ಖ್ಯಾತ ನಟನ ಪುತ್ರ ಸೇರಿ ಮೂವರು ದೇವಸ್ಥಾನ ಆವರಣದಲ್ಲಿ ಗಾಂಜಾ ಸಮೇತ ಅರೆಸ್ಟ್

Published : Feb 27, 2026, 04:22 PM ISTUpdated : Feb 27, 2026, 04:31 PM IST
police jeep

ಸಾರಾಂಶ

ಖ್ಯಾತ ನಟನ ಪುತ್ರ ಸೇರಿ ಮೂವರು ದೇವಸ್ಥಾನ ಆವರಣದಲ್ಲಿ ಗಾಂಜಾ ಸಮೇತ ಅರೆಸ್ಟ್, ಕಾರ್ತಿಕ್, ಅಮಿತ್ ಜಾರ್ಜ್ ಮತ್ತು ಆಡಮ್ ಶೀಮ್ ಬಂಧಿತ ಯುವಕರು. ಇವರಿಂದ 4 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 

ಕೊಚ್ಚಿ(ಫೆ.27) ಖ್ಯಾತ ಕಾಮಿಡಿ ನಟನ ಪುತ್ರ ಗಾಂಜಾ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ದೇವಸ್ಥಾನದ ಆವರಣದಲ್ಲೇ ಗಾಂಜಾ ಜೊತೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಖ್ಯಾತ ನಟನ ಪುತ್ರನ ಜೊತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೌದು, ಮಲೆಯಾಳಂ ಸಿನಿಮಾ ಇಂಡಸ್ಟ್ರೀಯ ಖ್ಯಾತ ನಟ, ಕಾಮಿಡಿಯನ್ ಟಿನಿ ಟಾಮ್ ಪುತ್ರ ಆ್ಯಡಮ್ ಶೀಮ್ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಕಾರ್ತಿಕ್, ಅಮಿತ್ ಜಾರ್ಜ್ ಮತ್ತು ಆಡಮ್ ಶೀಮ್ ಬಂಧಿತರು.

ತಿರುವಾಂಕುಳ ದೇವಸ್ಥಾನ ಆವರಣದಲ್ಲೇ ಅರೆಸ್ಟ್

ಪೊಲೀಸರು ಆರೋಪಿಗಳಿಂದ ನಾಲ್ಕು ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ತಿಂಗಳ 22ರಂದು ತ್ರಿಪ್ಪೂಣಿತ್ತರಾ ಹಿಲ್ ಪ್ಯಾಲೇಸ್ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ. ತಿರುವಾಂಕುಳಂನ ದೇವಸ್ಥಾನವೊಂದರ ಬಳಿ ಇವರು ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ಬಳಿಕ ಪೊಲೀಸರು ಮೂವರನ್ನೂ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಕೇರಳದಲ್ಲಿ ಗಾಂಜಾ ಮಾರಾಟ, ಗಾಂಜ ಜೊತೆಗಿನ ಕಳ್ಳವ್ಯವಾರಗಳು ಎಗ್ಗಿಲ್ಲದೆ ನಡೆಯತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಈ ಅರೆಸ್ಟ್ ತೀವ್ರ ಕೋಲಾಹಲ ಸೃಷ್ಟಿಯಾಗಿದೆ.

ಕೇರಳ ಸಿನಿಮಾ ಇಂಡಸ್ಟ್ರಿ ಮೇಲೆ ಕರಿನೆರಳು

ಮಲೆಯಾಳಂ ಸಿನಿಮಾ ಇಂಡಸ್ಟ್ರೀಯಲ್ಲಿ ಡ್ರಗ್ಸ್ ಜಾಲ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಆರೋಪಕ್ಕೆ ಈ ಘಟನೆ ಪುಷ್ಠಿ ನೀಡಿದೆ. 2025ರ ಎಪ್ರಿಲ್ ತಿಂಗಳಲ್ಲಿ ಮಲೆಯಾಳಂ ಖ್ಯಾತ ನಟ ಶೈನ್ ಟಾಮ್ ಚಾಕೋ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದರು. ಕೇರಳ ನರ್ಕೋಟಿಕ್ಸ್ ಪೊಲೀಸರು ಖಚತ ಮಾಹಿತಿ ಪಡೆದು ಖಾಸಗಿ ಹೊಟೆಲ್ ಒಂದರ ಮೇಲೆ ದಾಳಿ ನಡೆಸಿದ್ದರು. ಶೈನ್ ಟಾಮ್ ಚಾಕೋ ಡ್ರಗ್ಸ್ ಬಳಕೆ ಮಾರಾಟ ಪ್ರಕರಣದಡಿ ಈ ದಾಳಿ ನಡೆದಿತ್ತು. ಆದರೆ ದಾಳಿ ಸುಳಿವು ಸಿಗುತ್ತಿದ್ದಂತೆ ಶೈನ್ ಟಾಮ್ ಚಾಕೋ ಪರಾರಿಯಾಗಿದ್ದರು. ಬಳಿಕ ತೀವ್ರ ಹುಡುಕಾಟ ನೆಡೆಸಿದ ಪೊಲೀಸರು ಶೈನ್ ಟಾಮ್ ಚಾಕೋ ಬಂಧಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರಾಮ-ಸೀತೆ' ನೋಡಿದಂತೆ ಆಗ್ತಿದೆ.. ರಶ್ಮಿಕಾ-ವಿಜಯ್ ಮದುವೆ ಫೋಟೋ ನೋಡಿ ಬಾಲಿವುಡ್‌ ಪೇಜ್ ಜೈಕಾರ!
ವಿರಾಟ್ ಅನುಷ್ಕಾ, ರಣ್ಬೀರ್ ಕಪೂರ್ ಅಲಿಯಾ ದಾಖಲೆ ಬ್ರೇಕ್ ಮಾಡಿದ ವಿಜಯ್ ದೇವರಕೊಂಡ ರಶ್ಮಿಕಾ