Valentines Day: ಬೆಡ್​ರೂಮಲ್ಲಿ ತಬ್ಬಿ ಮುದ್ದಾಡಿದ ವೀಡಿಯೋ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ!

By Suvarna News  |  First Published Feb 14, 2023, 1:24 PM IST

ಪ್ರೇಮಿಗಳ ದಿನವಾದ ಇಂದು ನಟಿ ರಶ್ಮಿಕಾ  ಮಂದಣ್ಣ, ತಮ್ಮ ಬೆಡ್​ರೂಮ್​ನಿಂದ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಏನಿದೆ ಅದರಲ್ಲಿ?
 


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಲವ್, ಡೇಟಿಂಗ್ ವಿಚಾರದಲ್ಲೂ ಭಾರೀ ಸುದ್ದಿಯಲ್ಲಿರುವ ನಟಿ.  ಕಿರಿಕ್ ಪಾರ್ಟಿ ಸಿನಿಮಾ ಬಳಿಕ ನಟ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಆಗಿ ಬಳಿಕ ಬ್ರೇಕಪ್ ಆದ ಬಳಿಕ ವಿಜಯ್ ದೇವರಕೊಂಡ (Vijay Deverakonda) ಜೊತೆ ಇವರ ಸುದ್ದಿ ಹರಿದಾಡಿತು.  ಟಾಲಿವುಡ್​ನಲ್ಲಿ ಇವರಿಬ್ಬರ ಜೋಡಿ ಮರುಳು ಕೂಡ ಮಾಡುತ್ತಿದೆ. ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಎಲ್ಲಾ ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಅವರ ಕಾಲ್ ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲು ನಿಂತಿವೆಯಂತೆ. ಇದರ ನಡುವೆಯೇ ರಶ್ಮಿಕಾ-ವಿಜಯ್ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿಯ ನಡುವೆಯೇ ಈ ಜೋಡಿ ಮಾಲ್ಡೀವ್ಸ್​ಗೆ ಹೋಗಿತ್ತು. ಅಲ್ಲಿಯ  ಫೋಟೋಗಳು ವೈರಲ್​ ಆಗಿದ್ದವು. ನಂತರ ಜೋಡಿ  ದುಬೈಗೆ ಹಾರಿತ್ತು. ನಂತರ  ರಶ್ಮಿಕಾ, ಇನ್ಸ್​ಸ್ಟಾಗ್ರಾಮ್​ನಲ್ಲಿ  ನನ್ನ ವ್ಯಾಲೆಂಟೈನ್ (valentine) ಯಾರು ಎಂದು ಗೆಸ್ ಮಾಡಿ ಎಂದು ಪ್ರಶ್ನಿಸಿ ವಿಜಯ್​ ಅವರೊಂದಿಗಿನ ಸಂಬಂಧದ ಕುರಿತು ಬಹುತೇಕ ಖಚಿತಪಡಿಸಿದ್ದಾರೆ. ಈಕೆಯ ಅಭಿಮಾನಿಗಳು ಕೂಡ ವಿಜಯ್​ ದೇವರಕೊಂಡ ಅವರ ಹೆಸರನ್ನೇ ಹೇಳಿದ್ದಾರೆ.

ಇದೀಗ ಪ್ರೇಮಿಗಳ ದಿನವಾದ ಇಂದು, ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಬೆಡ್​ರೂಂನಿಂದಲೇ (Bedroom)ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಹಾಕಿಕೊಂಡಿದ್ದಾರೆ ರಶ್ಮಿಕಾ. ಇದರಲ್ಲಿ ಈಕೆ  ಎಂಜಾಯ್ ಮಾಡುವುದನ್ನು ಕಾಣಬಹುದಾಗಿದೆ. ನಾಯಿಯ ಜೊತೆ ನಟಿ ಆಡವಾಡುತ್ತಿದ್ದು, ನಾಯಿ ಕೂಡ ಅವರನ್ನು ಮುದ್ದಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಜೊತೆಗೆ,  ನಿಮಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಬರೆದಿದ್ದಾರೆ. ಈ ವಿಡಿಯೋ ಪೋಸ್ಟ್​ ಮಾಡಿ 16 ಗಂಟೆಗಳಲ್ಲಿ 8 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದೂ ಅಲ್ಲದೇ ಐದು ಸಾವಿರಕ್ಕೂ ಅಧಿಕ ಮಂದಿ ಕಮೆಂಟ್​ ಮಾಡಿದ್ದಾರೆ. ಕೆಲವರು ಹಾಸ್ಯದ ಪ್ರತಿಕ್ರಿಯೆಗಳನ್ನೂ ಕೊಟ್ಟಿದ್ದಾರೆ. ಮಾಧ್ಯಮಗಳಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿಯ (Siddharth Malhotra- Kiara Adwani) ಜೋಡಿಯನ್ನು ನೋಡಿ ನೋಡಿ ಸಾಕಾಗಿ ಹೋಗಿದೆ. ಈಗಲಾದ್ರೂ ರಶ್ಮಿಕಾ- ವಿಜಯ್ ಜೋಡಿ ನೋಡುವ ಆಸೆ. ಬೇಗ ಬೇಗ ಮದುವೆಯಾಗಿ ಎಂದಿದ್ದಾರೆ.  

Tap to resize

Latest Videos

ರಾಮ್ ಚರಣ್​ಗೆ ಇಷ್ಟವಿಲ್ಲದಿದ್ರೂ ಲಿಪ್​ಲಾಕ್​ ಮಾಡಿದ್ರಾ ಸಮಂತಾ?

ಇನ್ನು ರಶ್ಮಿಕಾ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ (Controversial Statement) ನೀಡಿ ಆಕ್ರೋಶಕ್ಕೆ ಗುರಿಯಾಗಿರುವ ನಟಿ. ಅದರಲ್ಲಿಯೂ ಈಕೆ ಸಂದರ್ಶನದ ವೇಳೆ ಮಾಡಿದ ಕೈಸನ್ನೆ ಬಹಳ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.  ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಹೇಳುವಾಗ ಪ್ರೊಡಕ್ಷನ್ ಹೌಸ್ ಹೆಸರನ್ನು ಕೈ ಬೆರಳ ಸನ್ನೆ ಮಾಡಿದ್ದು ಸಂಚಲನ ಸೃಷ್ಟಿಸಿತ್ತು. ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದಿರಬಹುದು, ನಾನು ಹೆಚ್ಚು ಎಕ್ಸ್ ಪ್ರೆಸಿವ್ ಎಂದು ನಟಿ ಹೇಳಿಕೊಂಡಿದ್ದರು. ರಿಷಬ್ ಶೆಟ್ಟಿ (Rishabh Shetty) ಸಹ ಸಂದರ್ಶನವೊಂದರಲ್ಲಿ ಕೈ ಸನ್ನೆ ಮಾಡಿ ಈ ರೀತಿ ತೋರಿಸುವ ನಟಿಯರ ಜೊತೆ ನಟಿಸಲ್ಲ ಎಂದು ಹೇಳಿದ್ದರು. ಹೀಗಾಗಿ ರಶ್ಮಿಕಾ ಕುರಿತು ಬೈಕಾಟ್​ ರಶ್ಮಿಕಾ (Boycott Rashmika) ಎಂದೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಶುರುವಾಗಿತ್ತು.

ಇದೀಗ ಅಭಿಮಾನಿಗಳು  ರಶ್ಮಿಕಾ ಅವರ ಮದುವೆ ಯಾವಾಗ ಎಂದು  ಕಾಯುತ್ತಿದ್ದಾರೆ. ಇದರ  ನಡುವೆಯೇ, ಅವರ ಪುಷ್ಪ ಪಾರ್ಟ್ 2 ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ತೆರೆ ಮೇಲೆ ಮತ್ತೆ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಿಟೌನ್ ನಲ್ಲೂ ಪುಷ್ಪಾ ಭರ್ಜರಿ ಸದ್ದು ಮಾಡಿದೆ. ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಅವರು ಪುಷ್ಪ ಚಿತ್ರದ ಮುಂದುವರಿದ ಭಾಗವಾಗಿ ಪುಷ್ಪ 2 (Pushpa 2) ಸಿನಿಮಾ ಮಾಡುತ್ತಿದ್ದಾರೆ. ಮೊದಲ ಭಾಗವನ್ನು ಹಿಂದಿಕ್ಕುವಂತೆ ಎರಡನೇ ಭಾಗದ ಬಗ್ಗೆ ವಿಶೇಷ ಕಾಳಜಿ ವಹಿಸಿ ಶೂಟಿಂಗ್ ಮಾಡುತ್ತಿದ್ದಾರೆ.  ಹೈದರಾಬಾದ್‌ನಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ ಸುಕುಮಾರ್, ಇದೀಗ ವೈಜಾಗ್ ಶೆಡ್ಯೂಲ್ ಅನ್ನು ಕೂಡ ಮುಗಿಸಿದ್ದಾರೆ. ವೈಜಾಗ್ ಬೀಚ್ ದಡಕ್ಕೆ ಬರುತ್ತಿದ್ದಂತೆ ಅಲೆಗಳನ್ನು ನೋಡುತ್ತಿರುವ ಚಿತ್ರವನ್ನು ಅಲ್ಲು ಅರ್ಜುನ್ ಶೇರ್ ಮಾಡಿದ್ದರು. ಸಮುದ್ರದ ದಡದಲ್ಲಿ ಪ್ರಕೃತಿಯ ಸೊಬಗನ್ನು ಸವಿಯುತ್ತಿರುವುದು ಕಂಡುಬಂದಿತ್ತು. 

Rakul Preeth Singh: ಎರಡು ಕಾಂಡೋಮ್ ಒಟ್ಟಿಗೇ​ ಧರಿಸಿದ್ರೆ ಏನಾಗತ್ತೆ? ನಟಿ ವಿವರಿಸಿದ್ದು ಹೀಗೆ!
 

click me!