ರೀತಿಯ ಅಪ್ಪುಗೆಯ ಹಿಂದಿರುವ ಪ್ರೀತಿಯ ಅರಿವಾಗುತ್ತದೆ.  ರೇಖಾ ಹಾಗೂ ಅಮಿತಾಬ್ ಬಚ್ಚನ್ ಅವರು ಜೊತೆಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಬಾಲಿವುಡ್‌ನ ಮುಖ್ದಾರ್ ಕಾ ಸಿಕಂದರ್, ನಟ್ವರ್‌ಲಾಲ್‌, ಗಂಗಾ ಕಿ ಸುಗಂಧ್‌ ಸಿನಿಮಾಗಳು ಅವರಿಬ್ಬರ ಕೆಮೆಸ್ಟ್ರಿಯ ಬಗ್ಗೆ ಜನ ಮೆಚ್ಚಿ ಮಾತನಾಡುವಂತೆ ಮಾಡಿದ ಸಿನಿಮಾಗಳಾಗಿವೆ.  ಅದರಲ್ಲೂ ಯಶ್‌ ಚೋಪ್ರಾ ನಿರ್ದೇಶನದ 1981ರಲ್ಲಿ ತೆರೆಕಂಡ ಸಿಲ್‌ಸಿಲಾ ಸಿನಿಮಾದಲ್ಲಿ ಈ ಮೂವರು ನಟಿಸಿದ್ದು, ಅಮಿತಾಭ್ ಅವರ ನಿಜ ಜೀವನಕ್ಕೆ ಸಾಮ್ಯತೆ ಹೊಂದಿದೆ ಎಂಬ ಊಹಾಪೋಹಾಗಳೆದಿದ್ದವು. 

69ನೇ ವರ್ಷದಲ್ಲೂ ಆಕರ್ಷಕವಾಗಿ ಕಾಣುವ ಬಾಲಿವುಡ್ ನಟಿ ರೇಖಾ, ಅದಕ್ಕೆ ಕಾರಣವಿದು!

ಆದರೆ ಈ ಸಿಲ್‌ಸಿಲಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೊಂದು ಒಳ್ಳೆಯ ಪ್ರದರ್ಶನ ಕಾಣಲಿಲ್ಲ, ಪ್ರಮುಖ ನಟರ ನಡುವಿನ ಆಫ್-ಸ್ಕ್ರೀನ್ ಪ್ರೇಮದ ಊಹಾಪೋಹಾದ ಕಾರಣಕ್ಕೆ ಇದು ಅಷ್ಟೊಂದು ಯಶಸ್ವಿಯಾಗಲಿಲ್ಲ,  ಇದೇ ಅಮಿತಾಭ್ ಹಾಗೂ ರೇಖಾ ಜೊತೆಯಾಗಿ ನಟಿಸಿದ ಕೊನೆ ಸಿನಿಮಾ ಕೂಡ.  ಇವರು ಬಾಲಿವುಡ್‌ನ ಅತ್ಯಂತ ಯಶಸ್ವಿ ಆನ್ ಸ್ಕ್ರೀನ್ ಜೋಡಿ ಎಂಬ ಖ್ಯಾತಿಯನ್ನು ಗಳಿಸಿದ್ದರು. 

ಇನ್ನು 2004ರಲ್ಲಿ  ಸಿಮಿ ಗರೆವಾಲ್ ಟಾಕ್ ಶೋದಲ್ಲಿ ಭಾಗವಹಿಸಿದ್ದ ನಟಿ ರೇಖಾ ಅಮಿತಾಬ್ ಬಚ್ಚನ್ ಮೇಲಿನ ತನ್ನ ಪ್ರೀತಿಯ ಬಗ್ಗೆ ತೆರೆದ ಹೃದಯದಿಂದ ಒಪ್ಪಿಕೊಂಡಿದ್ದರು.  ಅಮಿತಾಬ್ ಮೇಲೆ ತನಗೆ ಭಾವೋದ್ರಿಕ್ತವಾದ, ಹುಚ್ಚು ಮತ್ತು ಹತಾಶೆಯಂತಹ ಭಾವನೆಗಳಿದ್ದವು. ಆದರೆ ರೂಮರ್ಸ್‌ಗಳ ಆಚೆಗೆ ನಮ್ಮ ಮಧ್ಯೆ ಬೇರೆ ಯಾವುದೇ ಸಂಬಂಧ ಇರಲಿಲ್ಲ. ಆತನ ಜೊತೆಗೆ ಯಾವುದೇ ವೈಯಕ್ತಿಕ ಸಂಪರ್ಕ ಎಂದಿಗೂ ಇರಲಿಲ್ಲ ಎಂದು ರೇಖಾ ಹೇಳಿಕೊಂಡಿದ್ದರು. 

ಬಾಲಿವುಡ್ ದಿಗ್ಗಜರ ಮೀರಿಸುತ್ತೆ ನಟಿ ರೇಖಾ ಮನೆ, 100 ಕೋಟಿ ಮೌಲ್ಯದ ಅರಮನೆಗಿದೆ ಸಿನಿಮಾ ನಂಟು! 

At First glance I thought it was Edited 😅
byu/Chai_Lijiye inBollyBlindsNGossip

 

click me!