
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಸುದ್ದಿಯಲ್ಲಿದ್ದು, ಫೆಬ್ರವರಿ 26 ರಂದು ವಿವಾಹ ಸಮಾರಂಭ ನಡೆಯಲಿದೆ. ಅವರ ವಿವಾಹಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈಗಾಗಲೇ ಮದುವೆಯ ಆಚರಣೆಗಳು ಸಹ ಆರಂಭವಾಗಿವೆ ಎನ್ನುವ ವರದಿ ಕೂಡ ಇದೆ. ಇತ್ತೀಚೆಗೆ, ಈ ಜೋಡಿ ತಮ್ಮ ಅತಿಥಿಗಳಿಗಾಗಿ ಭವ್ಯ ಡಿನ್ನರ್ ಅಯೋಜಿಸಿದ್ದು, ಇದಕ್ಕಾಗಿ ದೇಶಾದ್ಯಂತದ ಪ್ರಸಿದ್ಧ ಶೆಫ್ ಗಳನ್ನು ಕರೆಸಿದ್ದರು. ಇನ್ನೆರಡು ದಿನದಲ್ಲಿ ಈ ಜೋಡಿ ಮದುವೆಯಾಗಲಿದ್ದು ವರದಿಗಳ ಪ್ರಕಾರ ಮದುವೆ ಸಂಪೂರ್ಣವಾಗಿ ಖಾಸಗಿಯಾಗಿ ನಡೆಯಲಿದ್ದು, "ನೋ ಫೋನ್" ಎಂಬ ರೂಲ್ಸ್ ಹೊಂದಿದೆ, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ವರದಿಗಳ ಪ್ರಕಾರ, ದಂಪತಿಗಳು ಉದಯಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳ ನಡುವೆ ಇರುವ ಐಷಾರಾಮಿ ರೆಸಾರ್ಟ್ ಐಟಿಸಿ ಮೆಮೆಂಟೋಸ್ ಏಕಾಯದಲ್ಲಿ (ITC Mementos Ekaaya) ವಿವಾಹವಾಗಲಿದ್ದಾರೆ. ಇದು ಜನಸಂದಣಿಯಿಂದ ದೂರದಲ್ಲಿರುವ ರಾಜಮನೆತನದ ಆಸ್ತಿಯಾಗಿದೆ. ಈ ಹೋಟೆಲ್ ಹಲವಾರು ಭವ್ಯ ವಿವಾಹಗಳನ್ನು ಆಯೋಜಿಸಿದೆ. ಈ ಭವ್ಯ ಹೋಟೆಲ್‌ನಲ್ಲಿ ಅತಿಥಿಗಳಿಗಾಗಿ ಐಷಾರಾಮಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ, ಅದರಲ್ಲಿರುವ ವ್ಯಾಲಿ ವ್ಯೂ ವಿಲ್ಲಾ ಕೋಣೆಯ ಬೆಲೆ ಒಂದು ರಾತ್ರಿಗೆ ಎಷ್ಟು ಎಂದು ನಿಮಗೆ ತಿಳಿದಿದೆಯೇ? ಈ ಹೋಟೆಲ್ ತುಂಬಾ ಐಷಾರಾಮಿ ಮತ್ತು ದುಬಾರಿಯಾಗಿದ್ದು, ಇಲ್ಲಿ ಒಂದು ರಾತ್ರಿಯ ವಾಸ್ತವ್ಯವು ಸಾಮಾನ್ಯ ವ್ಯಕ್ತಿಯ ವಾರ್ಷಿಕ ಸಂಬಳಕ್ಕಿಂತ ಹೆಚ್ಚಿನ ಮೊತ್ತದ್ದಾಗಿದೆ. .
ಈ ಹೋಟೆಲ್ 117+ ಖಾಸಗಿ ವಿಲ್ಲಾಗಳು ಮತ್ತು ಸೂಟ್‌ಗಳನ್ನು ಹೊಂದಿದ್ದು, ಸಂಪೂರ್ಣ ಗೌಪ್ಯತೆ ಮತ್ತು ಐಷಾರಾಮಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ವಿಲ್ಲಾ/ಸೂಟ್ ಅರಾವಳಿ ಬೆಟ್ಟಗಳು ಮತ್ತು ಸರೋವರಗಳ ಸುಂದರ ನೋಟಗಳನ್ನು ನೀಡುತ್ತದೆ. ಹೋಟೆಲ್ ದೊಡ್ಡ ಬಾಲ್ ರೂಂಗಳು, ಹೊರಾಂಗಣ ಹುಲ್ಲುಹಾಸುಗಳು, ಖಾಸಗಿ ಉದ್ಯಾನಗಳು, ಈಜುಕೊಳ ಮತ್ತು ಈವೆಂಟ್ ಸ್ಥಳಗಳನ್ನು ಹೊಂದಿದೆ, ಇದು ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಸೂಕ್ತವಾಗಿದೆ. ಹೋಟೆಲ್‌ನ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಿದ್ರೆ, ಇಲ್ಲಿನ ರೂಮಿನ ಬೆಲೆ 26,000 ರೂಪಾಯಿ ಎಂದು ಬರೆಯಲಾಗಿದೆ. ಆದರೆ ಅದು ಈ ಹೊಟೇಲ್ ನ ಕ್ಲಬ್ ಸದಸ್ಯರಿಗೆ ಮಾತ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.