ಜೆಎನ್‌ಯು ಪ್ರತಿಭಟನೆ ಆಧಾರಿತ ಮಲಯಾಳ ಸಿನಿಮಾಕ್ಕೆ ಸೆನ್ಸಾರ್‌ ಬ್ರೇಕ್‌!

Published : Dec 30, 2020, 08:36 AM IST
ಜೆಎನ್‌ಯು ಪ್ರತಿಭಟನೆ ಆಧಾರಿತ ಮಲಯಾಳ ಸಿನಿಮಾಕ್ಕೆ ಸೆನ್ಸಾರ್‌ ಬ್ರೇಕ್‌!

ಸಾರಾಂಶ

ದೆಹಲಿಯ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ವಿದ್ಯಾರ್ಥಿ ಪ್ರತಿಭಟನೆಯಾಧಾರಿತ ‘ವರ್ತಮಾನಂ’ ಮಲಯಾಳ ಸಿನಿಮಾ| ಸಿನಿಮಾ ಬಿಡುಗಡೆಗೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರಾಕರಿಸಿದೆ

ತಿರುವನಂತಪುರ(ಡಿ.30): ಈ ವರ್ಷದ ಆರಂಭದಲ್ಲಿ ದೆಹಲಿಯ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ವಿದ್ಯಾರ್ಥಿ ಪ್ರತಿಭಟನೆಯಾಧಾರಿತ ‘ವರ್ತಮಾನಂ’ ಮಲಯಾಳ ಸಿನಿಮಾ ಬಿಡುಗಡೆಗೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರಾಕರಿಸಿದೆ.

ಸಿದ್ಧಾರ್ಥ ಶಿವ ನಿರ್ದೇಶನದ ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಪಾರ್ವತಿ ತಿರುವೋತ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದಿಂದ ಜೆಎನ್‌ಯುಗೆ ಸಂಶೋಧನಾ ಉದ್ದೇಶಕ್ಕೆ ತೆರಳಿದ ಹೆಣ್ಣುಮಗಳೊಬ್ಬಳ ಪಯಣದ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾ ನಿರ್ಮಾಪಕ ಆರ್ಯದನ್‌ ಶೌಕತ್‌, ಪ್ರಮಾಣೀಕರಣ ನಿರಾಕರಣೆಗೆ ಸಿಬಿಎಫ್‌ಸಿ ಯಾವುದೇ ಕಾರಣ ತಿಳಿಸಿಲ್ಲ. ಹಾಗಾಗಿ ಈ ವಾರವೇ ಸಿನಿಮಾವನ್ನು ಮುಂಬೈನ ಸಿಬಿಎಫ್‌ಸಿಯ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಸಿಬಿಎಫ್‌ಸಿ ಇಬ್ಬರು ಸದಸ್ಯರು ಸಿನಿಮಾವನ್ನು ಬೆಂಬಲಿಸಿದರೆ, ಇನ್ನಿಬ್ಬರು ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಜನವರಿಯಲ್ಲಿ ಮುಸುಕುದಾರಿಗಳ ಗುಂಪೊಂದು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದಾಳಿ ಮಾಡಿತ್ತು. ಈ ಘಟನೆ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿತ್ತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!