ತಾಳಿಕಟ್ಟಿದ ಶುಭವೇಳೆ, ರಶ್ಮಿಕಾ ಕಣ್ಣಲ್ಲಿ ಕಂಬನಿಧಾರೆ; ಎಂಥ ನಟಿಯಾದ್ರೂ ತವರು ತೊರೆಯೋದು ವೇದನೆಯೇ ಸರಿ ಎಂದ ನೆಟ್ಟಿಗರು!

Published : Feb 27, 2026, 05:45 PM IST
Rashmika Mandanna Vijay Deverakonda

ಸಾರಾಂಶ

ಸದ್ಯ ರಶ್ಮಿಕಾ-ವಿಜಯ್ ಕಲ್ಯಾಣ ಮುಗಿದಿದೆ. ಈಗ ಎಲ್ಲರ ಕಣ್ಣು ಇರೋದು ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯೋ ರಿಸೆಪ್ಷನ್​ನತ್ತ. ಸದ್ಯ ಮದುವೆಗೆ ಬಹಳಷ್ಟು ತಾರೆಯರು ಗೈರಾಗಿದ್ದಾರೆ. ಆದ್ರೆ ಆರತಕ್ಷತೆಗೆ ಬಾಲಿವುಡ್, ಟಾಲಿವುಡ್ ಮತ್ತು ನಮ್ಮ ಸ್ಯಾಂಡಲ್​ವುಡ್ ತಾರೆಯರು ಕೂಡ ಸೇರುವ ನಿರೀಕ್ಷೆ ಇದೆ.

ಹೊಸ ಬಾಳಿಗೆ ಕಾಲಿಟ್ಟ Mr & Mrs ದೇವರಕೊಂಡ..!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ರೌಡಿ ಬಾಯ್ ವಿಜಯ್ ದೇವರಕೊಂಡ ಕಲ್ಯಾಣ ಅದ್ದೂರಿಯಾಗಿ ನೆರವೇರಿದೆ. ತಾರಾಜೋಡಿ ಇನ್ಮುಂದೆ ಮಿಸ್ಟರ್ ಅಂಡ್ ಮಿಸೆಸ್ ದೇವರಕೊಂಡ ಅಂತ ಕರೆಸಿಕೊಳ್ಳಲಿದ್ದಾರೆ. ನಿನ್ನೆ ವಿರೋಶ್ ಕಲ್ಯಾಣ ಹೇಗೆಲ್ಲಾ ನಡೀತು. ಯಾರೆಲ್ಲಾ ಮದುವೆಯಲ್ಲಿ ಭಾಗಿಯಾದ್ರು.. ಮದುವೆ ಆಲ್ಬಂ ಹಂಚಿಕೊಂಡು ಮಿಸ್ಟರ್ ಅಂಡ್ ಮಿಸೆಸ್ ದೇವರಕೊಂಡ ಹೇಳಿದ್ದೇನು..? ನೋಡೋಣ ಬನ್ನಿ.

ಅಗ್ನಿಸಾಕ್ಷಿಯಾಗಿ ಸತಿಪತಿಗಳಾದ ರಶ್ಮಿಕಾ-ವಿಜಯ್

ಹೌದು, 8 ವರ್ಷಗಳಿಂದ ಸಿನಿಲೋಕದಲ್ಲಿ ಲವ್ ಬರ್ಡ್ಸ್ ಅಂತ ಕರೆಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿನ್ನೆ ಅಗ್ನಿಸಾಕ್ಷಿಯಾಗಿ ಸತಿ ಪತಿಗಳಾಗಿದ್ದಾರೆ. ಹಸೆಮಣೆ ಏರಿ, ಸಪ್ತಪದಿ ತುಳಿದು ಹೊಸ ಬದುಕನ್ನ ಆರಂಭಿಸಿದ್ದಾರೆ.

ರಾಜಸ್ಥಾನದ ಉದಯಪುರ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ವಿರೋಶ್ ವಿವಾಹ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದಿದೆ., ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ರಶ್ಮಿಕಾ ಕೊರಳಿಗೆ ವಿಜಯ್ ಮೂರುಗಂಟು ಗಳನ್ನ ಕಟ್ಟಿದ್ದಾರೆ.

ಬೆಳಗ್ಗೆ ತೆಲುಗು ಸಂಪ್ರದಾಯ.. ಬಳಿಕ ಕೊಡವ ಶೈಲಿ

ಎರಡೆರಡು ಬಾರಿ ಮದುವೆ ಆದ ತಾರಾ ಜೋಡಿ..!

ಹೌದು ವಿಜಯ್ ದೇವರಕೊಂಡ ಆಂಧ್ರದ ಪದ್ಮಶಾಲಿ ಸಮುದಾಯಕ್ಕೆ ಸೇರಿದವರು. ಬೆಳಗ್ಗೆ ತೆಲುಗು ಸಂಪ್ರದಾಯದಂತೆ ಮದುವೆ ಮುಹೂರ್ತ ನಡೆದರೇ ಬಳಿಕ ಮಂದಣ್ಣ ಫ್ಯಾಮಿಲಿಯ ಕೊಡವ ಸಂಪ್ರದಾಯದ ಪ್ರಕಾರ ಮದುವೆ ಶಾಸ್ತ್ರ ನೆರವೇರಿದೆ.

ವಿರೋಷ್‌ ಜೋಡಿಗೆ ಶುಭಾಶಯಗಳ ಸುರಿಮಳೆ

ವಿಜಯ್ ರಶ್ಮಿಕಾ ಮದುವೆ ಬಳಿಕ ಸಿಹಿ ವಿತರಣೆ..!

ಹೌದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಶ್ಮಿಕಾ ವಿಜಯ್ ಜೋಡಿಗೆ ದೇಶದ ಅನೇಕ ಗಣ್ಯರು ಶುಭಾಷಯ ಕೋರಿದ್ದಾರೆ. ಅಸಲಿಗೆ ರಶ್ಮಿಕಾ ವಿಜಯ್ ಮೊದಲು ಬೇಟಿಯಾಗಿದ್ದು ಗೀತ ಗೋವಿಂದಂ ಸಿನಿಮಾ ಸೆಟ್​ನಲ್ಲಿ. ಈ ಚಿತ್ರವನ್ನ ನಿರ್ಮಾಣ ಮಾಡಿದ್ದು ಗೀತಾ ಆರ್ಟ್ಸ್ ಸಂಸ್ಥೆ. ಸೋ ಗೀತಾ ಆರ್ಟ್ಸ್ ಈ ಜೋಡಿಗೆ ವಿಶೇಷವಾಗಿ ಶುಭಾಷಯ ತಿಳಿಸಿದೆ. ಇನ್ನೂ ಮದುವೆ ಬಳಿಕ ವಿಜಯ್ ಸ್ನೇಹಿತರು ರೆಸಾರ್ಟ್ ಹೊರಗೆ ಸಿಹಿ ಹಂಚಿದ್ದಾರೆ.

ಹೇಗಿತ್ತು ಮದುವೆ ಊಟ..? ರಿಸೆಪ್ಷನ್​ನತ್ತ ಎಲ್ಲರ ನೋಟ..!

ರಶ್ಮಿಕಾ ಮತ್ತು ವಿಜಯ್ ರದ್ದು ಬರೊಬ್ಬರಿ ಮೂರು ದಿನಗಳ ಕಾಲ ನಡೆದ ಅದ್ದೂರಿ ಕಲ್ಯಾಣ. ಉದಯಪುರ ಬಳಿ ಇರೋ ಐಷರಾಮಿ ರೆಸಾರ್ಟ್​​ನಲ್ಲಿ ಮೊದಲ ದಿನ ಒಂದಿಷ್ಟು ಟ್ರೆಂಡಿ ಇವೆಂಟ್​ಗಳು ನಡೆದಿದ್ವು. ವಧು ವರರ ಕುಟುಂಬದ ನಡುವೆ ವಿರೋಶ್ ಲೀಗ್ ಹೆಸರಿನಲ್ಲಿ ಒಂದಿಷ್ಟು ಆಟೋಟಗಳು ನಡೆದ್ವು.

ಎರಡನೇ ದಿನ ಉತ್ತರ ಭಾರತದ ಸಂಪ್ರದಾಯದಂತೆ ಹಳದಿ ಮತ್ತು ಸಂಗೀತ ಕಾರ್ಯಕ್ರಮ ನಡೆದರೇ.. ನಿನ್ನೆ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ ಮುಹೂರ್ತ ನಡೆದಿದೆ. ಇನ್ನೂ ಮದುವೆ ಊಟದಲ್ಲಿ ಕೂಡ ತೆಲುಗು ಮತ್ತು ಕೊಡವ ಸಾಂಪ್ರದಾಯಿಕ ತಿನಿಸುಗಳು ಇದ್ದವು.

ಸದ್ಯ ರಶ್ಮಿಕಾ - ವಿಜಯ್ ಕಲ್ಯಾಣ ಮುಕ್ತಾಯಗೊಂಡಿದೆ. ಇನ್ನೂ ಎಲ್ಲರ ಕಣ್ಣು ಇರೋದು ಮಾರ್ಚ್ 4ರಂದು ಹೈದರಾಬಾದ್​​ನಲ್ಲಿ ನಡೆಯೋ ರಿಸೆಪ್ಷನ್​ನತ್ತ. ಸದ್ಯ ಮದುವೆಗೆ ಬಹಳಷ್ಟು ತಾರೆಯರು ಗೈರಾಗಿದ್ದಾರೆ. ಆದ್ರೆ ಆರತಕ್ಷತೆ ದಿನ ಬಾಲಿವುಡ್, ಟಾಲಿವುಡ್ ಮತ್ತು ನಮ್ಮ ಸ್ಯಾಂಡಲ್​ವುಡ್ ತಾರೆಯರು ಕೂಡ ಸೇರುವ ನಿರೀಕ್ಷೆ ಇದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚುನಾವಣೆಗೂ ಮುನ್ನ Thalapathy Vijay ಬಾಳಲ್ಲಿ ಬಿರುಗಾಳಿ; ಹಿಂದು ಅಭಿಮಾನಿಯ ಧರ್ಮದಂತೆ ಮದುವೆಯಾಗಿದ್ದ ನಟ!
ರಶ್ಮಿಕಾ ಕರೆದಿಲ್ಲ, ಶೆಟ್ಟರ ಗ್ಯಾಂಗ್ ಹೋಗಿಲ್ಲ.. ಮುಗಿದಿಲ್ವಾ ಮುನಿಸು? ಕಿರಿಕ್‌ ಕಂಟಿನ್ಯೂ ಆಯ್ತಾ..!