ಟೀನೇಜ್ ಗೆ ಕಾಲಿಟ್ಟ ಶಿಮನ್.. ಮುದ್ದಿನ ತಂಗಿಗಾಗಿ Rashmika Mandanna ಗ್ರ್ಯಾಂಡ್ ಬರ್ತ್ ಡೇ ಪಾರ್ಟಿ

Published : May 04, 2026, 02:07 PM IST
Rashmika Mandanna

ಸಾರಾಂಶ

Rashmika Mandanna: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ತಂಗಿಯ 13 ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು. ಈ ವಿಶೇಷ ಸಂದರ್ಭದಲ್ಲಿ, ಅವರು ತಮ್ಮ ತಂಗಿಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

ಶಿಮನ್ ಹುಟ್ಟುಹಬ್ಬಕ್ಕೆ ಮುದ್ದಾಗಿ ಶುಭ ಕೋರಿದ ರಶ್ಮಿಕಾ ಮಂದಣ್ಣ

ದಕ್ಷಿಣದ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ತಂಗಿಯ ವಿಶೇಷ ದಿನಕ್ಕಾಗಿ ಸಮಯ ಮೀಸಲಿಟ್ಟು, ತಂಗಿ ಜೊತೆ ಸಮಯ ಕಳೆದಿದ್ದಾರೆ. ರಶ್ಮಿಕಾ ಮಂದಣ್ಣ ತಂಗಿ ಶಿಮನ್ ಮಂದಣ್ಣ ಅವರಿಗೆ 13 ವರ್ಷ ತುಂಬಿದೆ. ಮೇ 2 ರಂದು, ರಶ್ಮಿಕಾ ತಮ್ಮ ಸಹೋದರಿಯ 13 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ, ಅದ್ದೂರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿರುವ ರಶ್ಮಿಕಾ ಮಂದಣ್ಣ, ಫೋಟೊಗಳ ಜೊತೆಗೆ ತಂಗಿಗೆ ವಿಶೇಷವಾದ ಮೆಸೇಜ್ ಕೂಡ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ತಂಗಿಯ ಹುಟ್ಟುಹಬ್ಬದ ಸ್ಪೆಷಲ್ ಪೋಸ್ಟ್

ರಶ್ಮಿಕಾ ಮಂದಣ್ಣ ಶನಿವಾರ ತಮ್ಮ 13 ನೇ ಹುಟ್ಟುಹಬ್ಬದಂದು ತಮ್ಮ ತಂಗಿ ಶಿಮಾನ್ ಮಂದಣ್ಣ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಮುದ್ದಾದ ಪೋಸ್ಟ್ ಮೂಲಕ ಶುಭ ಹಾರೈಸಿದ್ದಾರೆ. ಟೀನೇಜ್ ಗೆ ಕಾಲಿಡುತ್ತಿರುವ ತಂಗಿಗೆ ಸ್ಪೆಷಲ್ ಆಗಿ ಶುಭ ಕೋರಿದ್ದಾರೆ. ಅಂದಹಾಗೇ ಇದೇ ಮೊದಲ ಬಾರಿಗೆ ತಂಗಿಯ ಬರ್ತ್ ಡೇ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, ಶಿಮಾನ್ ಹುಟ್ಟುಹಬ್ಬದ ಕೇಕ್‌ನೊಂದಿಗೆ, ಮುಖದಾದ್ಯಂತ ಕೇಕ್ ಹಚ್ಚಿಕೊಂಡು ಪೋಸ್ ನೀಡುತ್ತಿರುವುದು ಫೋಟೊಗಳು ಕಂಡು ಬಂದಿದೆ. ಜೊತೆ ರಶ್ಮಿಕಾ ತಮ್ಮ ತಂಗಿಗಾಗಿ ಬರೆದ ಸಾಲುಗಳು ಗಮನ ಸೆಳೆದಿವೆ.

ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ, "ನನ್ನ ಪ್ರೀತಿಯ ತಂಗಿಗೆ 13 ನೇ ಹುಟ್ಟುಹಬ್ಬದ ಶುಭಾಶಯಗಳು. 13 ವರ್ಷ ವಯಸ್ಸಾಗಿರುವುದು ಖುಷಿ ಕೊಡುತ್ತದೆ, ಆದ್ದರಿಂದ ಅದನ್ನು ಆನಂದಿಸು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ಸ್ವೀಟ್ಸ್. ಲಾಡ್ಸ್ ಆಫ್ ಹಗ್ಸ್" (Happiest 13 to you my sweets! 13 is fun so make sure you have fun while you are at it! I love you sweetie!! Biigggggesssstttt swiiisssshhhhy hugs) ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.

ರಶ್ಮಿಕಾ ಮತ್ತು ಶಿಮನ್ ನಡುವೆ ತುಂಬಾನೇ ವಯಸ್ಸಿನ ಅಂತರ ಇದೆ. ಸಹೋದರಿ ಗಿಂತ ರಶ್ಮಿಕಾ16 ವರ್ಷ ದೊಡ್ಡವರು. ಶಿಮಾನ್ ಇತ್ತೀಚೆಗೆ ಉದಯಪುರದಲ್ಲಿ ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ಅವರ ಮದುವೆಗೆ ಹಾಜರಾಗಿದ್ದರು. ರಶ್ಮಿಕಾ ಮಂದಣ್ಣ ತನ್ನ ಸಹೋದರಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಆಗಾಗ್ಗೆ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಶಿಮನ್ ಕೂಡ ತಮ್ಮ ಅಕ್ಕ ಮತ್ತು ಭಾವನ ಬಗ್ಗೆ ಇತ್ತೀಚೆಗೆ ವಿಶೇಷವಾದ ಪೋಸ್ಟ್ ಹಂಚಿಕೊಂಡು ಸುದ್ದಿಯಲ್ಲಿದ್ದರು. ಇನ್ನು ಕೆಲಸದ ವಿಚಾರಕ್ಕೆ ಬಂದರೆ, ನಟಿ ಮೈಸಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದಲ್ಲದೆ, ರಶ್ಮಿಕಾ ಮೊದಲ ಬಾರಿಗೆ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ "ಕಾಕ್ಟೇಲ್ 2" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು 2012 ರ ರೊಮ್ಯಾಂಟಿಕ್ ಕಾಮಿಡಿ "ಕಾಕ್ಟೇಲ್" ನ ಮುಂದುವರಿದ ಭಾಗವಾಗಿದೆ, ಆ ಸಿನಿಮಾದಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟಿಸಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದೇ ಒಂದು ಪದದಿಂದ ಜನರ ಮನಸ್ಸನ್ನು ಬದಲಿಸಿದ Thalapathy Vijay; ಆಡಳಿತದಲ್ಲಿದ್ದ ಪಕ್ಷಕ್ಕೆ ಪೆಟ್ಟು ಕೊಟ್ಟ ನಟ
ತ್ರಿಶಾಳಿಂದಲೇ ವಿಜಯ್‌ ಸಂಸಾರದಲ್ಲಿ ಬಿರುಕು; Thalapathy Vijay ಗೆಲ್ಲುತ್ತಲೇ ದಳಪತಿ ಮನೆಗೆ ಬಂದ ನಟಿ!