ಕಾಂತಾರ ದೈವವನ್ನು 'ದೆವ್ವ' ಎಂದು ಅವಹೇಳನ.. ರಣವೀರ್ ಸಿಂಗ್ ವಿರುದ್ಧ ಭುಗಿಲೆದ್ದ ಆಕ್ರೋಶ!

Published : Nov 30, 2025, 11:54 AM ISTUpdated : Nov 30, 2025, 12:04 PM IST
Ranveer Singh Rishab Shetty

ಸಾರಾಂಶ

ರಣವೀರ್ ಸಿಂಗ್ ಅವರು 'ದೈವ'ವನ್ನು 'ದೆವ್ವ' ಎಂದಿದ್ದಲ್ಲದೇ ರಿಷಬ್ ಎದುರಿನಲ್ಲೇ ಅವರನ್ನು ಅನುಕರಣೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿ, ನಟ ರಣವೀರ್ ಸಿಂಗ್ ಬಗ್ಗೆ ಕ್ರೋಧ ಭುಗಿಲೆದ್ದಿದೆ.

ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ 'ಕಾಂತಾರ 1' ಚಿತ್ರದ ದೈವವನ್ನು 'ಸ್ತ್ರೀ ದೆವ್ವ' ಎಂದು ಕರೆದು (Female Ghost) ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಅಪಹಾಸ್ಯ ಮಾಡಿ ಭಾರೀ ಯಡವಟ್ಟು ಮಾಡಿಕೊಂಡಿದ್ದಾರೆ. ಶುಕ್ರವಾರ ಗೋವಾದಲ್ಲಿ ನಡೆದ IFFI 2025ರ ಸಮಾರೋಪ ಸಮಾರಂಭದಲ್ಲಿ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಭಾಗಿಯಾಗಿದ್ದರು. ಆ ವೇಳೆ, ರಿಷಬ್ ಎದುರಿನಲ್ಲೇ ಕಾಂತಾರ ಸೀಕ್ವೆಲ್‌ ಬಗ್ಗೆ, ರಿಷಬ್ ಶೆಟ್ಟಿಯವರ ನಟನೆಯನ್ನು ಹೊಗಳಿ ಮಾತನ್ನಾಡಿದ್ದಾರೆ. ಇದೇ ವೇಳೆ ರಿಷಬ್ ನಟನೆ ಹೊಗಳುತ್ತ ಅನುಕರಣೆ ಮಾಡುತ್ತ ಅದರಲ್ಲಿ ಇರುವ 'ದೈವ'ವನ್ನು 'ಫೀಮೇಲ್ ಘೋಸ್ಟ್' ಎಂದು ಗೇಳಿ ಭಾರೀ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ರಣವೀರ್ ಸಿಂಗ್ ಅವರು 'ದೈವ'ವನ್ನು 'ದೆವ್ವ' ಎಂದಿದ್ದಲ್ಲದೇ ರಿಷಬ್ ಎದುರಿನಲ್ಲೇ ಅವರನ್ನು ಅನುಕರಣೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿ, ನಟ ರಣವೀರ್ ಸಿಂಗ್ ಬಗ್ಗೆ ಹಲವು ಜನರು ತೀರಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಅದೀಗ ವಿವಾದವಾಗುವತ್ತ ಸಾಗಿದೆ.

ರಣವೀರ್ ಸಿಂಗ್ ಅವರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ತೀವ್ರ ಚರ್ಚೆ ಆರಂಭವಾಗಿದೆ. ‘ದಕ್ಷಿಣ ಭಾರತದ ದೇವರು, ದೈವಗಳ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದೇ ಸಾರ್ವಜನಿಕ ವೇದಿಕೆಗಳಲ್ಲಿ ಹೀಗೆ ಮನಸ್ಸಿಗೆ ಬಂದಂತೆ ಮಾತನ್ನಾಡುವುದು ತಪ್ಪು. ಚಾಮುಂಡಿ ದೈವವನ್ನು ’ಫೀಮೇಲ್ ಘೋಸ್ಟ್' ಎಂದರೆ ಏನರ್ಥ? ನಟರುಗಳು, ಅಥವಾ ಯಾವುದೇ ಸೆಲೆಬ್ರಟಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತನ್ನಾಡುವ ಮೊದಲು ಆ ಬಗ್ಗೆ ಅಗತ್ಯವಿರುವ ಮಾಹಿತಿ ಹೊಂದಿರಬೇಕು' ಹಲವರು ಕಾಮೆಂಟ್ ಮಾಡಿದ್ದಾರೆ. 

ಗೋವಾದ ಈವೆಂಟ್‌ನಲ್ಲಿ ನಟ ರಣವೀರ್ ಅವರು ರಿಷಬ್ ಶೆಟ್ಟಿ ಹಾಗು ಕಾಂತಾರವನ್ನು ಸಾಕಷ್ಟು ಹೊಗಳಿದ್ದಾರೆ. ಅಲ್ಲಿ ಅವರು ಕಾಂತಾರದಲ್ಲಿ ರಿಷಬ್ ನಟನೆ ಹೊಗಳುತ್ತ ಅದನ್ನು ಅನುಕರಣೆ ಮಾಡುತ್ತ ಚಾಮುಂಡಿ ದೈವಕ್ಕೆ ಸ್ತ್ರೀ ದೆವ್ವ ಎಂದು ಹೇಳಿರೋದು ಈಗ ವಿವಾದಕ್ಕೆ ಗುರಿಯಾಗಿದೆ. ‘ಹೊಗಳೊ ಹೊಗಳಿ ಹೊನ್ನ ಶೂಲಕ್ಕೆ ಏರಿದರಯ್ಯಾ’ ಎಂಬಂತೆ, ಕಾಂತಾರ ಹಾಗು ರಿಷಬ್ ಅವರನ್ನು ಹೊಗಳುವ ಭರದಲ್ಲಿ ನಟ ರಣವೀರ್ ಸಿಂಗ್ ಸರಿಯಾದ ಮಾಹಿತಿ ಪಡೆದುಕೊಳ್ಳದೇ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?