ನಟ ಅಕ್ಷಯ್‌ ಕುಮಾರ್‌ ಸಂಭಾವನೆ 135 ಕೋಟಿ ರೂ!

Published : Dec 30, 2020, 07:26 AM IST
ನಟ ಅಕ್ಷಯ್‌ ಕುಮಾರ್‌ ಸಂಭಾವನೆ 135 ಕೋಟಿ ರೂ!

ಸಾರಾಂಶ

ನಟ ಅಕ್ಷಯ್‌ ಕುಮಾರ್‌ ಸಂಭಾವನೆ 135 ಕೋಟಿ ರೂ| 100 ಕೋಟಿಯಿಂದ 135 ಕೋಟಿಗೆ ಏರಿಕೆ| ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ 

 

ಮುಂಬೈ(ಡಿ.30): ಬಾಲಿವುಡ್‌ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾದ ಅಕ್ಷಯ್‌ ಕುಮಾರ್‌ ಒಂದು ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆಯನ್ನು 100ರಿಂದ 135 ಕೋಟಿ ರು.ಗೆ ಏರಿಸಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಎನಿಸಿಕೊಂಡಿದ್ದಾರೆ. ದುಬಾರಿ ಸಂಭಾವನೆ ಪಡೆಯುವ ಬಾಲಿವುಡ್‌ ನಟರ ಪೈಕಿ ಸಲ್ಮಾನ್‌ ಖಾನ್‌ ಒಂದು ಚಿತ್ರಕ್ಕೆ 50ರಿಂದ 60 ಕೋಟಿ ರು. ಪಡೆಯುತ್ತಿದ್ದರೆ, ಅಮೀರ್‌ ಖಾನ್‌ 50 ಕೋಟಿ ರು. ಸ್ವೀಕರಿಸುತ್ತಿದ್ದಾರೆ.

ಲಾಕ್‌ಡೌನ್‌ ವೇಳೆ ಒಪ್ಪಿಕೊಂಡ ಚಿತ್ರಗಳಿಗೆ ಅಕ್ಷಯ್‌ ಕುಮಾರ್‌ ತಮ್ಮ ಸಂಭಾವನೆಯನ್ನು 99 ಕೋಟಿ ರು.ನಿಂದ 108 ಕೋಟಿ ರು.ಗೆ ಏರಿಸಿಕೊಂಡಿದ್ದರು. ಇತ್ತೀಚೆಗೆ ಸಹಿ ಹಾಕಿದ ಚಿತ್ರಕ್ಕೆ ಅಕ್ಷಯ್‌ ಕುಮಾರ್‌ 117 ಕೋಟಿ ರು. ಸಂಭಾವನೆ ಪಡೆದುಕೊಂಡಿದ್ದಾರೆ. 2022ರಲ್ಲಿ ತೆರೆ ಕಾಣಲಿರುವ ಪ್ರತಿ ಚಿತ್ರಕ್ಕೆ ಅಕ್ಷಯ್‌ ಕುಮಾರ್‌ 135 ಕೋಟಿ ರು. ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ಷಯ್‌ ಕುಮಾರ್‌ ವರ್ಷಕ್ಕೆ ಮೂರಿಂದ ನಾಲ್ಕು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಅವರ ಎಲ್ಲಾ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ಬಹುತೇಕ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರು.ಗಿಂತ ಹೆಚ್ಚು ಹಣ ಗಳಿಸಿವೆ. ಸೂರ್ಯವಂಶಿ, ಬೆಲ್‌ಬಾಟಮ್‌, ಬಚ್ಚನ್‌ ಪಾಂಡೆ ಮುಂತಾದ ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಅಕ್ಷಯ್‌ ಕುಮಾರ್‌ ಚಿತ್ರಗಳು ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್‌ ಹಾಗೂ ಡಿಜಿಟಲ್‌ ಹಕ್ಕುಗಳ ಮಾರಾಟದಿಂದ 80ರಿಂದ 90 ಕೋಟಿ ರು.ಗಳಿಸುತ್ತಿವೆ. ಚಿತ್ರ ನಿರ್ಮಾಣಕ್ಕೆ 185ರಿಂದ 195 ಕೋಟಿ ರು. ವೆಚ್ಚ ಮಾಡಿದರೂ ನಿರ್ಮಾಪಕರ ಪಾಲಿಗೆ ಅಕ್ಷಯ್‌ ಕುಮಾರ್‌ ಗೆಲ್ಲುವ ಕುದುರೆ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಮೃತಿ ಮಂಧಾನ ನಂತರ ಖ್ಯಾತ ನಟಿಯ ಮದುವೆ ಕ್ಯಾನ್ಸಲ್? ಇನ್ಸ್ಟಾದಿಂದ ಫೋಟೋ ಡಿಲೀಟ್ ಮಾಡಿದ್ದಕ್ಕೆ ಡೌಟ್!
The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ