ಹೆಣ್ಣಿನ ದೌರ್ಜನ್ಯ, ಅಶ್ಲೀಲತೆ ವಿಜೃಂಭಿಸುವ ಚಿತ್ರ ರಶ್ಮಿಕಾಗೆ ಒಳ್ಳೆಯ ಸಂದೇಶ ಕೊಡುವ ಸಿನಿಮಾವಂತೆ!

Published : Mar 09, 2024, 06:50 PM IST
ಹೆಣ್ಣಿನ ದೌರ್ಜನ್ಯ, ಅಶ್ಲೀಲತೆ ವಿಜೃಂಭಿಸುವ ಚಿತ್ರ ರಶ್ಮಿಕಾಗೆ ಒಳ್ಳೆಯ ಸಂದೇಶ ಕೊಡುವ ಸಿನಿಮಾವಂತೆ!

ಸಾರಾಂಶ

ಹೆಣ್ಣುಮಕ್ಕಳ ಮೇಲೆ ಮಿತಿಮೀರಿದ ದೌರ್ಜನ್ಯ, ಕ್ರೌರ್ಯ, ಅಶ್ಲೀಲತೆ ಇರುವ ಅನಿಮಲ್​ ಚಿತ್ರ ರಶ್ಮಿಕಾಗೆ ಒಳ್ಳೆಯ ಸಂದೇಶ ಕೊಡುವ ಚಿತ್ರ ಎಂದು ಕಾಣಿಸಿತಾ?    

ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಮತ್ತು ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ನಟಿಸಿದ ಅನಿಮಲ್​ ಚಿತ್ರದ ಭರಾಟೆ ಇನ್ನೂ ನಿಂತಿಲ್ಲ.  ಸಿನಿಮಾ ಬಿಡುಗಡೆಯಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಆದರೂ ಸಿನಿಮಾ ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ.  ಉತ್ತರ ಅಮೆರಿಕದಲ್ಲಿ US $15 ಮಿಲಿಯನ್ (ಅಂದರೆ ಸುಮಾರು 125 ಕೋಟಿ ರೂಪಾಯಿ) ಒಟ್ಟು ಗಲ್ಲಾಪೆಟ್ಟಿಗೆ ಸಂಗ್ರಹದೊಂದಿಗೆ  ಮೂರನೇ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವೆಂಬ ಖ್ಯಾತಿ ಗಳಿಸಿದೆ.   ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಇಲ್ಲಿಯವರೆಗೆ  ಸುಮಾರು 915 ಕೋಟಿ ರೂಪಾಯಿ ವ್ಯವಹಾರ ಮಾಡಿದೆ.  ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು, ಅಶ್ಲೀಲತೆ, ಬೂಟನ್ನು ನೆಕ್ಕು ಎಂದು ಪತ್ನಿಗೆ ನಾಯಕ ಹೇಳುವುದು... ಇವೆಲ್ಲವನ್ನೂ ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವಾಗತಿಸಿ ಅನಿಮಲ್​ ಚಿತ್ರಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದಾರೆ. 


ಚಿತ್ರದ ಯಶಸ್ಸಿನ ಬಗ್ಗೆ ಇದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.  ಇದರ ಯಶಸ್ಸನ್ನು ಕಂಡು ಗೀತ ರಚನೆಕಾರ ಜಾವೇದ್​ ಅಖ್ತರ್ ಶಾಕ್​  ಆಗಿ ಹೇಳಿಕೆಯೊಂದನ್ನು ನೀಡಿದ್ದರು.  ಪ್ರಸ್ತುತ ಚಲನಚಿತ್ರದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.   ಅನಿಮಲ್​ ಚಿತ್ರವನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅದರಲ್ಲಿರುವ ಮಿತಿ ಮೀರುವ ದೌರ್ಜನ್ಯದ ಬಗ್ಗೆ ಬೇಸರಿಸಿದ್ದರು. ಇಂದಿನ ಕಾಲಘಟ್ಟದಲ್ಲಿ ತಯಾರಾಗುತ್ತಿರುವ ಚಿತ್ರಗಳು ಮತ್ತು ಹಾಡುಗಳ ಯಶಸ್ಸಿನ ಜವಾಬ್ದಾರಿ ಕೂಡ ಪ್ರೇಕ್ಷಕರ ಮೇಲೆ ನಿಂತಿದೆ. ಯುವ ಚಲನಚಿತ್ರ ನಿರ್ಮಾಪಕರಿಗೆ ಇದು ಪರೀಕ್ಷಾ ಸಮಯ ಎಂದು ನಾನು ನಂಬುತ್ತೇನೆ. ಉದಾಹರಣೆಗೆ, ಪುರುಷನು ಮಹಿಳೆಗೆ ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ ಅಥವಾ ಮಹಿಳೆಗೆ ಕಪಾಳಮೋಕ್ಷ ಮಾಡುವುದು ಸರಿ ಎಂದು ಪುರುಷ ಹೇಳಿದರೆ ಆ ಚಿತ್ರ ಸೂಪರ್ ಹಿಟ್ ಆಗಿದ್ದರೆ ಅದು ತುಂಬಾ ಅಪಾಯಕಾರಿ ಎಂದು ಅಖ್ತರ್ ಹೇಳಿದ್ದರು.

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗರಿ! ​ಪ್ರತಿಷ್ಠಿತ ಫೋರ್ಬ್ಸ್​ ಪಟ್ಟಿಯಲ್ಲಿ ದಕ್ಕಿದೆ ಸ್ಥಾನ

ಸಿನಿ ಪ್ರಿಯರಿಗೆ ತಿಳಿದಿರುವಂತೆ ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣನ ಹಸಿಬಿಸಿ ದೃಶ್ಯ ಹಾಗೂ ತೃಪ್ತಿ ಡಿಮ್ರಿ ಅವರು ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಹಲವಾರು ಟೀಕೆಗಳು ವ್ಯಕ್ತವಾಗುತ್ತಿದ್ದರೂ, ನಟಿ ರಶ್ಮಿಕಾಗೆ ಈ ಚಿತ್ರದಲ್ಲಿ ಒಳ್ಳೆಯ ಮೆಸೇಜ್​ ಕಂಡಿದೆಯಂತೆ! ಪರೋಕ್ಷವಾಗಿ ನಟಿ ಇದನ್ನೇ ಹೇಳಿದ್ದಾರೆ. ನಾನು ಯಾವುದೇ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಮೊದಲು ಸ್ಕ್ರಿಪ್ಟ್​ ನೋಡುತ್ತೇನೆ. ಅದು ಚೆನ್ನಾಗಿ, ಉತ್ತಮ ಸಂದೇಶ ಹೊಂದಿದೆ, ಸಮಾಜಕ್ಕೆ ಒಳ್ಳೆಯ ಮೆಸೇಜ್​ ನೀಡುತ್ತದೆ ಎಂದು ತಿಳಿದರೆ ಮಾತ್ರ ಅದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇದೀಗ ನೆಟ್ಟಿಗರು ಅನಿಮಲ್​ ಚಿತ್ರವನ್ನು ಎಳೆದು ತಂದಿದ್ದಾರೆ. ಅಶ್ಲೀಲತೆ, ಮಹಿಳಾ ದೌರ್ಜನ್ಯ, ಕ್ರೂರತೆ ಬಿಂಬಿಸುವ ಚಿತ್ರ ನಿನಗೆ ಒಳ್ಳೆಯ ಸಂದೇಶ ಕೊಟ್ಟಿದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ. ನೀವು ಮಾಡಿರುವ ಸಿನಿಮಾಗಳಿಂದ ಅಂಥದ್ದೇನು ಕಡಿದು ಗುಡ್ಡೆ ಹಾಕಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.  ಒಟ್ಟಿನಲ್ಲಿ ನಟಿ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

ಬಾಲಿವುಡ್​ ಪುರುಷ ಪ್ರಧಾನವಾಗಿದ್ದು, ಮಹಿಳೆಯರು ಇಲ್ಲಿ ಬಟ್ಟೆ ಬಿಚ್ಚಲು ಅಷ್ಟೇ ಸೀಮಿತರು ಎನ್ನುವ ಮಾತು ಬಹಳ ವರ್ಷಗಳಿಂದಲೂ ರೂಢಿಯಲ್ಲಿದೆ. ಅದಕ್ಕೆ ತಕ್ಕನಾಗಿ ಇಂದಿನ ನಟಿಯರೂ ಹಿಂದೆ ಬಿದ್ದಿಲ್ಲ. ಪೈಪೋಟಿಗೆ ಬಿದ್ದವರಂತೆಯೇ ಬಟ್ಟೆ ಬಿಚ್ಚುತ್ತಿದ್ದಾರೆ. ಅನಿಮಲ್​ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣನ ಹಸಿಬಿಸಿ ದೃಶ್ಯ ಹಾಗೂ ತೃಪ್ತಿ ಡಿಮ್ರಿ ಅವರು ಸಂಪೂರ್ಣ ಬೆತ್ತಲಾದ ಮೇಲಂತೂ ಇಂದು ಬಾಲಿವುಡ್​ ಇಂಡಸ್ಟ್ರಿಯಲ್ಲಿ ನಟಿಯರಿಗೆ ಇರುವ ಸ್ಥಾನದ ಬಗ್ಗೆ ಪರಿಪೂರ್ಣವಾಗಿ ತೋರಿಸಲಾಗಿದೆ. ಈ ಚಿತ್ರ ಭರ್ಜರಿ ಯಶಸ್ಸು ಕಂಡು ಹಲವಾರು ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿರುವುದನ್ನು ನೋಡಿದರೆ ಪ್ರೇಕ್ಷಕರ ಅಭಿರುಚಿ ಯಾವ ಮಟ್ಟಿಗೆ ಹೋಗಿದೆ ಎನ್ನುವುದೂ ಅರ್ಥವಾಗುತ್ತದೆ.  ಇದೀಗ ನಟಿ ಕೂಡ ಒಳ್ಳೆಯ ಸಂದೇಶದ ಚಿತ್ರ ಎಂದಿದ್ದಾರೆ. 

ನಟಿ ಸೌಂದರ್ಯರ ಬಯೋಪಿಕ್​ನಲ್ಲಿ ನಟಿಸುವ ಆಸೆ ರಶ್ಮಿಕಾಗೆ! ಅಷ್ಟಕ್ಕೂ ಇವರಿಬ್ಬರ ಸಂಬಂಧವೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rishab Shetty: ಕಾಂತಾರದಿಂದ ಜೈ ಹನುಮಾನ್‌ವರೆಗೆ, ದೈವ-ದೇವರ ಕಥೆ ಹೇಳಿದ ಶೆಟ್ರು!
ವಿದೇಶದಲ್ಲಿದ್ರೂ 'ಇಂಟರ್ನ್ಯಾಷನಲ್ ಜೀಜು' ಮಾಡಿದ್ದೇನು? ನಿಕ್ ಜೊತೆಗಿದ್ರೂ ಕಣ್ಣೀರು ಹಾಕಿದ್ದೇಕೆ ಪ್ರಿಯಾಂಕಾ ಚೋಪ್ರಾ..?