
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಇವರ ಭೇಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ. ಅದರಲ್ಲೂ ರಶ್ಮಿಕಾ ಉಟ್ಟಿದ್ದ ಸುಂದರವಾದ ಸೀರೆ ಎಲ್ಲರ ಗಮನ ಸೆಳೆದಿದೆ.
ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಲು ರಶ್ಮಿಕಾ ಮಂದಣ್ಣ ಇಂಡಿಗೋ ಬಣ್ಣದ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಸೀರೆ ಪ್ರಸಿದ್ಧ ಡಿಸೈನರ್ ಬ್ರ್ಯಾಂಡ್ Raw Mangoಗೆ ಸೇರಿದ್ದು. ಅದರ ಅಧಿಕೃತ ವೆಬ್ಸೈಟ್ನಲ್ಲಿ ಈ ಸೀರೆ ಬೆಲೆ 64,800 ಎಂದು ನಮೂದಿಸಲಾಗಿದೆ.
ಈ ಸೀರೆಯ ಹೆಸರು ಅಸ್ಗರ್ ಸಿಲ್ಕ್ ಸೀರೆ. ಸೀರೆಯ ಬಾರ್ಡರ್ನಲ್ಲಿ ಹಾರುತ್ತಿರುವ ದೇವದೂತರ ಚಿತ್ರಗಳು ಮತ್ತು ಹೂವಿನ ವಿನ್ಯಾಸಗಳಿವೆ. ವಿಶೇಷವೆಂದರೆ, ಈ ವಿನ್ಯಾಸಗಳನ್ನು ಕೈಮಗ್ಗದಲ್ಲಿ ಕೈಯಿಂದಲೇ ನೇಯಲಾಗಿದೆ. ಸೀರೆಯನ್ನು ಡ್ರೈ ಕ್ಲೀನ್ ಮಾತ್ರ ಮಾಡಿಸಬೇಕು ಎಂದು ಕಂಪನಿ ತಿಳಿಸಿದೆ.
ರಶ್ಮಿಕಾ ತಮ್ಮ ಸೀರೆಯ ಲುಕ್ಗೆ ಹೊಂದುವಂತೆ ಸಿಂಪಲ್ ಮೇಕಪ್ ಮಾಡಿದ್ದರು. ಚೋಕರ್ ನೆಕ್ಲೆಸ್ ಧರಿಸಿದ್ದ ಅವರು ಕೂದಲನ್ನು ಮಧ್ಯದಲ್ಲಿ ಪಾರ್ಟಿಂಗ್ ಮಾಡಿ, ಬಿಟ್ಟಿದ್ದರು. ಮೇಕಪ್ ಕೂಡ ತುಂಬಾ ಸಿಂಪಲ್ ಆಗಿತ್ತು. ಮ್ಯಾಟ್ ಬೇಸ್ ಮತ್ತು ಪಿಂಕ್-ನ್ಯುಡ್ ಲಿಪ್ಸ್ಟಿಕ್ ಮೂಲಕ ತಮ್ಮ ಲುಕ್ಗೆ ಎಲಿಗೆಂಟ್ ಟಚ್ ಕೊಟ್ಟಿದ್ದರು.
ಮುಖ್ಯಮಂತ್ರಿ ವಿಜಯ್ ಅವರ ಜೊತೆಗಿನ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ, ಬಹಳ ದಿನಗಳ ನಂತರ ವಿಜಯ್ ಸರ್ ಅವರನ್ನು ಭೇಟಿಯಾಗಿರುವುದಾಗಿ ಬರೆದುಕೊಂಡಿದ್ದಾರೆ. ಹಿಂದೆ ಅವರ ಅಭಿಮಾನಿಯಾಗಿ ಅವರನ್ನು ಮೆಚ್ಚುತ್ತಿದ್ದ ತಮಗೆ, ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಮತ್ತು ಈಗ ಮುಖ್ಯಮಂತ್ರಿಯಾಗಿ ಅವರ ಪ್ರಯಾಣವನ್ನು ನೋಡುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ವಿಜಯ್ ದೇವರಕೊಂಡ ಲುಕ್ ಹೇಗಿತ್ತು?
ಈ ಭೇಟಿಯಲ್ಲಿ ವಿಜಯ್ ದೇವರಕೊಂಡ ಕೂಡ ಗಮನ ಸೆಳೆದರು. ಅವರು ಶಾರ್ಟ್ ಬಂದ್ಗಲಾ ಜಾಕೆಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ತಮ್ಮ ಮುಂಬರುವ ರಣಬಾಲಿ ಸಿನಿಮಾದಲ್ಲಿನ ಬಂಡಾಯಗಾರನ ಪಾತ್ರಕ್ಕೆ ಹೊಂದುವ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ ದೇವರಕೊಂಡ ಕೂಡ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬ್ಯುಸಿ ದಿನದ ನಡುವೆಯೂ ವಿಜಯ್ ಆತ್ಮೀಯವಾಗಿ ಸ್ವಾಗತಿಸಿ, ಜೀವನ, ಕೆಲಸ ಮತ್ತು ಜಗತ್ತಿನ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ತಿರುಮಲ ದೇವಸ್ಥಾನಕ್ಕೂ ಭೇಟಿ ನೀಡಿದ ಜೋಡಿ
ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾದ ಬಳಿಕ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಈ ವೇಳೆ ರಶ್ಮಿಕಾ ಸಾಸಿವೆ ಹಳದಿ ಬಣ್ಣದ ರೇಷ್ಮೆ ಸೀರೆ ಮತ್ತು ಅದಕ್ಕೆ ಹೊಂದುವ ಗುಲಾಬಿ ಬಣ್ಣದ ಬ್ಲೌಸ್ ಧರಿಸಿದ್ದರು. ವಿಜಯ್ ದೇವರಕೊಂಡ ಬಿಳಿ ಬಣ್ಣದ ಶಾರ್ಟ್ ಕುರ್ತಾ ಮತ್ತು ಬಿಳಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದರು.
ಅಕ್ಟೋಬರ್ 16ರಂದು ರಣಬಾಲಿ ಬಿಡುಗಡೆ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ರಣಬಾಲಿ ಅಕ್ಟೋಬರ್ 16 ರಂದು ತೆರೆಗೆ ಬರ್ತಿದೆ. ದಂಪತಿ, ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಸಿನಿಮಾ 1870ರ ದಶಕದ ಹಿನ್ನೆಲೆಯನ್ನು ಹೊಂದಿದೆ. 1876ರಿಂದ 1878ರ ಅವಧಿಯಲ್ಲಿ ಸಂಭವಿಸಿದ ಮಹಾ ಮದ್ರಾಸ್ ಬರಗಾಲದ ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.