
ಬಿಗ್‌ಬಾಸ್ ಜೋಡಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪತ್ ಶನಿವಾರ ಮತ್ತೊಂದು ಡೇಟ್‌ಗಾಗಿ ಜೊತೆಯಾದರು. ಎರಡು ದಿನಗಳಲ್ಲಿ ಒಟ್ಟಾಗಿ ಎರಡನೇ ಬಾರಿಗೆ, ರಾಕೇಶ್ ಮತ್ತು ಶಮಿತಾ ರೆಸ್ಟೋರೆಂಟ್‌ಗೆ ಭೇಟಿ ನೀಡದೆ ಸಲೂನ್‌ಗೆ(Salon) ಭೇಟಿ ನೀಡಿದ್ದಾರೆ. ಬಿಗ್‌ಬಾಸ್(Biggboss) ಮನೆಯಿಂದ ಹೊರಗೆ ಬಂದ ನಂತರ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು ಜೊತೆಯಾಗಿ ಸುತ್ತಾಡುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಇಬ್ಬರೂ ತಮ್ಮ ಸಲೂನ್ ಸೆಷನ್‌ನಿಂದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಕೇಶ್ ಒಂದು ಟ್ರಿಮ್ ಪಡೆದರೆ ಶಮಿತಾ ಹೇರ್ ಕಲರಿಂಗ್ ಮಾಡಿಸಿಕೊಂಡಿದ್ದಾರೆ. ಅವಳು ಆಫ್-ಶೋಲ್ಡರ್ ಹೂವಿನ ಬಿಳಿ ಉಡುಪನ್ನು ಧರಿಸಿದ್ದರೆ, ರಾಕೇಶ್ ನೀಲಿ ಜೀನ್ಸ್‌ನೊಂದಿಗೆ ಕಪ್ಪು ಹೂಡಿಯನ್ನು ಧರಿಸಿದ್ದರು.
ಬಿಗ್‌ಬಾಸ್ ಮನೆಯಲ್ಲಿ ಶಮಿತಾ: 1 ವಾರಕ್ಕೆ ಲಕ್ಷಗಟ್ಟಲೆ ಸಂಪಾದಿಸ್ತಾರೆ ಶಿಲ್ಪಾ ತಂಗಿ
ಸಲೂನ್ ಹೊರಗೆ ಜೋಡಿ ಪಾಪರಾಜಿಯನ್ನು ಭೇಟಿಯಾದರು. ಅವರು ಚಿತ್ರಗಳಿಗೆ ಪೋಸ್ ನೀಡುವಂತೆ ಕೇಳಿದರು. ಶಮಿತಾಗೆ ಗುಟ್ಟಾಗಿ ಕಿವಿಯಲ್ಲಿ ರಾಕೇಶ್ ಹಾಸ್ಯ ಮಾಡಿದ್ದು ಇದರಿಂದ ಅವಳು ನಗುವುದನ್ನು ಕಾಣಬಹದು.
ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಕಳೆದ ತಿಂಗಳು ಬಿಗ್ ಬಾಸ್ ಒಟಿಟಿ ಮನೆಯೊಳಗೆ ಭೇಟಿಯಾಗಿದ್ದರು. ಪರಸ್ಪರ ಅವರನ್ನು ಕಾರ್ಯಕ್ರಮದಲ್ಲಿ ಪರಿಚಯಿಸಲಾಗಿತ್ತು. ಅವರಿಬ್ಬರೂ ಶೀಘ್ರದಲ್ಲೇ ಹತ್ತಿರವಾದರು. ಮನೆಯೊಳಗೆ ಜೊತೆಯಾಗಿದ್ದ ಜೋಡಿ ಹೊರಗೆ ಬಂದ ಮೇಲೂ ಡೇಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.