ರಶ್ಮಿಕಾ ಮದ್ವೆ ಆಗೋ ಗಂಡು ಹೀಗಿರಬೇಕಂತೆ, ಈ ಕ್ವಾಲಿಟೀಸ್ ರಕ್ಷಿತ್ ಶೆಟ್ಟಿಯಲ್ಲಿ ಇರಲಿಲ್ವಾ?

Published : Dec 19, 2024, 09:36 AM ISTUpdated : Dec 20, 2024, 02:54 PM IST
ರಶ್ಮಿಕಾ ಮದ್ವೆ ಆಗೋ ಗಂಡು ಹೀಗಿರಬೇಕಂತೆ, ಈ ಕ್ವಾಲಿಟೀಸ್ ರಕ್ಷಿತ್ ಶೆಟ್ಟಿಯಲ್ಲಿ ಇರಲಿಲ್ವಾ?

ಸಾರಾಂಶ

 ರಶ್ಮಿಕಾ ಮಂದಣ್ಣ ಅಂದರೆ ಇಂಡಿಯಾದಾದ್ಯಂತದ ಪಡ್ಡೆಗಳು ಕಣ್ಣರಳಿಸ್ತಾರೆ. ಇಂಥಾ ಸ್ಟಾರ್ ನಟಿ ತನ್ನ ಕೈ ಹಿಡಿಯೋ ಹುಡುಗ ಹೇಗಿರಬೇಕು ಅಂತ ಹೇಳಿದ್ದಾರೆ. ಈ ಕ್ವಾಲಿಟೀಸ್ ರಕ್ಷಿತ್ ಶೆಟ್ಟಿ ಅವರಲ್ಲಿರಲಿಲ್ವಾ ಅಂತ ಕನ್ನಡಿಗರು ಪ್ರಶ್ನೆ ಮಾಡ್ತಿದ್ದಾರೆ..

ಇತ್ತೀಚೆಗೆ ತಾನೇ 'ಪುಷ್ಪ ೨' ಸಿನಿಮಾ ರಿಲೀಸ್ ಆಗಿ ಸಾವಿರ ಸಾವಿರ ಕೋಟಿ ಹಣ ಬಾಚಿಕೊಳ್ತಿರೋ ಹೊತ್ತಲ್ಲಿ ಈ ಸಿನಿಮಾದ ಹೀರೋಯಿನ್ ರಶ್ಮಿಕಾ ಮಂದಣ್ಣ ಒಂದು ಅಚ್ಚರಿಯ ಸ್ಟೇಟ್‌ಮೆಂಟ್ ನೀಡಿದ್ದಾರೆ. ಅದು ತನ್ನ ಮದುವೆ ಬಗ್ಗೆ. ಆಕೆಯನ್ನು ಮದುವೆ ಆಗೋ ಹುಡುಗ ಹೇಗಿರಬೇಕು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಆದರೆ ಈ ಗುಣಗಳೆಲ್ಲ ನಮ್ಮ ರಕ್ಷಿತ್ ಶೆಟ್ರಲ್ಲಿ ಇರಲಿಲ್ವಾ? ಹಾಗಿದ್ರೂ ಯಾಕೆ ಅವರನ್ನು ಬಿಟ್ಟು ಹೋದ್ರಿ ಅಂತ ಒಂದಿಷ್ಟು ಮಂದಿ ಕಿರಿಕ್ ಬೆಡಗಿಯನ್ನು ತರಾಟೆಗೆ ತಗೊಳ್ತಿದ್ದಾರೆ. ಅಂದಹಾಗೆ ರಶ್ಮಿಕಾ ಸದ್ಯ ದೇಶದ ಬಹುಬೇಡಿಕೆಯ ನಟಿ. ಈಕೆಗೆ ಸದ್ಯಕ್ಕೆ ಬಾಲಿವುಡ್‌ನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಶಾಹಿದ್ ಕಪೂರ್ ನಟನೆಯ ಹೊಸ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

‘ಕಾಕ್‌ಟೈಲ್’ ಸಿನಿಮಾದ ಸೀಕ್ವೇಲ್‌ನಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಕಥೆಯ ಕುರಿತು ನಟಿಯ ಬಳಿ ಒಂದು ಹಂತದ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ. ನಟಿ ಓಕೆ ಅಂದ್ರಾ? ಎಂಬುದು ಇದುವರೆಗೂ ಖಾತ್ರಿಯಾಗಿಲ್ಲ. ತಂಡದ ಕಡೆಯಿಂದ ಅನೌನ್ಸ್ ಆಗಲಿದೆಯಾ ಕಾಯಬೇಕಿದೆ.

ಪ್ರಭಾಸ್ 'ರಾಜಾ ಸಾಬ್' ಸಿನೆಮಾ ಬಿಡುಗಡೆ ಮುಂದಕ್ಕೆ, ಚಿತ್ರ ಲೇಟ್ ಆಗುತ್ತಿರುವುದಕ್ಕೆ ಕಾರಣ ಏನು?

ಈ ನಡುವೆ ರಶ್ಮಿಕಾ ಮಂದಣ್ಣನ ಹುಡುಗನ ಸುದ್ದಿ ಈ ಸುದ್ದಿಗಿಂತಲೂ ಜೋರಾಗಿ ರೆಕ್ಕೆ ಪುಕ್ಕ ಕಟ್ಕೊಂಡು ಓಡಾಡ್ತಿದೆ. ಆದರೆ ಇದು ರಶ್ಮಿಕಾ ಬಾಯಿಂದಲೇ ಹೊರಬಂದಿರೋ ಕಾರಣ ಇದು ಗಾಳಿಸುದ್ದಿ (Gossips) ಅಂತೂ ಅಲ್ಲ. ರಶ್ಮಿಕಾ ಅವರ ವ್ಯೆಯಕ್ತಿಕ ಬದುಕು ಆಗಾಗ ಸುದ್ದಿಯಾಗುತ್ತೆ. ಇದರ ಕೇಂದ್ರಬಿಂದು ವಿಜಯ್ ದೇವರಕೊಂಡ ಅವರೇ ಆಗಿರ್ತಾರೆ ಅನ್ನೋದು ವಿಶೇಷ. ಹಾಗೆ ನೋಡಿದರೆ ಇಲ್ಲಿಯವರೆಗೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ ತಮ್ಮ ಸಂಬಂಧದ ಮೇಲೆ ಅಧಿಕೃತ ಮುದ್ರೆಯನ್ನು ಒತ್ತಿಲ್ಲ. ಆದರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಇರುವುದು ಕೇವಲ ಸ್ನೇಹ ಸಂಬಂಧ ಮಾತ್ರ ಅಲ್ಲ ಎನ್ನುವ ಅನ್ನುವುದಕ್ಕೆ ಹಿಂಟ್ ಸಿಕ್ತಾನೇ ಇದೆ. ಹೀಗಿರುವಾಗ ರಶ್ಮಿಕಾ ಮಂದಣ್ಣ ಈಗ ತಮ್ಮ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ.

ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರೀತಿ, ಮದುವೆ, ಸಂಗಾತಿಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ ಜೀವನದ ಪ್ರತಿಯೊಂದು ಹಂತದಲ್ಲಿ ನನಗೆ ನನ್ನ ಸಂಗಾತಿ ಜೊತೆ ಇರಬೇಕು ಎಂದಿದ್ದಾರೆ. ನನಗೆ ನನ್ನ ಹುಡುಗನಿಂದ ಭದ್ರತೆ, ಸಹಾನುಭೂತಿ ಬೇಕು ಎಂದು ಹೇಳಿದ್ದಾರೆ. ನನ್ನ ಕೈ ಹಿಡಿಯುವ ಹುಡುಗ ನನಗೆ ಗೌರವವನ್ನು ನೀಡಬೇಕು. ಯಾಕೆಂದರೆ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ಗೌರವಿಸಿದಾಗ, ಪ್ರಾಮಾಣಿಕವಾಗಿದ್ದಾಗ, ಕಾಳಜಿ ವಹಿಸಿದಾಗ ಜವಾಬ್ಧಾರಿ ಇರುತ್ತೆ ಎಂದಿರುವ ರಶ್ಮಿಕಾ ಮಂದಣ್ಣ ಸಮಾನ ಮನಸ್ಕರಾಗಿರುವ ಯಾರ ಜೊತೆಯಾದರೂ ಕೂಡ ನಾನು ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಹೊಂದಾಣಿಕೆ ಇಲ್ಲದಿದ್ದರೆ ಜೊತೆಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಜೀವನದ ವಿವಿಧ ಹಂತಗಳಲ್ಲಿ ನಿಮ್ಮ ಜೊತೆ ಯಾರಾದರೂ ಇರುವುದೇ ಪ್ರೀತಿ. ಕೇವಲ ಸುಖದಲ್ಲಿ ಮಾತ್ರ ಅಲ್ಲ ಕಷ್ಟದಲ್ಲಿ ಕೂಡ ಅವರು ನಮ್ಮ ಜೊತೆ ಇರಬೇಕು ಬಂಡೆಯಂತೆ ಸದಾ ಕಾಲ ನಿಲ್ಲಬೇಕು ಎಂದಿರುವ ರಶ್ಮಿಕಾ ಗಟ್ಟಿಯಾದ ಬಾಂಧವ್ಯವೇ ಪ್ರೀತಿಯೆಂದು ಹೇಳಿದ್ದಾರೆ.

ಪಡ್ಡೆಗಳ ನಿದ್ದೆ ಕದೀತಿರೋ ಹಾಟ್​ ಬ್ಯೂಟಿ ಪೂನಂ ಪಾಂಡೆ ರಾಜ್ಯಕ್ಕೆ ಮೊದಲ ಭೇಟಿ: ಕನಸಿನ ಕನ್ಯೆ ಇಲ್ಲಿ ಸಿಗ್ತಾಳೆ ನೋಡಿ...

ಈ ಎಲ್ಲ ಗುಣಗಳೂ ನಮ್ಮ ರಕ್ಷಿತ್ ಶೆಟ್ರಲ್ಲಿ ಇದ್ದವಲ್ಲಾ, ಆದರೂ ಅವರಿಗೆ ಯಾಕೆ ಕೈಕೊಟ್ರಿ? ಅಂತ ಸಾಕಷ್ಟು ಮಂದಿ ಕನ್ನಡಿಗರು ಪ್ರಶ್ನೆ ಮಾಡ್ತಾ ಇದ್ದಾರೆ. ರಶ್ಮಿಕಾ ಹಾಗೂ ರಕ್ಷಿತ್ ನಡುವೆ ಪ್ರೇಮ ಹುಟ್ಟಿ ಅದು ಎಂಗೇಜ್‌ಮೆಂಟ್‌ವರೆಗೂ ಹೋಗಿತ್ತು. ಆಮೇಲೆ ಅವರಿಬ್ಬರೂ ಬ್ರೇಕಪ್ ಮಾಡಿಕೊಂಡರು. ಇದಾಗಿ ಎಷ್ಟೋ ವರ್ಷಗಳಾದರೂ ಕನ್ನಡಿಗರು ಇದನ್ನು ಮರೆತಿಲ್ಲ. ಇಂದಿಗೂ ರಶ್ಮಿಕಾ ಇಂಥಾ ಮಾತು ಹೇಳಿದಾಗಲೆಲ್ಲ ನಮ್ಮ ಹುಡುಗನನ್ನು ಯಾಕೆ ಬಿಟ್ಟು ಹೋದೆ ಎಂದು ಪ್ರಶ್ನೆ ಮಾಡುತ್ತಲೇ ಇರುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?
ಮಹೇಶ್ ಬಾಬು ಯಾರೆಂದು ನನಗೆ ಗೊತ್ತಿಲ್ಲ, ಪ್ರಭಾಸ್ ಬಿಟ್ಟರೆ ಎಲ್ಲರೂ ಕುಳ್ಳರು.. ಸ್ಟಾರ್ ನಟಿಯ ಹೇಳಿಕೆ ವೈರಲ್!