ಲತಾ ಮಂಗೇಶ್ಕರ್ ಮದುವೆಯಾಗಲಿಲ್ಲ ಯಾಕೆ? ಅದೊಂದು ನವಿರಾದ ಪ್ರೇಮಕಥೆ

By Suvarna NewsFirst Published Feb 6, 2022, 10:20 AM IST
Highlights

ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರಾಗಿರುವ ಲತಾ ಮಂಗೆಶ್ಕರ್ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 36 ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ  92ರ ಹರೆಯದ  ಲತಾ ಮಂಗೆಶ್ಕರ್ ಗೆ ಮದುವೆಯಾಗಿಲ್ಲ. 

ಲತಾ ಮಂಗೆಶ್ಕರ್ (Lata Mangeshkar) ಅವರಿಗೂ ಒಬ್ಬರ ಮೇಲೆ ಮನಸ್ಸಾಗಿತ್ತು. ತನ್ನ ವೈವಾಹಿಕ ಜೀವನದ ಬಗ್ಗೆ ಕಂಡಿದ್ದ ಅವರ ಕನಸು ನನಸಾಗಲಿಲ್ಲ. ನಾವು ಜೀವನದಲ್ಲಿ ಏನನ್ನಾದರೂ ಗಳಿಸಲು ಕೆಲವು ವಸ್ತುಗಳನ್ನು ಕಳೆದುಕೊಳ್ಳಬೇಕು. ಅದರಂತೆಯೇ ತಮ್ಮ ಪ್ರೇಮ  ಜೀವನದ ಬಗ್ಗೆ ಬಹಳ ಆಸೆ ಇಟ್ಟುಕೊಂಡಿದ್ದ ಅವರು ಮದುವೆಯಾಗಲಿಲ್ಲ ಎಂಬುದಕ್ಕೆ ಕಾರಣವಿದೆ. ಅದಕ್ಕೊಂದು ಕಥೆ ಇದೆ.

ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್  ಮತ್ತು  ಮಹಾರಾಜ್ ಸಿಂಗ್ (Maharaj Raj Singh ) ಎಂಬುವವರು ಸ್ನೇಹಿತರಾಗಿದ್ದರು. ರಾಜ್ ಸಿಂಗ್ ರಾಜಸ್ಥಾನದ ರಜಪೂತ ರಾಜ ಮನೆತನಕ್ಕೆ ಸೇರಿದವರು. ಮಾತ್ರವಲ್ಲ ಬಿಸಿಸಿಐನ ಮಾಜಿ ಅಧ್ಯಕ್ಷ ಮತ್ತು ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು.  ಸಹೋದರ  ಹೃದಯನಾಥ್ ಮಂಗೇಶ್ಕರ್ ಅವರ ಸ್ನೇಹಿತ ಸಹಜವಾಗಿಯೇ ಲತಾ ಮಂಗೇಶ್ಕರ್ ಅವರಿಗೂ ಸ್ನೇಹಿತರಾದರು. ಇವರಿಬ್ಬರೂ ಒಳ್ಳೆಯ ಸ್ನೇಹಿತರಾದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸತೊಡಗಿದರು. ಲತಾ ಅವರನ್ನು ರಾಜ್ ಸಿಂಗ್  ಪ್ರೀತಿಯಿಂದ ಮಿಥೂ (Mithoo) ಎಂದು ಕರೆಯುತ್ತಿದ್ದರು.

Latest Videos

https://kannada.asianetnews.com/cine-world/little-known-facts-about-the-legendary-singer-r6vepw

ಹೀಗೆ ದಿನಗಳು ಕಳೆಯಿತು. ಒಂದು ದಿನ ಲತಾ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಅವರು ಮದುವೆಯಾಗಲು ತೀರ್ಮಾನಿಸಿದರು. ಆದರೆ ಮದುವೆ ಆಗುವುದು ಸುಲಭದ ಮಾತಾಗಿರಲಿಲ್ಲ. ರಾಜ್ ಸಿಂಗ್ ರಾಜಮನೆತನದವರಾಗಿದ್ದರಿಂದ ಮತ್ತು ಲತಾ ಅವರು ಸಾಮಾನ್ಯ ಮನೆತನದವರಾಗಿದ್ದರಿಂದ ರಾಜ್ ಅವರ ತಂದೆ  ಮದುವೆ ಮತ್ತು ಇವರಿಬ್ಬರ  ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಲತಾ ಅವರನ್ನು ತಮ್ಮ ಕುಟುಂಬದ ಸದಸ್ಯರನ್ನಾಗಿ ಸ್ವೀಕರಿಸಲು ರಾಜ್‌ ತಂದೆ ತಯಾರಿರಲಿಲ್ಲ.

 ರಾಜ್ ಸಿಂಗ್ ಅವರು ತನ್ನ ತಂದೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ತಂದೆಯ ಮಾತನ್ನು ಮೀರಲು ಅವರಿಗೆ ಇಷ್ಟವಿರಲಿಲ್ಲ ತಂದೆಯ ಆಸೆಯಂತೆ ಇರಲು ನಿರ್ಧರಿಸಿದರು. ಹೀಗಾಗಿ ಲತಾ ಅವರನ್ನು ಮದುವೆಯಾಗಲಿಲ್ಲ. ತನ್ನ ಪ್ರೀತಿಯ ಲತಾ ಅವರನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ ಜೀವನಪರ್ಯಂತ ಅವಿವಾಹಿತನಾಗಿಯೇ ಇರುವುದಾಗಿ ಶಪಥ ಮಾಡಿದರು.

Indian Nightingale: ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡುವಂತೆ ಆಗಿದ್ದು ಹೇಗೆ?

ಲತಾ ಮಂಗೇಶ್ಕರ್ ಅವರು ರಾಜ್ ಸಿಂಗ್ ಅವರ ನಿರ್ಧಾರವನ್ನು ಗೌರವಿಸಿದರು ಮತ್ತು ಸಾಯುವವರೆಗೂ ಇಬ್ಬರೂ ಸ್ನೇಹಿತರಾಗಿರಲು ನಿರ್ಧರಿಸಿದರು. ಅಂತೆಯೇ ನಡೆದುಕೊಂಡರು ಕೂಡ. ಇಬ್ಬರೂ ಮದುವೆಯಾಗಲಿಲ್ಲ. ಇವರಿಬ್ಬರ ಪ್ರೇಮಕಥೆ ಸುಖಕರವಾದ ಕಥೆಯೊಂದಿಗೆ ಪರಿಪೂರ್ಣವಾದ ದಾಂಪತ್ಯ ಅನ್ನುವ ಅಂತ್ಯ ಕಾಣದಿದ್ದರೂ ಕೂಡ ಅವರಿಬ್ಬರದೂ ಪರಸ್ಪರರ ಕಡೆಗೆ ಸಮರ್ಪಣೆ ಮತ್ತು ಮೆಚ್ಚುಗೆಯಿಂದ ತುಂಬಿದ ಪ್ರೀತಿಯಾಗಿತ್ತು. ತಮ್ಮ ಜೀವಿತಾವಧಿವರೆಗಿನ ಪ್ರೀತಿಯಾಗಿತ್ತು.

2009 ಸೆಪ್ಟೆಂಬರ್‌ 12 ರಂದು ರಾಜ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು ಜಗತ್ತಿಗೆ ಪರಿಚಯಿಸಿದ ವ್ಯಕ್ತಿ ಇದೇ ರಾಜ್‌ ಸಿಂಗ್. ಸಚಿನ್ 16 ವರ್ಷದವರಾಗಿದ್ದಾಗ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

click me!